
ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ
ಕಳೆದ ತಿಂಗಳು (ಸೆಪ್ಟೆಂಬರ್ 19) ಪ್ರೆಸಿಡೆಂಟ್ ಟ್ರಂಪ್ H1B ವೀಸಾಕ್ಕೆ ಸಂಬಂಧಿಸಿದ ರಿಸ್ಟ್ರಿಕ್ಷನ್‌ಗಳನ್ನು ಅಳವಡಿಸಿದಾಗ, ಮೈನ್‌ಸ್ಟ್ರೀಮ್ ಅಮೇರಿಕದ ವೃತ್ತಪತ್ರಿಕೆಗಳಲ್ಲಿ ಈ ನಿಲುವಿಗೆ ಪೂರಕವಾಗಿ ಅನೇಕ ದನಿಗಳು ಎದ್ದಿದ್ದವು. ಹಾಗೇ ಜನರ ಬೆಂಬಲ ಕೂಡ ವ್ಯಕ್ತವಾಗಿತ್ತು. ಹೀಗೆ, ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಓದಿಕೊಂಡು ಬಂದ ಒಂದು ಲೇಖನಕ್ಕೆ ಉತ್ತರವೆಂಬಂತೆ ಒಂದಿಷ್ಟು ಜನರು ಕಾಮೆಂಟ್ ಹಾಕಿದ್ದರು. ಅದರಲ್ಲೊಬ್ಬರು, ಭಾರತದಂತಹ ದೇಶಗಳು ಅಷ್ಟೊಂದು ಇಂಜಿನಿಯರುಗಳನ್ನು ಹುಟ್ಟು ಹಾಕುವುದೇ ಹೌದಾದರೆ, ಆ ದೇಶದಲ್ಲಿ ಅಷ್ಟೊಂದು ಇನ್ನೋವೇಷನ್ ಏಕೆ ಇನ್ನೂ ಹುಟ್ಟೋದಿಲ್ಲ ಎನ್ನೋ ರೀತಿಯಲ್ಲಿ ಅನಿಸಿಕೆ ಬರೆದಿದ್ದರು. ನಮ್ಮಲ್ಲಿ ಉತ್ಪಾದನೆಗೊಳ್ಳುವ ಗ್ರಾಜುಯೇಟುಗಳು, ಇಂಜಿನಿಯರುಗಳನ್ನು ನಾವು ಸಮರ್ಪಕವಾಗಿ ಬಳಸುತ್ತಿದ್ದೇವೆಯೇ? ಇನ್ನೋವೇಶನ್ ಅನ್ನೋ ವಿಚಾರಕ್ಕೆ ಬಂದರೆ, ಪ್ರಪಂಚದ ಎಲ್ಲ ದೇಶಗಳಿಗೆ ಕಂಪೇರ್ ಮಾಡಿದರೆ ಭಾರತ ಎಷ್ಟನೇ ಸ್ಥಾನದಲ್ಲಿ ನಿಲ್ಲುತ್ತದೆ.
ಇನ್ನೋವೇನ್ ಅನ್ನೋದು ಒಂದು ರೀತಿಯ ಹೊಸ ಕಲ್ಪನೆ, ನಾವೀನ್ಯತೆ, ಹೊಸ ಬದಲಾವಣೆ ಇದ್ದ ಹಾಗೆ. ನಾವುಗಳು ನಮ್ಮ ದೈನಂದಿನ ಜೀವನದಲ್ಲಿ status quo ಅನ್ನು ಎಷ್ಟರ ಮಟ್ಟಿಗೆ ಪ್ರಶ್ನಿಸುತ್ತೇವೆ ಎನ್ನುವಲ್ಲಿಯಿಂದ ಈ ಹೊಸ ಶೋಧ ಆರಂಭವಾಗುತ್ತದೆ.
