ನವೆಂಬರ್ 7 - ಈ ದಿನದಂದು, ನಮ್ಮ ಭಾರತಕ್ಕೆ ಭೌತಶಾಸ್ತ್ರದಲ್ಲಿ ಮೊಟ್ಟಮೊದಲ ನೋಬಲ್ ಪ್ರಶಸ್ತಿಯನ್ನು ತಂದುಕೊಟ್ಟ ಮಹಾನ್ ವಿಜ್ಞಾನಿ, ಸರ್ ಸಿ.ವಿ. ರಾಮನ್ ಅವರ ಜನ್ಮದಿನ. ನಮ್ಮ ಸುತ್ತಲಿನ ಬೆಳಕು, ಬಣ್ಣಗಳ ಹಿಂದಿನ ರಹಸ್ಯಗಳ ಬಗ್ಗೆ ಎಂದಿಗೂ ಪ್ರಶ್ನಿಸದ ನಮಗೆ, ಕೌತುಕವೇ ಸತ್ಯದ ದಾರಿ ಎಂದು ತೋರಿಸಿಕೊಟ್ಟವರು ರಾಮನ್. ಅವರ ಪ್ರಯೋಗಗಳು ಕೇವಲ ಪ್ರಯೋಗಾಲಯಗಳಿಗೆ ಸೀಮಿತವಾಗಿರಲಿಲ್ಲ; ವೀಣೆಯ ನಾದ, ವಿಜ್ಞಾನದ ಆಳ ಹೀಗೆ ಎಲ್ಲವನ್ನೂ ವಿಶ್ಲೇಷಿಸಿ, 'ರಾಮನ್ ಎಫೆಕ್ಟ್' ನಂತಹ ಅದ್ಭುತ ಆವಿಷ್ಕಾರಗಳ ಮೂಲಕ ವಿಜ್ಞಾನ ಲೋಕವನ್ನೇ ಬೆರಗುಗೊಳಿಸಿದರು.
ಬ್ರಿಟಿಷ್ ಸರ್ಕಾರದಿಂದ 'ನೈಟ್‌ಹುಡ್' ಪ್ರಶಸ್ತಿ, ಸ್ವತಂತ್ರ ಭಾರತದಿಂದ 'ಭಾರತ ರತ್ನ', ಮತ್ತು 'ಲೆನಿನ್ ಶಾಂತಿ ಪ್ರಶಸ್ತಿ'ಗಳ ಮೂಲಕ ಗೌರವಿಸಲ್ಪಟ್ಟ ಇವರು, ಇಂದಿಗೂ ಭಾರತೀಯ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಚಿಲುಮೆ. "ಪ್ರಶ್ನಿಸಲು ನಾವು ಎಂದಿಗೂ ಹಿಂಜರಿಯಬಾರದು, ಕುತೂಹಲವೇ ಜೀವನದ ನಿಜವಾದ ಬೆಳಕು" ಎಂಬುದು ಅವರ ಜೀವನ ನಮಗೆ ಕಲಿಸುವ ಪಾಠ. TALRadio ಕನ್ನಡದ ಈ ವಿಶೇಷ ಸಂಚಿಕೆಯಲ್ಲಿ, ಸರ್ ಸಿ.ವಿ. ರಾಮನ್ ಅವರ ಜೀವನ ಮತ್ತು ಅಸಾಧಾರಣ ಸಾಧನೆಗಳನ್ನು ಸ್ಮರಿಸೋಣ. ಅವರ ಪ್ರತಿಯೊಂದು ಸಂಶೋಧನೆಯೂ ಹೇಗೆ ನಮ್ಮ ಬದುಕಿನಲ್ಲಿ ಬೆಳಕು ಚೆಲ್ಲಿದೆ ಎಂಬುದನ್ನು ಅರಿಯೋಣ.
Join us this November 7th as we celebrate the birth anniversary of Sir C.V. Raman, India's first Physics Nobel Laureate! A visionary who taught us that "curiosity is the true light of life," Raman's groundbreaking work, like the 'Raman Effect,' revolutionized our understanding of light and matter. From his early life to receiving the Bharat Ratna, his journey is a powerful testament to the spirit of inquiry and innovation. Tune in to explore the incredible legacy of this Indian scientific icon and how his discoveries continue to inspire generations.
