Home
Categories
EXPLORE
True Crime
Comedy
Society & Culture
Business
Sports
Technology
Health & Fitness
About Us
Contact Us
Copyright
© 2024 PodJoint
00:00 / 00:00
Podjoint Logo
US
Sign in

or

Don't have an account?
Sign up
Forgot password
https://is1-ssl.mzstatic.com/image/thumb/Podcasts221/v4/e0/82/62/e08262ac-ca4e-bcc8-2be4-aea2b5b848b6/mza_7008668716281395212.jpg/600x600bb.jpg
SatisHFaction Kannada Podcast from the US
Satish Hosanagara
84 episodes
6 days ago
The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.
Show more...
Personal Journals
Society & Culture
RSS
All content for SatisHFaction Kannada Podcast from the US is the property of Satish Hosanagara and is served directly from their servers with no modification, redirects, or rehosting. The podcast is not affiliated with or endorsed by Podjoint in any way.
The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.
Show more...
Personal Journals
Society & Culture
Episodes (20/84)
SatisHFaction Kannada Podcast from the US
ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ (Innovation)

ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ


ಕಳೆದ ತಿಂಗಳು (ಸೆಪ್ಟೆಂಬರ್ 19) ಪ್ರೆಸಿಡೆಂಟ್ ಟ್ರಂಪ್ H1B ವೀಸಾಕ್ಕೆ ಸಂಬಂಧಿಸಿದ ರಿಸ್ಟ್ರಿಕ್ಷನ್‌ಗಳನ್ನು ಅಳವಡಿಸಿದಾಗ, ಮೈನ್‌ಸ್ಟ್ರೀಮ್ ಅಮೇರಿಕದ ವೃತ್ತಪತ್ರಿಕೆಗಳಲ್ಲಿ ಈ ನಿಲುವಿಗೆ ಪೂರಕವಾಗಿ ಅನೇಕ ದನಿಗಳು ಎದ್ದಿದ್ದವು. ಹಾಗೇ ಜನರ ಬೆಂಬಲ ಕೂಡ ವ್ಯಕ್ತವಾಗಿತ್ತು. ಹೀಗೆ, ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಓದಿಕೊಂಡು ಬಂದ ಒಂದು ಲೇಖನಕ್ಕೆ ಉತ್ತರವೆಂಬಂತೆ ಒಂದಿಷ್ಟು ಜನರು ಕಾಮೆಂಟ್ ಹಾಕಿದ್ದರು. ಅದರಲ್ಲೊಬ್ಬರು, ಭಾರತದಂತಹ ದೇಶಗಳು ಅಷ್ಟೊಂದು ಇಂಜಿನಿಯರುಗಳನ್ನು ಹುಟ್ಟು ಹಾಕುವುದೇ ಹೌದಾದರೆ, ಆ ದೇಶದಲ್ಲಿ ಅಷ್ಟೊಂದು ಇನ್ನೋವೇಷನ್ ಏಕೆ ಇನ್ನೂ ಹುಟ್ಟೋದಿಲ್ಲ ಎನ್ನೋ ರೀತಿಯಲ್ಲಿ ಅನಿಸಿಕೆ ಬರೆದಿದ್ದರು. ನಮ್ಮಲ್ಲಿ ಉತ್ಪಾದನೆಗೊಳ್ಳುವ ಗ್ರಾಜುಯೇಟುಗಳು, ಇಂಜಿನಿಯರುಗಳನ್ನು ನಾವು ಸಮರ್ಪಕವಾಗಿ ಬಳಸುತ್ತಿದ್ದೇವೆಯೇ? ಇನ್ನೋವೇಶನ್ ಅನ್ನೋ ವಿಚಾರಕ್ಕೆ ಬಂದರೆ, ಪ್ರಪಂಚದ ಎಲ್ಲ ದೇಶಗಳಿಗೆ ಕಂಪೇರ್ ಮಾಡಿದರೆ ಭಾರತ ಎಷ್ಟನೇ ಸ್ಥಾನದಲ್ಲಿ ನಿಲ್ಲುತ್ತದೆ.


ಇನ್ನೋವೇನ್ ಅನ್ನೋದು ಒಂದು ರೀತಿಯ ಹೊಸ ಕಲ್ಪನೆ, ನಾವೀನ್ಯತೆ, ಹೊಸ ಬದಲಾವಣೆ ಇದ್ದ ಹಾಗೆ. ನಾವುಗಳು ನಮ್ಮ ದೈನಂದಿನ ಜೀವನದಲ್ಲಿ status quo ಅನ್ನು ಎಷ್ಟರ ಮಟ್ಟಿಗೆ ಪ್ರಶ್ನಿಸುತ್ತೇವೆ ಎನ್ನುವಲ್ಲಿಯಿಂದ ಈ ಹೊಸ ಶೋಧ ಆರಂಭವಾಗುತ್ತದೆ.


ಹಾಗಾದರೆ, ಬರೀ ಹೀಗೆ ಮಾಡು ಎಂದು ಹೇಳಿಕೊಟ್ಟ ಚೋರ್‌ಗಳನ್ನು ಮಾಡೋದರಲ್ಲಿ ಮಾತ್ರ ನಾವು ನಿಸ್ಸೀಮರೇ?


ಒಂದು ಅಧ್ಯಯನದ ಪ್ರಕಾರ, ಜಗತ್ತಿನ ಅತಿ ಇನ್ನೋವೇಟಿವ್ ದೇಶಗಳಲ್ಲಿ ಸ್ವಿಟ್ಜರ್‌ಲ್ಯಾಂಡ್, ಸ್ವೀಡನ್, ಯುಎಸ್.ಎ. ಸೌತ್ ಕೊರಿಯಾ, ಸಿಂಗಪೂರ್, ಯುಕೆ, ಫ಼ಿನ್‌ಲ್ಯಾಂಡ್, ನೆದರ್‌ಲ್ಯಾಂಡ್, ಡೆನ್ಮಾರ್ಕ್ ಹಾಗೂ ಇತ್ತೀಚೆಗೆ ಚೈನಾ ದೇಶದ ಹೆಸರೂ ಕೇಳಿಬರುತ್ತದೆ.


ತಮ್ಮ ತಮ್ಮ ಆಂತರಿಕ ಸ್ಟ್ರಗಲ್‌ಗಳು ಎಷ್ಟೇ ಇರಲಿ, ಈ ದೇಶಗಳಿಗೆ ಯಾವಾಗಲಾದರೂ ಸ್ವಾತಂತ್ರ್ಯ ಬಂದಿದ್ದಿರಲಿ, ಇವುಗಳೆಲ್ಲವೂ ತಮ್ಮ ತಮ್ಮ ನೆಲೆಯಲ್ಲಿ, ಹೊಸದೊಂದನ್ನು ಹುಡುಕಿಕೊಂಡು, ಅದರಲ್ಲಿ ಯಶಸ್ವಿಗೊಂಡವು. ಚೈನಾದಂತಹ ದೇಶದಲ್ಲಿ, ಸರ್ಕಾರವೇ ಈ ಬಗೆಗೆ ಪ್ರಾಶಸ್ತ್ಯ ಕೊಟ್ಟಿರಲೂ ಬಹುದು. ಹೊರಗಿನಿಂದ ನಾವು ಟೆಕ್ನಾಲಜಿಗಳನ್ನು ಆಮದು ಮಾಡಿಕೊಳ್ಳೋದಿಲ್ಲ, ಎನ್ನುವ ಒಂದೇ ಒಂದು ಮೂಲಮಂತ್ರ ಇನ್ನೋವೇಶನ್ ಅನ್ನು ಪ್ರೋತ್ಸಾಹಿಸಬಹುದು.


