ಮನುಷ್ಯನ ಅಭ್ಯುದಯಕ್ಕೆ ಆಹಾರಪದ್ದತಿಯು ಕೊಡುಗೆ ನೀಡುವುದೆಂದಾದರೆ, ಹೊಟ್ಟೆಗೆ ನೀಡುವ ಆಹಾರಕ್ಕಿಂತ ಇಂದ್ರಿಯಗಳಿಗೆ ಉಣಬಡಿಸುವ ಆಹಾರವು ಬಹಳಷ್ಟು ಮುಖ್ಯವಾದ ಪಾತ್ರ ವಹಿಸುತ್ತದೆ. ಆ ಇಂದ್ರಿಯಗಳಲ್ಲಿ ಒಂದಾದ ಕರ್ಣೇoದ್ರಿಯಕ್ಕೆ ನಾವು ಎಂತಹ ವಿಚಾರದಾಹಾರವನ್ನು ಉಣಬಡಿಸುತ್ತೇವೆ ಎಂಬುದು ನಮಗೆ ತಿಳಿದಿರುವುದಿಲ್ಲ. ಮಾನವನು ಜೀವನವೆಂಬ ರಹದಾರಿಯಲ್ಲಿ ಸಂಚರಿಸುವಾಗ ಬುದ್ಧಿಯೆಂಬ ಕಂದೀಲು ಬೆಳಕನ್ನು ಆಶ್ರಯಿಸುವುದಕ್ಕಿಂತ ಭಾವನೆಗಳ ಬುಡ್ಡೀದೀಪದ ಮೊರೆ ಹೋಗುತ್ತಾನೆ. ಕೇಳಿದ ವಿಚಾರಗಳನ್ನೆಲ್ಲಾ ಸತ್ಯವೆಂದು ಒಪ್ಪಿಕೊಂಡು ಅಂತೆಯೇ ಅವಸರದ ನಿರ್ಧಾರಗಳನ್ನು ಕೈಗೊಂಡು ಮೌಲ್ಯಯುತವಾದ ಸಂಬಂಧಗಳಿಗೆ ತಿಲಾಂಜಲಿ ಹೇಳಿ ಅನಾಹುತಗಳನ್ನು ಮಾಡಿಕೊಳ್ಳುವ ನಮಗೆ ಇಲ್ಲಿ ವಿವರಿಸಲಾಗಿರುವ ತಂತ್ರವು ಇದರಿಂದ ಹೊರಬರಲು ಸಹಾಯಮಾಡುತ್ತದೆ. ನಾವು ಶ್ರವಣಿಸುವ ವಿಚಾರಗಳನ್ನು ಆಲಿಸಿ, ಪರಿಶೀಲಿಸಿ ಮತ್ತು ಶೋಧಿಸಿ ಸತ್ಯವನ್ನು ತಿಳಿದುಕೊಳ್ಳುವ ಉಪಾಯದ ಬಗ್ಗೆ ಅರಿವುಮೂಡಿಸುವ ಪ್ರಯತ್ನವೇ “ಡಾ.ಶ್ರೀ ರಾಮಚಂದ್ರ ಗುರೂಜಿ”ಯವರ ಈ “ತ್ರಿತಂತ್ರ ಶೋಧಿತ ಸತ್ಯ” ಎಂಬ Yoglet ನ 7 ನೆಯ ಮಾಲಿಕೆ.
ಮಾನವನು ಎಲ್ಲಾ ವಿಷಯಗಳಲ್ಲೂ ಮುಂದುವರೆದಿದ್ದಾನೆ, ಎಲ್ಲವನ್ನೂ ಗೆದ್ದು ಅಸಾಧ್ಯಗಳನ್ನು ಸಾಧಿಸುತ್ತಾ ಬಂದಿದ್ದಾನೆ, ಬಾಹ್ಯ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ಅರಿಯುತ್ತಾನೆ. ಆದರೆ ತನ್ನನ್ನು ತಾನು ಅರಿಯುವುದರಲ್ಲಿ ವಿಫಲನಾಗಿ ತನ್ನ ಅಂತರಾಳದಲ್ಲಿ ಅವಿತಿರುವ ಅಪರಿಮಿತ ಆತ್ಮಾನಂದವನ್ನು ಅನುಭವಿಸದೇ ಆನಂದವನ್ನು ಹೊರಜಗತ್ತಿನಲ್ಲೇ ಹುಡುಕುವ ಅರೆಮರುಳುನಾಗಿದ್ದಾನೆ.
