
Negative thoughts? ಯಾಕ್ ಹೇಳಿ?!
ಜೀವನ ಅಂದ್ರೆ ಕಷ್ಟಗಳು ಇರೋದು, ಬರೋದು ಸಹಜವೇ.
ಅದಕ್ಕೋಸ್ಕರ negativity ಗೆ ಕಟ್ಟು ಬಿದ್ರೆ ಹೇಗೆ ಹೇಳಿ?
ಸಾಲದು ಅನ್ನೋದು ಬೇಕು ಅನ್ನೋದು ತಾಯಿ ಇದ್ದ ಹಾಗೆ ಅಂತೆ. ಹಾಗೆಯೇ, ನಮಗೆ ಒದಗಿ ಬರೋ ಕಷ್ಟ-ಕಾರ್ಪಣ್ಯಗಳನ್ನ ನಾವು ಒಂದು ಸವಾಲಾಗಿ ಸ್ವೀಕರಿಸಿ ಅದರಿಂದ ಒಂದಿಷ್ಟು ಕಲಿತರೆ ಒಳ್ಳೆಯದೇ ಅಲ್ವಾ?
ಈ ಪ್ರಪಂಚದಲ್ಲಿ ಬೇಕಾದಷ್ಟು ಕೆಟ್ಟ ನ್ಯೂಸ್‌ಗಳು ಬರ್ತಾನೇ ಇರುತ್ತೆ. ನಮ್ಮ ಸುತ್ತಮುತ್ತಲಿನಲ್ಲಿರೋ ಒಳ್ಳೆಯ ವಿಚಾರಗಳನ್ನ ನಾವು ನೋಡೋದಿಲ್ಲ.
ಭೂಮಿ ತಾಯಿಯಿಂದ ಹಿಡಿದು, ಪಂಚಭೂತಗಳವರೆಗೆ ನಮ್ಮ ಸುತ್ತಲಿರುವ ನಿಸರ್ಗ ಎಲ್ಲವೂ ಪಾಸಿಟಿವಿಟಿಯನ್ನೇ ಸೂಸುತ್ತಿರುವಾಗ, ನಮ್ಮ ಹುಲುಮಾನವರ ಈ ಅಳುಕು ಏಕೆ?