ಆದರೆ, ಭಾರತದಲ್ಲಿ, ನಾವು ಬೆಳೆದು ಬಂದ ಬಗೆಯನ್ನು ಗಮನಿಸಿದರೆ, ನಮ್ಮನ್ನೆಲ್ಲ ಸೈಕಾಲಜಿ ಮಟ್ಟದಲ್ಲಿ, ಮತ್ತು ಸೈದ್ಧಾಂತಿಕವಾಗಿ ಸದಾ ಹೆದರಿಸಿ ಇಡಲಾಗುತ್ತಿತ್ತು. ಈ ಹೆದರಿಕೆಯಲ್ಲಿ ಕೆಲವೊಮ್ಮೆ ನಾವು ನಿಜ ಹೇಳುವುದಕ್ಕೂ ಹಿಂಜರಿಯುತ್ತಿದ್ದೆವು.


ನಿಮಗನ್ಸತ್ತಾ?

The environment that we grew up with accommodated questioning?

Did we even think about innovation at that time?

Or, do we challenge the status quo now?


I agree, fear is necessary, but it should not become a bottleneck limiting one's creativity.

Show more...
6 days ago
13 minutes 40 seconds

SatisHFaction Kannada Podcast from the US
ನಮ್ಮ ದೀಪಾವಳಿಯ ಆಚರಣೆ (84)

ನಮ್ಮ ದೀಪಾವಳಿಯ ಆಚರಣೆ


ಒಂದು ಕಾಲದಲ್ಲಿ ನರಕಚತುರ್ದಶಿಯ ದಿನ ಬೆಳಗ್ಗೆ ಬೇಗ ಎದ್ದು, ಚುಮು ಚುಮು ಚಳಿಯಲ್ಲೇ ಕಾಸಿದ ಎಣ್ಣೆಯ ಲೇಪನದ ನಂತರ ಅಭ್ಯಂಜನ ಸ್ನಾನ ಮಾಡಿ, ನಂತರ ಆಟೋಟಗಳಲ್ಲಿ ಮೊದಲಾಗುತ್ತಿದ್ದ ದಿನಗಳು ಈಗಂತೂ ಇಲ್ಲ.


ಆಗೆಲ್ಲ ಚಳಿಗೆ ಬೈದುಕೊಂಡಿದ್ದರ ದೆಸೆಯಿಂದಲೋ ಏನೋ ಇಂದು ಚಳಿದೇಶದಲ್ಲಿ ಬಂದು ನೆಲೆಸುವಂತಾಗಿದೆ.


ಎಂತಹ ಗಮ್ಮತ್ತು ಇರ್ತಾ ಇತ್ತು ಆಗೆಲ್ಲ?

ದೀಪಾವಳಿ ದಿನಗಳಲ್ಲಿ

ಪುಂಡಿ ಕೋಲಿನ ಆಟ ಆಡ್ತಿದ್ವಿ.

ಬೂರೆ ಕದಿಯೋದಕ್ಕೆ ಹೋಗ್ತಿದ್ವಿ.

ಗೂಪೂಜೆ ಮಾಡುವುದರ ಜೊತೆಗೆ ದನಬೆದರಿಸೋ ಆಟಗಳನ್ನು ದೂರದಿಂದ ಕುತೂಹಲ ಮತ್ತು ಜಾಗರೂಕತೆಯೊಂದಿಗೆ ನೋಡ್ತಾ ಇದ್ವಿ.

ಲಕ್ಷ್ಮೀ ಪೂಜೆ ದಿನ ಅಂಗಡಿ, ಮಿಲ್ಲು, ಮತ್ತೊಂದು ಅಂತ ಹೋದಲ್ಲೆಲ್ಲ ಸ್ವೀಟ್ಸ್, ಮಂಡಕ್ಕಿ, ಹಣ್ಣು ಕೊಡೋರು, ಅದನ್ನೆಲ್ಲ ಕಲೆಕ್ಟ್ ಮಾಡ್ತಾ ಇದ್ವಿ.

ಪಟಾಕಿಗಳನ್ನ, ಸುರುಸುರು ಬತ್ತಿ, ಗರ್ನಾಲು, ಕುಡಿಕೆ ಪಟಾಕಿಗಳನ್ನ ಅತ್ತೋ-ಕರೆದೋ ಕೊಡಿಸಿಕೊಳ್ತಿದ್ವಿ.

ಎಲ್ಲಕ್ಕಿಂತ ಮುಖ್ಯವಾಗಿ ಹೊಸಬಟ್ಟೆ ಹಾಕಿ ಸಂಭ್ರಮಿಸ್ತಿದ್ವಿ.


ನಮಗೆ ಏನಿಲ್ಲವೆಂದರೂ, ನಮ್ಮ ಹಿರಿಯರು ಒಂದಿಷ್ಟು ಸಂಪ್ರದಾಯ, ಪರಂಪರೆ ಅಂತ ಕಲಿಸಿದ್ರು, ಅದರ ಬಗ್ಗೆ ಕತೆಗಳನ್ನ ಹೇಳಿಕೊಟ್ಟಿದ್ರು.


***


ಆದರೆ ಇಂದಿನ ದೀಪಾವಳಿ ಆಚರಣೆ ಅದಕ್ಕೆ ತದ್ವಿರುದ್ಧವಾಗಿದೆ ಅನ್ನಬಹುದು.

ನಮ್ಮ ಈ ಉತ್ತರ ಅಮೇರಿಕದ ಚೌಕಟ್ಟಿನಲ್ಲಿ ನಾವೂ ದೀಪಾವಳಿಯನ್ನ ಗ್ರ್ಯಾಂಡ್ ಆಗೇ ಆಚರಿಸ್ತೀವೆ, ಆದರೆ, ನಮಗೆ ಬೇಕಾದ ರೀತಿ ಮತ್ತು ಅನುಕೂಲಗಳೊಂದಿಗೆ.


ಒಂದಂತೂ ನಿಜ, ದೀಪಾವಳಿ ಹಬ್ಬ ವಾರದ ಯಾವುದೇ ದಿನಾನೇ ಬರಲಿ, ನಾವು ಅಂದಿನ ದಿನವನ್ನೇ ಆಚರಿಸ್ತೀವಿ. ಈ ಹಬ್ಬವನ್ನ ವೀಕೆಂಡ್‌ಗೆ ತಳ್ಳೋದಿಲ್ಲ.


ಒಂದು cul de sac ಗೆ ಹೊಂದಿಕೊಂಡ ನೆರೆಹೊರೆಯವರೆಲ್ಲ, ನಮ್ಮ ಅಂಗಳದಲ್ಲಿ ಸೇರಿಕೊಳ್ತೀವಿ.

