
ಮಾನವನು ಎಲ್ಲಾ ವಿಷಯಗಳಲ್ಲೂ ಮುಂದುವರೆದಿದ್ದಾನೆ, ಎಲ್ಲವನ್ನೂ ಗೆದ್ದು ಅಸಾಧ್ಯಗಳನ್ನು ಸಾಧಿಸುತ್ತಾ ಬಂದಿದ್ದಾನೆ, ಬಾಹ್ಯ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ಅರಿಯುತ್ತಾನೆ. ಆದರೆ ತನ್ನನ್ನು ತಾನು ಅರಿಯುವುದರಲ್ಲಿ ವಿಫಲನಾಗಿ ತನ್ನ ಅಂತರಾಳದಲ್ಲಿ ಅವಿತಿರುವ ಅಪರಿಮಿತ ಆತ್ಮಾನಂದವನ್ನು ಅನುಭವಿಸದೇ ಆನಂದವನ್ನು ಹೊರಜಗತ್ತಿನಲ್ಲೇ ಹುಡುಕುವ ಅರೆಮರುಳುನಾಗಿದ್ದಾನೆ.