#Yoglet-5" ಆರೋಗ್ಯವೇ ಮಹಾಭಾಗ್ಯ" ಹಿತ್ ಭುಕ್, ಮಿತ್ ಭುಕ್, ಋತ್ ಭುಕ್ ಎಂದರೆ ಹಿತವಾದ ಸಾತ್ವಿಕವಾದ ಆಹಾರವನ್ನು ಮಿತವಾಗಿ ಸಮಯಕ್ಕೆ ಸರಿಯಾಗಿ ಭುಜಿಸುವುದೇ ಆರೋಗ್ಯದ ಗುಟ್ಟು ಎಂಬುದೇ ಆಯುರ್ವೇದದ ಆಹಾರನೀತಿ.
#"ಮನೋಜನ್ಯ ಸಪ್ತ ಯಾಗಗಳು" #ಸಪ್ತಯಾಗಗಳು ಸಪ್ತ ಯಾಗಗಳು ಅಂತ ಅಂದ್ರೆ ಯಾಗದ ನೆಪದಲ್ಲಿ ಪ್ರಾಣಿಗಳನ್ನು ಪಕ್ಷಿಗಳನ್ನು ಕೋಳಿಗಳನ್ನು ಬಲಿಕೊಡುವುದಲ್ಲ ನಮ್ಮ ಮನಸ್ಸಿನಲ್ಲಿ ಇರುವಂತಹ ಪ್ರಾಣಿಜನ್ಯ ಗುಣಗಳನ್ನು ಜ್ಞಾನ ಅಗ್ನಿಗೆ ಬಲಿಕೊಡಬೇಕು ಆಗ ನಾವು ಧನ್ಯ ರಾಗುತ್ತೇವೆ ಪುನೀತರಾಗಿ ಜ್ಞಾನಿಗಳ ಆಗುತ್ತೇವೆ ಅನ್ನುವುದು ನಮ್ಮ ಪ್ರಾಚೀನರ ಅಭಿಪ್ರಾಯವಾಗಿತ್ತು.
ಚತುರೋಪಾಯಗಳು (Yoglet - 3) || by Dr Sri Ramachandra Guruji
ದ್ರುಪದನ ಸುತೆ ಪಾಂಡು ಸುತರೈವರ ಸತಿ .. ಪಂಚೇಂದ್ರಿಯಗಳೊಡತಿ ಪಂಚರೊಳೀ ಮಹಾಪತಿವ್ರತೆ.. ಯಮಸುತಂಗಿತ್ತಳು ಮಧುರ ಗಾನದಿ ಕರ್ಣೇಂದ್ರಿಯಂಗೆ ಸೊಗವನು.. ಸೌಗಂಧವನರುಹಿ ಪರಿಮಳದಿ ವಾಯುಪುತ್ರನೊಡನೆ ಸಲ್ಲಾಪಂಗೈದಳು ನಾಸಿಕದಿ.. ನಿಸರ್ಗದೊಳಾನಂದದಿ ಫಲ್ಗುಣನೊಡಗೂಡಿ ಸರಸವನೆಸಗಿ ತಣಿಸಿದಳು ಚಕ್ಷೇಂದ್ರಿಂಯಂಗಂದದಿ.. ಭಕ್ಷ್ಯವನಿತ್ತು ಭೋಜನಾಸ್ವಾದದಿ ಜಿಹ್ವೇಂದ್ರಿಯ ನಕುಲನೆನಸಿಹಳು.. ಶಿಶುವಿನೋಪಾದಿಯಲಿ ಆಲಂಗಿಸಿ ಸಹದೇವನಿಂ ಸೊಗಯಿಸಿದಳು.. ಚಿತ್ತಶುದ್ಧಿಯಿಂ,ಭಾವಶುದ್ಧಿಯಿಂ ಪಂಚೇಂದ್ರಿಯಂಗೊಡತಿ ಪಂಚ ಮಹಾಪತಿವ್ರತೆಯಿವಳು ಪಾಂಚಾಲರಸನ ಪ್ರಿಯ ಕುವರಿ..