ಸುಮಾರು ಒಂದು ಮೂವತ್ತು-ಮುವತೈದು ಫ಼್ಯಾಮಿಲಿಗಳಾಗಬಹುದು.

ಪಕ್ಕಾ ಸೌತ್ ಇಂಡಿಯನ್ ತಿಂಡಿ-ತಿನಿಸುಗಳಾದ ಇಡ್ಲಿ, ವಡೆ, ಉಪ್ಪಿಟ್ಟು, ಶ್ಯಾವಿಗೆ, ಕೇಸರಿಬಾತ್ ಹಾಗೂ ಕಿಚಡಿಯ ಜೊತೆಗೆ ಶೇಂಗಾ ಚಟ್ಣಿ, ಕೊಬ್ಬರಿ ಚಟ್ಣಿ ಮತ್ತು ಟೊಮ್ಯಾಟೋ ಚಟ್ಣಿಯನ್ನು ಮಾಡಿಟ್ಟಿರುತ್ತೇವೆ.

ಪ್ರತಿಯೊಂದು ಫ಼್ಯಾಮಿಲಿಯವರೆಲ್ಲ, ಕುಡಿಕೆ ಪಟಾಕಿಗಳನ್ನ ಹಾರಿಸಿ, ಅದರ ಮುನ್ನೆಲೆಯಲ್ಲಿ ಹ್ಯಾಪಿ ದೀಪಾವಳಿ/ದಿವಾಲೀ ಎಂದು ಸಂತೋಷದಿಂದ ತೆಗೆದುಕೊಳ್ಳುವ ಅನೇಕ ಗ್ರೂಪ್ ಫ಼ೋಟೋಗಳು, ವಿಡಿಯೋಗಳು ಬಹಳ ವಿಶೇಷ.

ನಾವು ಸುಮಾರು 11 ವರ್ಷಗಳಿಂದ ಈ ರೀತಿಯಾಗಿ ದೀಪಾವಳಿಯನ್ನ ಕಮ್ಯೂನಿಟಿ ಇವೆಂಟ್ ಆಗಿ ಆಚರಿಸಿಕೊಂಡು ಬಂದಿದ್ದೇವೆ. ಇದು ಹೀಗೆ ಮುಂದುವರೆಯಲಿ ಅನ್ನೋದು ನನ್ನ ಆಶಯ.

Show more...
1 week ago
10 minutes 28 seconds

SatisHFaction Kannada Podcast from the US
ನಮ್ಮ ಮತ್ತು ಕನ್ನಡ ಸಿನಿಮಾ ನಂಟು

ನಮ್ಮ ಮತ್ತು ಕನ್ನಡ ಸಿನಿಮಾ ನಂಟು


ನಮ್ಮ ಮತ್ತು ನಮ್ಮ ಕನ್ನಡ ಸಿನಿಮಾಗಳ ಬಾಂಧವ್ಯ ಹಲವಾರು ದಶಕಗಳ ವಿಸ್ತಾರವುಳ್ಳದ್ದು.


ನಾವು ಒಂದು ಸಿನಿಮಾ ಅಥವಾ ಸೀರಿಯಲ್ ನೋಡ್ದಾಗ, ನಮಗೆ ಗೊತ್ತೋ ಗೊತ್ತಿಲ್ಲದೆಯೋ ಆಯಾ ಸಿನಿಮಾಗಳ ಕಲಾವಿದರ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆದುಕೊಳ್ಳುತ್ತೆ.


ಈ ಒಂದು ಸಂಬಂಧ ಬಹಳ ವಿಶೇಷವಾದದ್ದು. ಆ ಕಾರಣದಿಂದ ನಮ್ಮ ಕನ್ನಡ (ನೇಟಿವ್) ಸಿನಿಮಾಗಳು ನಮಗೆ ಬಹಳ ಆಪ್ತವಾಗುತ್ತವೆ. ಈ ಕೆಳಗಿನ ಯಾವೊಬ್ಬ ಕಲಾವಿದರನ್ನು ನೀವು ನೆನಪಿಸಿಕೊಂಡರೂ ಸಾಕು ನಿಮಗೆ ಅವರ ಸಿನಿಮಾಗಳು, ಅವರ ಪರ್ಸನಾಲಿಟಿ ನೆನಪಿಗೆ ಬರೋದು ಸಹಜ: ಶನಿಮಹಾದೇವಪ್ಪ, ಟೈಗರ್ ಪ್ರಭಾಕರ್, ಕೆ.ಎಸ್. ಅಶ್ವಥ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಉಮಾಶ್ರೀ, ತಾರಾ, ಸುಂದರಕೃಷ್ಣ ಅರಸ್, ಪಂಡರೀಬಾಯಿ, ಇತ್ಯಾದಿ.

Show more...
3 weeks ago
10 minutes 14 seconds

SatisHFaction Kannada Podcast from the US
H1B ವೀಸಾ: ಕಥೆ ಮತ್ತು ವ್ಯಥೆ (82)

H1B ವೀಸಾ: ಕಥೆ ಮತ್ತು ವ್ಯಥೆ

ಇತ್ತೀಚೆಗೆ ವೀಸಾ ಫ಼ೀ ಹೆಚ್ಚು ಮಾಡಿರೋ ವಿಷಯ:

H1B ವೀಸಾ ಹೆಸರಿನಲ್ಲಿ ಬೋಟ್‌ಲೋಡ್‌ಗಟ್ಟಳೆ ಕ್ಯಾಂಡಿಡೇಟುಗಳನ್ನ ತಂದು ಇಲ್ಲಿ ದುಡ್ಡು ಮಾಡಿ ಮೆರೀತಾ ಇದ್ರಲ್ಲ ಅವರಿಾಗೆ ಬುದ್ಧಿ ಕಲಿಸೋ ಉಪಾಯನೋ?

ಅಥವಾ

ಇದರ ಹಿಂದೆ ಇನ್ನೇನಾದ್ರೂ ಕಾರಣ ಇದೆಯಾ?


What do the mainstream Americans say about this?

What does the Indian community say and react to this?


Was this visa misused?

How People Took Advantage: Legally and Otherwise

The H-1B became a gateway to permanent residency for many skilled workers. Its “dual intent” provision allowed holders to apply for green cards while working in the U.S.. Over time, however, the system saw:


Mass filings by outsourcing firms, exploiting the lottery system


Proxy interviews and resume inflation, especially in tech contracting


Low-wage offers to game the prevailing wage requirement


These practices led to criticism that the program was being used to undercut American wages and displace domestic talent.


2025 Proclamation: A Turning Point

President Trump signed a Proclamation on Sept 19, 2025, introducing:


A $100,000 one-time fee for new H-1B petitions


A proposed weighted lottery system, favoring higher-paid applicants


Rulemaking to raise prevailing wage levels and prioritize “best of the best” talent


These changes sparked intense debate:


🇮🇳 Indian diaspora expressed confusion and concern over visa stamping, student transitions, and outsourcing impacts


Tech hubs like NYC worried about talent shortages and operational disruptions


Startups and mid-sized firms feared losing access to global talent due to cost barriers


Cultural and Economic Impact

Despite its flaws, the H-1B program has:


Fueled innovation in tech, biotech, and academia


Brought cultural diversity to U.S. workplaces


Enabled immigrant entrepreneurship, with many H-1B holders founding startups


Yet, its future remains uncertain—caught between economic pragmatism and political populism.