Host: RJ Manjunath
#TALRadioKannada #SirCVRaman #RamanEffect #NobelLaureate #IndianScientist #Physics #Inspiration #Innovation #ScienceFacts #IndianPride #Legend #ScienceHeroes #Curiosity #Motivation #KannadaPodcast #BharatRatna #ScienceAndTechnology #TALRadio #NonProfit #TouchAlife
ಕನ್ನಡದ ಅಪ್ರತಿಮ ಕವಿ ದ.ರಾ. ಬೇಂದ್ರೆ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸೋಣ. ಧಾರವಾಡದಲ್ಲಿ 1896ರಲ್ಲಿ ಜನಿಸಿದ ದ. ರಾ. ಬೇಂದ್ರೆ, ತಮ್ಮ ಕಾವ್ಯದಲ್ಲಿ ಪ್ರಕೃತಿ, ಪ್ರೇಮ, ಆಧ್ಯಾತ್ಮಗಳನ್ನು ಅನಾವರಣಗೊಳಿಸಿದರು. 'ಗರಿ', 'ನಾಕುತಂತಿ' ಅವರ ಪ್ರಮುಖ ಕೃತಿಗಳು. 'ನಾಕುತಂತಿ'ಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ. 1981 ಅಕ್ಟೋಬರ್ 26 ರಂದು ನಿಧನರಾದರೂ, ಅವರ ಕಾವ್ಯ ಇಂದಿಗೂ ಅಮರ.
ಅವರ ಪುಣ್ಯ ತಿಥಿಯ ನಿಮಿತ್ತ ಅವರ ಸಾಹಿತ್ಯವನ್ನು ಸ್ಮರಿಸಲು TALRadio ಕನ್ನಡ ವಿಶೇಷ Podcast ಒಂದನ್ನು ಪ್ರಸ್ತುತಪಡಿಸಲಿದೆ. RJ ಸ್ಮ್ರಿತಿ ಇದನ್ನು ನಡೆಸಿಕೊಡಲಿದ್ದಾರೆ. ಈಗಲೇ ಕೇಳಿ ಮತ್ತು ಬೇಂದ್ರೆಯವರ ಕಾವ್ಯಾತ್ಮಕ ಲೋಕದಲ್ಲಿ ವಿಹರಿಸಿ.
On D.R. Bendre's death anniversary, we honor the legendary Kannada poet, also known as Ambikatanayadatta. Born in 1896, his profound poetry, including works like 'Gari' and the Jnanpith-winning 'Naku Tanti,' explored nature, love, and spirituality. His literary legacy, though he passed in 1981, continues to thrive. TALRadio Kannada presents a special podcast, hosted by RJ Smrithi, inviting you to explore his timeless poetic world.
Host : RJ Smrithi
#TALRadioKannada #DRBendre #KannadaPoet #LiteraryLegend #Ambikatanayadatta #JnanpithAward #KannadaLiterature #PoetryLegacy #TALRadioKannada #PodcastTribute #ImmortalVerse #IndianPoetry #LiteraryHomage #NonProfit #TALRadio #TouchALife
ಪು.ತಿ.ನರಸಿಂಹಾಚಾರ್ ಅವರ ಪುಣ್ಯತಿಥಿಯಂದು TALRadio ಕನ್ನಡ, ಅವರ ಬದುಕು-ಸಾಹಿತ್ಯ ಸ್ಮರಿಸಿದೆ. ಗೀತಮಯ ಕಾವ್ಯ, ಆಧ್ಯಾತ್ಮಿಕ ಚಿಂತನೆಗಳ ಮೂಲಕ 'ಹಂಸದಮಯಂತಿ', 'ಗೋಕುಲ ನಿರ್ಗಮನ'ದಂತಹ ಅಮೂಲ್ಯ ಕೃತಿಗಳನ್ನು ನೀಡಿದ ಪು.ತಿ.ನ. ಕನ್ನಡ ಸಂಸ್ಕೃತಿಯ ಹಿರಿಯ ಆರಾಧಕರು. ಸರಳ ಭಾಷೆಯಲ್ಲಿ ಆಳವಾದ ಚಿಂತನೆಗಳನ್ನು ನೀಡಿದ ಅವರಿಗೆ ಪಂಪ, ನಾಡೋಜ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ಅವರ ಸಾಹಿತ್ಯ ಸದಾ ಸ್ಫೂರ್ತಿಯ ಚಿಲುಮೆ.