ಪಂಚೋಪಚಾರ ಪೂಜೆ ನಮ್ಮ ಹಿರಿಯರು ಕಂಡುಹಿಡಿದಿರುವ ಒಂದು ಅದ್ಬುತ ಸಾಧನ. ಮೋಕ್ಷದ ದಾರಿಗೆ ಎರಡು ವಿಧಾನ 1 - ಸಗುಣೋಪಾಸನೆ 2 - ನಿರ್ಗುಣೋಪಾಸನೆ ನಮ್ಮ ಮನಸ್ಸು ಪಂಚೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ. ಆದ್ದರಿಂದ ನಮ್ಮ ಹಿರಿಯರು ಕಣ್ಣಿಗೆ ವಿಗ್ರಹ, ಕಿವಿಗಳಿಗೆ ಗಂಟೆಯ ಶಬ್ದ, ಮೂಗಿಗೆ ಪರಿಮಳ ಬರಿತ ಸುವಾಸನೆ, ಚರ್ಮಕ್ಕೆ ಗಂಧ ಅಥವಾ ತಿಲಕ, ಹಾಗೆ ನಾಲಿಗೆಗೆ ನೈವೇದ್ಯವನ್ನು ಕೊಟ್ಟು ಉಪಚರಿಸಿದರು. ಇದನ್ನು ಮಾಡುವ ಮೂಲಕ ನಮ್ಮ ಇಂದ್ರಿಯಗಳನ್ನು ಗೆದ್ದು ನಂತರ ಆಳ ಧ್ಯಾನಕ್ಕೆ ತೆರಳುತ್ತಿದ್ದರು. ಇದುವೇ ಪೊಚೋಪಚಾರದ ಕೊಡುಗೆ ನಮ್ಮ ಹಿರಿಯರಿಂದ.
Watch video : https://youtu.be/9M873PnYpvU
ಧ್ಯಾನ ಮಾಡುವ ವಿಧಾನ (How to meditate?)
Age Regression Meditation.
"Bhavasamanvaya"(ಭಾವಸಮನ್ವಯ ಧ್ಯಾನ) dhyana
Hiranyagarbha Dhyana
“Hiranyagarbha” means “The Golden Womb”. It is the Meditative journey we undertake to visit that Golden womb. Hiranyagarbha is the source or Mother womb of everything. We existed in that cosmic realm in the form of silence. We were in the form of “Shudda Brahma” which means ‘pure form of existence’. After the huge explosion called Big Bang, we came to this sound realm and became “Shabala Brahma” which means “impure form of existence”. We never attempted to go back or visit our real source. This specially designed audio track by Dr. Sri Ramachandra Guruji takes us on a meditative tour to visit our true native.
Visiting our Golden Womb cleanses all the impurities attached to the Soul (Present in the form of Mind, Memories, Intellect, and Ego, etc..). We can get rid of all the mental ailments as well as “Karma” and achieve worldly progress as well as spiritual progress by practicing this track consistently.
Practice Yoga Nidra under the divine guidance of Dr. Sri Ramachandra Guruji.
“Nidra” is a Sanskrit word meaning “sleep”. There are two types of sleep - One is “the body's sleep” and the other one is “the Mind’s sleep”. Yoga Nidra is the sleep with complete awareness. Saints or Yogis follow this Yoga Nidra or Mind’s sleep whereas common people do rely on the body’s sleep not knowing about this science. Brain’s frequency drops from Beta to Alpha during Yoganidra and hence the Mind receives the highest amount of Cosmic energy. Half an hour of Yoga Nidra practice is equivalent to 3 hours of natural sleep.
Caution: Don’t listen to this recording while walking, driving, or in a place where you need to be fully awake and attentive.
Steps to be followed in practicing Yoga Nidra.
In Yoga Nidra, all the Physical and Mental ailments are cured fast and a quick rejuvenation happens for both body and mind. Practicing Yoga Nidra in a disciplined and systematic manner would fetch you the maximum results. Other than materialistic benefits one may also get access to higher dimensional realities, higher cosmic realms, and attain the deepest stage of Samadhi.