Show more...
1 month ago
12 minutes 56 seconds

SatisHFaction Kannada Podcast from the US
ನಮ್ಮೊಳಗಿನ ಸೃಜನಶೀಲತೆ (Creativity)

ನಮ್ಮೊಳಗಿನ ಸೃಜನಶೀಲತೆ (Creativity)


ನಮ್ಮೊಳಗೆ ಹೇಗೆ ಒಂದೊಂದು creative idea ಗಳು ಹುಟ್ಟುತ್ವೆ?

ಆ ಆಲೋಚನೆಗಳು ಹೇಗೆ ಹರಳು ಕಟ್ಟುತ್ವೆ?

ಆ ಹರಳು ಮುಂದೆ ಹೇಗೆ ಬೆಳೆದು, ಒಂದು ಸ್ಫುಟವಾದ ರೂಪ ಪಡೆಯೋದು ಹೇಗೆ?


ಒಂದು ಚಿಕ್ಕ ಐಡಿಯಾ ದೊಡ್ಡದಾಗಿ ಹೇಗೆ ಬೆಳೆಯೋದು?

ಈ ಐಡಿಯಾಗಳಿಗೆ ಯಾವುದಾದರೂ catalysts (positive or negative) ಇವೆಯಾ?


How does the creative mind filter through the idea? What lens is being used?


Today's episode discusses the creative thought process and how it becomes big or no longer exists.

What are some of the avenues of inspiration?

-Personal experience: life events, emotions, relationships

-Observation: noticing everyday details, social dynamics, nature’s patterns

-Cross-pollination: borrowing ideas from science, history, other arts

-Constraints and prompts: briefs, forms, or challenges that force innovation

-Tradition and scholarship: building on cultural myths, stories, or past masters


What are the catalysts?

-Positive

Curiosity and playfulness

Supportive communities or mentors

Time and space for experimentation


-Negative

Constraints like deadlines or budgets can force inventive solutions

Internal friction or critique that provokes problem-solving

External tensions, social change, conflict, and personal loss fuel the raw material.

Show more...
1 month ago
13 minutes 8 seconds

SatisHFaction Kannada Podcast from the US
ಆಫ಼್ರಿಕಾದ ಬವಣೆ ಮತ್ತು ಬದಲಾವಣೆ (80)

ಆಫ಼್ರಿಕಾದ ಬವಣೆ ಮತ್ತು ಬದಲಾವಣೆ


ಒಂದಾನೊಂದು ಕಾಲದಲ್ಲಿ ಮಾನವತೆಯ ಮೂಲವಾಗಿ ಬಿಂಬಿತವಾಗಿದ್ದ ಆಫ಼್ರಿಕ ಎನ್ನೋ ಖಂಡ, ಇಂದು ಬಹಳ ಸಂಕಷ್ಟದಲ್ಲಿದೆ. ಸುಡಾನ್ ನಲ್ಲಿ ಆಗಸ್ಟ್ 31ರಂದು ಮಡ್‌ಸ್ಲೈಡ್ ಆದ ಕಾರಣದಿಂದ ಸುಮಾರು ಸಾವಿರ ಜನರು ಕಾಣೆಯಾದರು, ಆದರೆ ಅದು ಅಷ್ಟು ದೊಡ್ಡ ಸುದ್ದಿ ಮಾಡಲಿಲ್ಲ. ಆದರೆ, ಯುಕ್ರೇನ್‌ನಲ್ಲಿ ಹತ್ತು ಜನ ಸತ್ರೆ, ಅದು ಇಲ್ಲಿನ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗುತ್ತೆ. ಹಾಗೇ, ಈ ವಾರದ ಅಫ಼ಘಾನಿಸ್ತಾನದ ಭೂಕಂಪದಲ್ಲಿ ಸಾವಿಗೀಡಾದ ನೂರಾರು ಜನರ ಬಗ್ಗೆ ಸುದ್ದಿ ಆಯ್ತು.


ಜನರ ಜೀವ ಮತ್ತು ಆ ಜೀವಕ್ಕೆ ಎಲ್ಲ ಕಡೆಗೆ ಒಂದೇ ರೀತಿಯ ಬೆಲೆ ಇಲ್ಲದಿರುವುದೇಕೆ?

ಒಂದು ಕಾಲದಲ್ಲಿ, craddle of humanity ಯಾಗಿ ಇದ್ದಂತಹ ಆಫ಼್ರಿಕ, ಇಂದು ಅನೇಕ ಕಾರಣಗಳಿಂದ ಬಳಲುತ್ತಿರುವುದೇಕೆ?


The journey outwards of Africa started about 300,000 years ago. And only recently, about 15-25,000 years ago, they arrived in the North & South American continents. That journey of Homo sapiens isn’t just a biological or geographical story. It’s a mirror to our existential longing.


1. Migration as Metaphor

Human migration from Africa wasn’t just about survival; it was about becoming. Each step outward was a step inward: a confrontation with the unknown, a test of adaptability, and a quiet yearning for belonging.


They left the cradle not because it was broken, but because we were restless to understand who we are.


This restlessness is the same force that drives artists to create, philosophers to question, and wanderers to roam. Migration is not merely movement; it is transformation.


2. The Paradox of Origin

Africa, the birthplace of humanity, is now often portrayed as the world’s wound. But this paradox invites reflection:


- Why does the origin of life suffer the most neglect?

- Why do we forget the soil that bore our ancestors?


Perhaps it’s because we’ve mistaken technological advancement for moral progress. The true measure of civilization isn’t skyscrapers—it’s compassion.


3. The Silence Around Suffering

The mudslide in Sudan, the famine in the Sahel, the wars in Congo; these are not just news items. They are **ethical failures** of global consciousness.


“When suffering becomes routine, empathy becomes optional.”


Philosophers like Emmanuel Levinas remind us that ethics begins with the face of the Other. If we cannot see the face of a Sudanese child buried in mud, we have lost something essential.


4. The Eternal Return

Nietzsche’s idea of eternal recurrence asks: if you had to live your life over and over, would you choose it again?


Apply that to humanity: if we had to migrate again, would we still leave Africa? Would we still build borders, hierarchies, and systems that forget their origin?


5. A Call to Remember

Africa is not a continent to be pitied; it is a continent to be remembered. To honor its legacy is to honor ourselves.


“We are all migrants of time, of memory, of meaning. And the journey is not over.”

Show more...
1 month ago
10 minutes 8 seconds

SatisHFaction Kannada Podcast from the US
Artificial (Intelligence) Conversation

Artificial (Intelligence) Conversation


Please welcome Akash and Krupa - ಇವರಿಬ್ಬರೂ ಕನ್ನಡದಲ್ಲಿ ಮಾತನಾಡೋದನ್ನ ಕೇಳೋಣ!

ಇವರಿಗೆ ಕೊಟ್ಟ ಸಲಹೆ, ಸೂಚನೆಗಳಿಗನುಸಾರವಾಗಿ ಹಾಗೂ ಅವರಿಗೆ ಕೊಟ್ಟ ರಿಸೋರ್ಸ್‌ಗಳನ್ನ ಅವಲಂಬಿಸಿ, ನಡೆಯೋ ಒಂದು ಚರ್ಚೆಯನ್ನ ಕೇಳಬಹುದು.