ಹಾಗಾದರೆ, ಬರೀ ಹೀಗೆ ಮಾಡು ಎಂದು ಹೇಳಿಕೊಟ್ಟ ಚೋರ್‌ಗಳನ್ನು ಮಾಡೋದರಲ್ಲಿ ಮಾತ್ರ ನಾವು ನಿಸ್ಸೀಮರೇ?
ಒಂದು ಅಧ್ಯಯನದ ಪ್ರಕಾರ, ಜಗತ್ತಿನ ಅತಿ ಇನ್ನೋವೇಟಿವ್ ದೇಶಗಳಲ್ಲಿ ಸ್ವಿಟ್ಜರ್‌ಲ್ಯಾಂಡ್, ಸ್ವೀಡನ್, ಯುಎಸ್.ಎ. ಸೌತ್ ಕೊರಿಯಾ, ಸಿಂಗಪೂರ್, ಯುಕೆ, ಫ಼ಿನ್‌ಲ್ಯಾಂಡ್, ನೆದರ್‌ಲ್ಯಾಂಡ್, ಡೆನ್ಮಾರ್ಕ್ ಹಾಗೂ ಇತ್ತೀಚೆಗೆ ಚೈನಾ ದೇಶದ ಹೆಸರೂ ಕೇಳಿಬರುತ್ತದೆ.
ತಮ್ಮ ತಮ್ಮ ಆಂತರಿಕ ಸ್ಟ್ರಗಲ್‌ಗಳು ಎಷ್ಟೇ ಇರಲಿ, ಈ ದೇಶಗಳಿಗೆ ಯಾವಾಗಲಾದರೂ ಸ್ವಾತಂತ್ರ್ಯ ಬಂದಿದ್ದಿರಲಿ, ಇವುಗಳೆಲ್ಲವೂ ತಮ್ಮ ತಮ್ಮ ನೆಲೆಯಲ್ಲಿ, ಹೊಸದೊಂದನ್ನು ಹುಡುಕಿಕೊಂಡು, ಅದರಲ್ಲಿ ಯಶಸ್ವಿಗೊಂಡವು. ಚೈನಾದಂತಹ ದೇಶದಲ್ಲಿ, ಸರ್ಕಾರವೇ ಈ ಬಗೆಗೆ ಪ್ರಾಶಸ್ತ್ಯ ಕೊಟ್ಟಿರಲೂ ಬಹುದು. ಹೊರಗಿನಿಂದ ನಾವು ಟೆಕ್ನಾಲಜಿಗಳನ್ನು ಆಮದು ಮಾಡಿಕೊಳ್ಳೋದಿಲ್ಲ, ಎನ್ನುವ ಒಂದೇ ಒಂದು ಮೂಲಮಂತ್ರ ಇನ್ನೋವೇಶನ್ ಅನ್ನು ಪ್ರೋತ್ಸಾಹಿಸಬಹುದು.
ಆದರೆ, ಭಾರತದಲ್ಲಿ, ನಾವು ಬೆಳೆದು ಬಂದ ಬಗೆಯನ್ನು ಗಮನಿಸಿದರೆ, ನಮ್ಮನ್ನೆಲ್ಲ ಸೈಕಾಲಜಿ ಮಟ್ಟದಲ್ಲಿ, ಮತ್ತು ಸೈದ್ಧಾಂತಿಕವಾಗಿ ಸದಾ ಹೆದರಿಸಿ ಇಡಲಾಗುತ್ತಿತ್ತು. ಈ ಹೆದರಿಕೆಯಲ್ಲಿ ಕೆಲವೊಮ್ಮೆ ನಾವು ನಿಜ ಹೇಳುವುದಕ್ಕೂ ಹಿಂಜರಿಯುತ್ತಿದ್ದೆವು.
ನಿಮಗನ್ಸತ್ತಾ?
The environment that we grew up with accommodated questioning?
Did we even think about innovation at that time?
Or, do we challenge the status quo now?
I agree, fear is necessary, but it should not become a bottleneck limiting one's creativity.