Show more...
2 months ago
9 minutes 29 seconds

SatisHFaction Kannada Podcast from the US
ಮಿಚ್ಚಾಮಿ ದುಃಖದಮ್ (78)

ಮಿಚ್ಚಾಮಿ ದುಃಖದಮ್


ಈ ಒಂದು ಜೈನರ ಪರಂಪರೆಯ ಮಾತು, "ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿ: ನಡೆ-ನುಡಿ, ಆಚಾರ-ವಿಚಾರ, ಮಾತು-ಕತೆ ಇವುಗಳನ್ನೆಲ್ಲ ಕೂಲಂಕಶವಾಗಿ ಪರಿಗಣಿಸಿ, ನನ್ನನ್ನು ಕ್ಷಮಿಸಿ!"


ಎಷ್ಟು ಚೆನ್ನಾಗಿದೆ ಅಲ್ವಾ ಈ ಕಾನ್ಸೆಪ್ಟ್?

The fact that so many traditions converge on forgiveness tells us something profound: humility is a universal language. It’s not weakness, it’s wisdom. It’s not erasure, it’s evolution.


And in a world of algorithms and acceleration, Micchami Dukkadam reminds us to pause, reflect, and say: “I may have erred. I may have hurt. May those actions bear no fruit. May we begin again.”


In my opinion, this is a wonderful thought/concept emerging from Jainism's root! I think we should all seek to celebrate and adapt.

Show more...
2 months ago
9 minutes 7 seconds

SatisHFaction Kannada Podcast from the US
ಧರ್ಮ-ಅಧರ್ಮಗಳ ಹೋರಾಟ

ಧರ್ಮ-ಅಧರ್ಮಗಳ ಹೋರಾಟ


ಎಲ್ಲರೂ ಅಂದುಕೊಂಡಿರೋ ಹಾಗೆ ಇದು ಧರ್ಮದ ಜಯವಲ್ಲ... ನಿಜವಾಗಿಯೂ, ಸಾವಿರಾರು ವರ್ಷಗಳಿಂದ ಧರ್ಮವನ್ನು ನಂಬಿಕೊಂಡು ಬಂದ ನಾವುಗಳು, ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಮತ್ತು ಎಚ್ಚರಿಸಿಕೊಳ್ಳಬೇಕಾದ ಸಮಯ ಕೂಡ.


ಇಲ್ಲಿ ಮೇಲ್ನೋಟಕ್ಕೆ ಒಂದು ಸಣ್ಣ ಪ್ರಮಾಣದ ಸಂಚು ಎಂದು ಗೋಚರಿಕೆಯಾದರೂ, ಇದರ ಅಂತರಾಳದಲ್ಲಿ ನಮ್ಮ ಎಲ್ಲರ ಗೊಂದಲ, ಒಗ್ಗಟ್ಟಿಲ್ಲದಿರುವಿಕೆ, ರಾಜಕೀಯ ಪ್ರೇರಿತ ಆಲೋಚನೆಗಳು ಎದ್ದು ಕಾಣುತ್ತವೆ.


ಸತ್ತೋರು ಯಾರೋ? ಆದರೆ, ಸತ್ತವರ ಹೆಸರಿನಲ್ಲಿ ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುವ ಇವರನ್ನೆಲ್ಲ ನಂಬುವುದಾದರೂ ಹೇಗೆ?


ಇನ್ನು ಎರಡನೆಯ ವಿಷಯ, ಬಹುವಾಗಿ ಕಾಡುವಂಥದ್ದು, ಸ್ಥಳೀಯ ವಿಷಯಗಳ ಬಗ್ಗೆ ಎಲ್ಲೋ ಕುಳಿತು ಅಥೆಂಟಿಕ್ ಆಗಿ ಯೂ ಟ್ಯೂಬ್ ವಿಡಿಯೋಗಳನ್ನು ಮಾಡಿ, ಲಕ್ಷಾಂತರ ಜನರನ್ನು ನಂಬಿಸಿರುವುದು ಮತ್ತು ಅವರ ನಂಬಿಕೆಗಳ ಫ಼ೌಂಡೇಶನ್ ಅನ್ನು ಅಲುಗಾಡಿಸಿರುವುದು. ಇನ್ನಾದರೂ ಜನರು, ಯೂ ಟ್ಯೂಬ್ ನಲ್ಲಿ ತೋರಿಸಿರೋದೆಲ್ಲ ಸತ್ಯವಲ್ಲ ಎಂದು ಮನಗಾಣುವುದಾದರೂ ಹೇಗೆ?


ಈ ಸೋ ಕಾಲ್ಡ್ ಯೂ ಟ್ಯೂಬರುಗಳು, ಈಗಾಗಲೇ ಅಸ್ಥಿತ್ವಕ್ಕೆ ಬಂದಿದ್ದ ವಾರ್ತಾವಾಹಿನಿಗಳಿಗೆ ಸಡ್ಡು ಹೊಡೆದಂತೆ ರಾತ್ರೋ ರಾತ್ರಿ ಮಿಲಿಯನ್ ಗಟ್ಟಲೆ ಫ಼ಾಲೋವರುಗಳನ್ನು ಹಾಕಿಕೊಂಡು ದುಡ್ಡು ಮಾಡಿದ್ದೇ ಬಂತು. ಅವರೇನು ಜರ್ನಲಿಸಮ್ ಅನ್ನು ಓದಿದೋರಲ್ಲ, ವಿಷಯವನ್ನು ಕೂಲಂಕಷವಾಗಿ ವಿವೇಚನೆಯಿಂದ ಆಲೋಚಿಸಿ, ವಿಮರ್ಶಿಸಿ, ಅಗೆದು-ತೆಗೆದು ಇನ್ವೆಷ್ಟಿಗೇಟಿವ್ ಜರ್ನಲಿಸಮ್ ಅನ್ನು ಮಾಡಿದವರೇ ಅಲ್ಲ. ಆದರೆ, ಅಂಥವರಿಗೆಲ್ಲ ನಮ್ಮ ಸಮುದಾಯ ಸೊಪ್ಪು ಹಾಕುವುದನ್ನು ನೋಡಿದರೆ ಹೇಸಿಗೆಯಾಗುತ್ತದೆ.

Show more...
2 months ago
9 minutes 55 seconds

SatisHFaction Kannada Podcast from the US
ಕರುಣೆ ಇಲ್ಲದ Customer Service (76)

ಕರುಣೆ ಇಲ್ಲದ Customer Service


ಈ ಕ್ಯಾಪಿಟಲಿಸಮ್ಮಿನ ಅವಿಭಾಜ್ಯ ಅಂಗ - ಕಸ್ಟಮರ್ಸ್.

ಅವರನ್ನ ಓಲೈಕೆ ಮಾಡೋದು: ಕಸ್ಟಮರ್ ಸರ್ವಿಸ್, ಅಥವಾ ಸಪೋರ್ಟ್.


ಈಗಿನ ಕಾಲದ (ಕರುಣೆ ಇಲ್ಲದ) ಈ ಕಸ್ಟಮರ್ ಸರ್ವಿಸ್ ಯುಗದಲ್ಲಿ ನಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುವುದು ಹೇಗೆ?


ಇದರಲ್ಲಿ ನಾನು ಶೇರ್ ಮಾಡಿರುವ ಒಂದು ರನ್ನಿಂಗ್ ಶೂ ಉದಾಹರಣೆಯಲ್ಲಿ, ನಾನು ಕಂಪ್ಲೇಟ್ ಮಾಡಿದ ಶೂ ಕಂಪನಿಯವರಿಗೆ, ಹಳೆಯ ಶೂ ಅನ್ನು ಕಳಿಸಿಕೊಡಿ, ಅದನ್ನು ನಾವು ಪರೀಕ್ಷಿಸುತ್ತೇವೆ ಅನ್ನೋ ವ್ಯವಧಾನವೂ ಇರಲಿಲ್ಲ.


ನನ್ನ ಕಂಪ್ಲೇಟ್ ಕೇಳಿ, ತಕ್ಷಣ ಕೂಪನ್ ಕೊಟ್ಟಿದ್ದನ್ನು ನೋಡಿದರೆ, ಸಹಾಯ ಕೇಳೋದರಲ್ಲಿ ತಪ್ಪೇನಿದೆ ಅನ್ಸುತ್ತೆ.


If you wonder, what % of the people call customer service?

What % of the people really return the purchased items?

What % of the people get warranty support benefits?


ಇವನ್ನೆಲ್ಲ ನೋಡಿದ್ರೆ, ನಾವು ಕಸ್ಟಮರ್ ಸಪೋರ್ಟ್ ಬಗ್ಗೆ ತಿಳಿದುಕೊಳ್ಳೋದು ಸಾಕಷ್ಟು ಇದೆ, ಅನ್ಸುತ್ತೆ.

There is no ಕರುಣೆ or considerations in online chat or with chat bots, don't waste your time. Instead, connect with the reps when you talk to them and insist (in a nice assertive way), need his/her help to get this resolve... convince them to go over and beyond... your job will be more than half done.

Show more...
2 months ago
13 minutes 14 seconds

SatisHFaction Kannada Podcast from the US
ಪೌರತ್ವ (Citizenship)

ಪೌರತ್ವ (Citizenship)


What does it mean to “belong” — legally, emotionally, spiritually?

Is citizenship a tool for freedom or a tether to obligation?

Can one renounce a passport without renouncing a past?

Are immigrants reshaping the meaning of nationality itself?


ನಾವು ಭಾರತೀಯ ಮೂಲದ ವೃತ್ತಿ ಸಂಬಂಧಿ ವಲಸಿಗರು ಅಮೇರಿಕಕ್ಕೆ ಬಂದ ನಂತರ, ಇಲ್ಲಿನ ಪೌರತ್ವವನ್ನು ಪಡೆಯುವ ಬಗ್ಗೆ ಒಂದಿಷ್ಟು ಅನಿಸಿಕೆಗಳನ್ನ ಇಲ್ಲಿ ಹಂಚಿಕೊಂಡಿದ್ದೇನೆ.

Considerations:

Practical Factors

  • Legal Requirements: Residency duration, language proficiency, and civic knowledge tests.

  • Dual Citizenship Rules: India does not allow dual citizenship; U.S. does.

  • Tax Implications: New obligations may include global income reporting, estate taxes, or exit taxes.

  • Travel & Mobility: A stronger passport (e.g., U.S.) offers broader visa-free access.


Emotional & Identity Factors

  • Sense of Belonging: Citizenship often symbolizes acceptance and rootedness.

  • Family Expectations: Pressure from relatives or community to “stay loyal” to one’s homeland.

  • Cultural Disconnect: Fear of losing touch with traditions, language, or ancestral values

Show more...
2 months ago
13 minutes 31 seconds

SatisHFaction Kannada Podcast from the US
ಅಮೇರಿಕದಲ್ಲಿ ನಮ್ಮ ಜೀವನೋಪಾಯ (ಹೊಟ್ಟೆ ಪಾಡು)

ಅಮೇರಿಕದಲ್ಲಿ ನಮ್ಮ ಜೀವನೋಪಾಯ (ಹೊಟ್ಟೆ ಪಾಡು)

ಅಮೇರಿಕದ ಈಸ್ಟ್ ಕೋಸ್ಟ್ ಪ್ರಾಡಕ್ಟ್ ಬೇಸ್ಡ್ ಕಂಪನಿ ಹಾಗೂ ಸಿಲಿಕಾನ್ ವ್ಯಾಲಿ ಕಂಪನಿಗಳಲ್ಲಿ ಕೆಲಸ ಮಾಡೋದರಲ್ಲಿ ಏನು ವ್ಯತ್ಯಾಸ?


ಎಲ್ಲಿ ಕೆಲಸ ಮಾಡಿದರೆ ಒಳ್ಳೆಯದು?

ಅದರಿಂದ ಆಗೋ ಕಷ್ಟ-ನಷ್ಟಗಳೇನು?

What are some of the considerations, both short & long term?

Show more...
2 months ago
11 minutes 10 seconds

SatisHFaction Kannada Podcast from the US
AI ಆಟಾಟೋಪ

AI ಆಟಾಟೋಪ


Artificial Intelligence ನಮ್ಮನ್ನೆಲ್ಲ ಕುಣಿಸ್ತಾ ಇದೆ.

ಇದರಿಂದ ಏನೇನು ಆಗಬಹುದು?

ಯಾಕೆ ಹೀಗೆ ಆಗ್ತಾ ಇದೆ?


ನಾವು ಇದರಿಂದ ಹೇಗೆ ಅನುಕೂಲ ಪಡ್ಕೋಬಹುದು ಅಥವಾ ಇದರ ಗೊಂದಲಗಳಿಂದ ಹೇಗೆ ಬಚಾವಾಗಬಹುದು ಅನ್ನೋ ಚರ್ಚೆ.


Show more...
3 months ago
11 minutes 8 seconds

SatisHFaction Kannada Podcast from the US
ನಾವೂ... ನಮ್ಮ ವೆಕೆಷನ್ನೂ...(72)

ನಾವೂ... ನಮ್ಮ ವೆಕೆಷನ್ನೂ...


ಒಂದೇ ಕಂಪನಿಯಲ್ಲಿ ಹಲವಾರು ವರ್ಷಗಳಿಂದ ಕುರ್ಚಿ ಗಟ್ಟಿ ಹಿಡಿದುಕೊಂಡು ಕುಳಿತುಕೊಂಡವರಿಗೆ ಒಂದು ಹೇಳಲಾಗದ ಮತ್ತು ಹಂಚಲಾಗದ ಅಳಲಿರುತ್ತದೆ, ಅದೇನೆಂದರೆ, ಅವರವರು ಗಳಿಸಿಕೊಂಡ ವೆಕೇಷನ್ ದಿನಗಳನ್ನ ಹೇಗೆ ಕಳೆಯೋದು ಎನ್ನುವುದು!

ಒಂದಾನೊಂದು ಕಾಲದಲ್ಲಿ, ಕಂಪನಿಗೆ ಸೇರಿದ ಮೊದಲ ದಿನಗಳಲ್ಲಿ, ನಮಗೆಲ್ಲ ಕೇವಲ ಎರಡೇ ಎರಡು ವಾರಗಳ ಕಾಲ ರಜೆ ಇರೋದು. ಆಗೆಲ್ಲ ಭಾರತಕ್ಕೆ ಹೋಗಿ ಬರಬೇಕೆಂದರೆ, ಕಷ್ಟ ಪಟ್ಟು ವರ್ಷವಿಡೀ ಕೂಡಿಟ್ಟ ಮೂರು ವಾರಗಳ ರಜೆ ದಿನಗಳು ಯಾವ ಮೂಲೆಗೂ ಸಾಕಾಗುತ್ತಿರಲಿಲ್ಲ. ಹೋಗಿ ಬಂದು ಸುಧಾರಿಸಿಕೊಳ್ಳಲು ಒಂದು ವಾರ ಮುಗಿದು ಹೋಗುತ್ತಿತ್ತು, ಇನ್ನುಳಿದ ಎರಡು ವಾರಗಳಲ್ಲಿ ಏನನ್ನು ಮಾಡುವುದು, ಏನನ್ನು ಬಿಡುವುದು? ಕೊನೆಗೆ ವೆಕೇಷನ್ ಮುಗಿದ ಮೇಲೆ, ಎಷ್ಟೊಂದು ಸುಸ್ತಾಗಿರುತ್ತಿತ್ತೆಂದರೆ, ಭಾರತದ ಟ್ರಿಪ್ ನಂತರ ಮತ್ತೊಂದು ವೆಕೇಷನ್ ಬೇಕು ಎನ್ನುವಷ್ಟು.

ಆಗೆಲ್ಲ ರಜಾ ದಿನಗಳು ಕಡಿಮೆ, ನಮಗೆ ಹೆಚ್ಚು ಬೇಕಾಗಿತ್ತು. ಈಗೆಲ್ಲ, ರಜೆ ದಿನಗಳು ಹೆಚ್ಚು, ನಾವು ಉಪಯೋಗಿಸಿದರೂ ಉಳಿದು ಮತ್ತೆ ಮುಂದಿನ ವರ್ಷಕ್ಕೆ ಹೋಗುವಷ್ಟು! ನನ್ನ ಹತ್ತಿರ ನಲವತ್ತು ದಿನಗಳ ರಜೆ ಇದೆ ಎಂದಾಕ್ಷಣ, ಎಲ್ಲವನ್ನೂ ಒಮ್ಮೆಯೇ ತೆಗೆದುಕೊಂಡು ಉಡಾಯಿಸಿ ಬಿಡುತ್ತೇನೆ ಎಂದು ಎಂಟು ವಾರಗಳ ಪ್ಲಾನ್ ಮಾಡುವುದಂತೂ ದೂರದ ಮಾತು! ಏನಾದರೂ ಎರಡು ವಾರಗಳ ರಜೆ ತೆಗೆದುಕೊಂಡರೆ, ಓಕೆ, ಪರವಾಗಿಲ್ಲ... ಮೂರಕ್ಕಿಂತ ಹೆಚ್ಚು ತೆಗೆದುಕೊಂಡರೆ, ವೆಕೇಷನ್ ಮುಗಿಸಿ ಆಫ಼ೀಸಿಗೆ ಬರಲೇ ಬೇಡ ಎಂದು ಮ್ಯಾನೇಜ್‌ಮೆಂಟ್ ನವರು ಹೇಳಿದರೂ ಆಶ್ಚರ್ಯವೇನೂ ಇಲ್ಲ, ಹುಷಾರ್!


ಒಂಥರಾ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ, ಎನ್ನುತ್ತಾರಲ್ಲ ಹಾಗೆ.

Show more...
3 months ago
11 minutes 54 seconds

SatisHFaction Kannada Podcast from the US
Negative thoughts? ಯಾಕ್ ಹೇಳಿ?!

Negative thoughts? ಯಾಕ್ ಹೇಳಿ?!


ಜೀವನ ಅಂದ್ರೆ ಕಷ್ಟಗಳು ಇರೋದು, ಬರೋದು ಸಹಜವೇ.

ಅದಕ್ಕೋಸ್ಕರ negativity ಗೆ ಕಟ್ಟು ಬಿದ್ರೆ ಹೇಗೆ ಹೇಳಿ?

ಸಾಲದು ಅನ್ನೋದು ಬೇಕು ಅನ್ನೋದು ತಾಯಿ ಇದ್ದ ಹಾಗೆ ಅಂತೆ. ಹಾಗೆಯೇ, ನಮಗೆ ಒದಗಿ ಬರೋ ಕಷ್ಟ-ಕಾರ್ಪಣ್ಯಗಳನ್ನ ನಾವು ಒಂದು ಸವಾಲಾಗಿ ಸ್ವೀಕರಿಸಿ ಅದರಿಂದ ಒಂದಿಷ್ಟು ಕಲಿತರೆ ಒಳ್ಳೆಯದೇ ಅಲ್ವಾ?


ಈ ಪ್ರಪಂಚದಲ್ಲಿ ಬೇಕಾದಷ್ಟು ಕೆಟ್ಟ ನ್ಯೂಸ್‌ಗಳು ಬರ್ತಾನೇ ಇರುತ್ತೆ. ನಮ್ಮ ಸುತ್ತಮುತ್ತಲಿನಲ್ಲಿರೋ ಒಳ್ಳೆಯ ವಿಚಾರಗಳನ್ನ ನಾವು ನೋಡೋದಿಲ್ಲ.


ಭೂಮಿ ತಾಯಿಯಿಂದ ಹಿಡಿದು, ಪಂಚಭೂತಗಳವರೆಗೆ ನಮ್ಮ ಸುತ್ತಲಿರುವ ನಿಸರ್ಗ ಎಲ್ಲವೂ ಪಾಸಿಟಿವಿಟಿಯನ್ನೇ ಸೂಸುತ್ತಿರುವಾಗ, ನಮ್ಮ ಹುಲುಮಾನವರ ಈ ಅಳುಕು ಏಕೆ?

Show more...
3 months ago
10 minutes 32 seconds

SatisHFaction Kannada Podcast from the US
Shall I Compare Thee To A Summer's Day? (70)

Shall I Compare Thee To A Summer's Day?


ಯಾಕೆ ಹೀಗೆ Shakespear ಬರೆದ ಅಂತ ಯೋಚನೆ ಮಾಡಿದ್ರೆ, ಆಗಿನ ಕಾಲದ ಲಂಡನ್ ನಲ್ಲಿ (ಮತ್ತೆ ಈಗೂ ಕೂಡಾ), ಬೇಸಿಗೆ ದಿನಗಳಿಗೆ ಒಂದು ರೀತಿಯ ವಿಶೇಷ ಸ್ಥಾನಮಾನ ಅಂತಾನೇ ಹೇಳ್ಬೇಕು.


ಬೇಸಿಗೆ ಬಗ್ಗೆ ಒಂದು ಹರಟೆ (ಅಥವಾ ತಲೆ ಹರಟೆ) ಯನ್ನ ಇಲ್ಲಿ ಹಂಚಿಕೊಳ್ತಾ ಇದ್ದೀನಿ!

***

Sonnet 18: Shall I compare thee to a summer’s day?

By William ShakespeareShall I compare thee to a summer’s day?
Thou art more lovely and more temperate:
Rough winds do shake the darling buds of May,
And summer’s lease hath all too short a date;
Sometime too hot the eye of heaven shines,
And often is his gold complexion dimm'd;
And every fair from fair sometime declines,
By chance or nature’s changing course untrimm'd;
But thy eternal summer shall not fade,
Nor lose possession of that fair thou ow’st;
Nor shall death brag thou wander’st in his shade,
When in eternal lines to time thou grow’st:
   So long as men can breathe or eyes can see,
   So long lives this, and this gives life to thee.

Show more...
3 months ago
10 minutes 6 seconds

SatisHFaction Kannada Podcast from the US
Fishing and the Gen-Z

Fishing and the Gen-Z


ನೀವೆಲ್ಲ ಅಂದುಕೊಂಡಿರಬಹುದು, ಈ ಗಾಳ ಹಾಕಿ ಮೀನು ಹಿಡಿಯೋ ಪ್ರಕ್ರಿಯೆಯಲ್ಲಿ ಅಂಥಾ ಏನು ವಿಶೇಷ ಅಂತ.


ಒಂದು ಕಾಲದಲ್ಲಿ only old grumpy men used to go for fishing ಅಂತ ನಾನು ಅಂದುಕೊಂಡಿದ್ದೆ... ಆದರೆ, ಅದಕ್ಕೆ ತದ್ವಿರುದ್ಧವಾಗಿ, ಇವತ್ತಿನ ಈ social media rich generation ನಲ್ಲಿ ಹುಟ್ಟಿ ಬೆಳೆದಿರೋ ಮಕ್ಕಳಿಗೆ ಈ fishing a ಅನ್ನೋ ಹವ್ಯಾಸದ ಮೇಲೆ ಏಕೆ ಒಲವು ಬಂತು ಅಂದುಕೊಂಡ್ರೆ, ನಿಮಗೆ ಬಹಳಷ್ಟು ಆಶ್ಚರ್ಯ ಕಾದಿದೆ.


What do you share with your kids?

What is something you and your kids do together, that you cherish most?

Is fishing part of your meditative retreat?

Show more...
3 months ago
11 minutes 48 seconds

SatisHFaction Kannada Podcast from the US
ಅನಿವಾಸಿಗಳ ಮುಖ್ಯವಾದ ತೊಳಲಾಟ...(68)

ಅನಿವಾಸಿಗಳ ಮುಖ್ಯವಾದ ತೊಳಲಾಟ...


ಅನಿವಾಸಿಗಳ ಮುಖ್ಯವಾದ ತೊಳಲಾಟ... ಅಂದ್ರೆ, ನಾವು ದೂರದ ಭಾರತದಲ್ಲಿನ ಸಾವು-ನೋವುಗಳಿಗೆ ಹೇಗೆ ಸ್ಪಂದಿಸುತ್ತೇವೆ ಅನ್ನೋದು.


ಅಲ್ಲಿನವರ ಕಷ್ಟ-ಸುಖಗಳಿಗೆ ನಾವು (ಸರಿಯಾದ ಸಮಯಕ್ಕೆ) ಆಗದೇ ಇದ್ದಾಗ, ನಾವು ಇದ್ದರೆಷ್ಟು ಬಿಟ್ಟರೆಷ್ಟು ಎಂದು ಹುಟ್ಟುವ ಆಲೋಚನೆಗಳು ನಮ್ಮ ಅಸ್ಮಿತೆಯನ್ನೇ ಪ್ರಶ್ನಿಸಬಹುದು.


ಇಲ್ಲಿದ್ದರೂ, ಅಲ್ಲಿನವರ ಕಷ್ಟ-ಸುಖಗಳಿಗೆ ನಾವು ಅದು ಹೇಗೆ ಆಗಿ ಬರಬಹುದು? ಎಲ್ಲಿಯವರೆಗೆ ಈ ಒಂದು ದ್ವಂದ್ವವನ್ನು ಮುಂದುವರೆಸಿಕೊಂಡು ಹೋಗಬಹುದು ಎನ್ನುವುದು ಇಂದಿನ ಚಿಂತನೆ.

Show more...
3 months ago
10 minutes 45 seconds

SatisHFaction Kannada Podcast from the US
Online Shopping: A Boon or A Bane?

Online shopping: boon or bane?

ಆನ್‌ಲೈನ್ ಶಾಪ್ಪಿಂಗ್ ಅನ್ನೋದು ವರವೋ ಶಾಪವೋ

ಈ ಎಪಿಸೋಡ್‌ನಲ್ಲಿ ಆನ್‌ಲೈನ್ ಶಾಪ್ಪಿಂಗ್‌ನ ಸಾಧ್ಯತೆ-ಬಾಧ್ಯತೆಗಳ ಬಗ್ಗೆ ಚರ್ಚೆ, ಜೊತೆಗೆ ಈ ದೊಡ್ಡ ದೊಡ್ಡ ವೇರ್‌ಹೌಸ್‌ಗಳು ಒಂದು ಊರಿನಲ್ಲಿ ಬರೋದರಿಂದ ಜನರಿಗೆ ಯಾವ ರೀತಿಯಲ್ಲಿ ಅನುಕೂಲ-ಅನಾನುಕೂಲ ಆಗುತ್ತೆ ಅನ್ನೋದರ ಬಗ್ಗೆ ಒಂದಿಷ್ಟು ಕಾಳಜಿಯನ್ನ ಇಲ್ಲಿ ಹಂಚಿಕೊಳ್ತಾ ಇದ್ದೀನಿ.


Show more...
3 months ago
15 minutes 11 seconds

SatisHFaction Kannada Podcast from the US
Tiny annoyances! (67)

Daily Life’s Tiny Frictions:

These are the everyday micro-irritations that add up, slow us down, or just make us sigh.

  • Bottles and jars

    • Twisty lids that refuse to budge

    • Shrink-wrapped blister packs with industrial-strength seals

  • Tiny, squint-inducing labels

    • Nutrition facts in unreadable fonts

    • “Peel here” tabs that tear wrong

  • Prescription and pill bottles

    • Child-proof caps require forearm strength to open

    • Pill organizers with lids that jam

  • Pop-up overload

    • Endless cookie banners

    • Notifications are pinging every minute

  • Teeny touch targets

    • Icons and links are too small on mobile screens

    • “Agree” and “Cancel” buttons hugging each other

  • Captcha gymnastics

    • Identifying all traffic lights in pixel-blurry photos

    • Audio tests that even humans can’t parse

  • Cable chaos

    • Chargers that fray at the plug end

    • Too-short cords forcing acrobatics

  • Jammed furniture

    • Drawers that stick halfway

    • Office chairs that squeak in meetings

  • Clutter hotspots

    • Junk mail piling on counters

    • Dusty corners begging for a duster

  • Restroom surprises

    • Auto-flushes that never sense you, and it faucets always dispense cold water

    • Soap dispensers that drip everywhere

Which of these bugs do you like most? Or have you found quirky fixes of your own?

How do you convert daily annoyances into wins?

Show more...
4 months ago
14 minutes 22 seconds

SatisHFaction Kannada Podcast from the US
The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.