ಅವರ ಪುಣ್ಯತಿಥಿ ನಿಮಿತ್ತ TALRadio ಕನ್ನಡ ವಿಶೇಷ ಪೊಡ್ ಕಾಸ್ಟ್ ಒಂದನ್ನು ಪ್ರಸ್ತುತಪಡಿಸಲಿದೆ. RJ Manjunath ಇದನ್ನು ನಡೆಸಿಕೊಡಲಿದ್ದಾರೆ. ಈಗಲೇ ಕೇಳಿ ಮತ್ತು ಪು.ತಿ.ನ ಅವರ ಕಾವ್ಯಾತ್ಮಕ ಲೋಕವನ್ನು ಅನ್ವೇಷಿಸಿ.
TALRadio Kannada commemorates the death anniversary of literary giant P.T. Narasimhachar Hosted by RJ Manjunath. Puthina, a revered patron of Kannada culture, gifted 'Hamsadamayanti' and 'Gokula Nirgamana' through lyrical poetry and spiritual thoughts. Honored with Pampa, Nadoja, and Kendra Sahitya Akademi awards for his profound yet simple works, his literature remains an eternal inspiration.
Host: RJ Manjunath
#TALRadioKannada #PUTHINA #KannadaLiterature #KannadaPoetry #LiteraryGiant #KannadaCulture #Inspiration #GitaMayaKavya #PampaAward #NadojaAward #KendraSahityaAkademi #NonProfit #TALRadio #TouchALife
ಇಂದು ನಾವು ಭಾರತದ ಹೆಮ್ಮೆಯ 'ಜಂಬೋ' ಅನಿಲ್ ಕುಂಬ್ಳೆ ಅವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ. 1970ರ ಅಕ್ಟೋಬರ್ 17ರಂದು ಜನಿಸಿದ ಇವರು, ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮದ ಪ್ರತೀಕ. ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್‌ಗಳು ಮತ್ತು ಏಕದಿನದಲ್ಲಿ 337 ವಿಕೆಟ್‌ಗಳೊಂದಿಗೆ ಭಾರತದ ಅಗ್ರ ಬೌಲರ್‌ಗಳಲ್ಲಿ ಒಬ್ಬರು. 1999ರಲ್ಲಿ ಪಾಕಿಸ್ತಾನ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದಿದ್ದು ಅವರ ವೃತ್ತಿಜೀವನದ ಮೈಲಿಗಲ್ಲು. ಕುಂಬ್ಳೆ ಕೇವಲ ಸ್ಪಿನ್ ಮಾಂತ್ರಿಕರಲ್ಲ, ಯಶಸ್ವಿ ನಾಯಕ ಮತ್ತು ನಿವೃತ್ತಿಯ ನಂತರವೂ ಕ್ರಿಕೆಟ್‌ಗೆ ಕೊಡುಗೆ ನೀಡುತ್ತಿದ್ದಾರೆ.
ಅವರ ಜನ್ಮದಿನದಂದು TALRadio ಕನ್ನಡ ವಿಶೇಷ Podcast ಒಂದನ್ನು ಪ್ರಸ್ತುತಪಡಿಸಲಿದೆ. RJ ಮಂಜುನಾಥ್ ಇದನ್ನು ನಡೆಸಿಕೊಡಲಿದ್ದಾರೆ. ಈಗಲೇ ಕೇಳಿ ಮತ್ತು ಕುಂಬ್ಳೆ ಅವರ ಕ್ರೀಡಾ ಬದುಕಿನಿಂದ ಸ್ಫೂರ್ತಿ ಪಡೆಯಿರಿ.
Today, we celebrate the birthday of India's proud 'Jumbo' Anil Kumble. Born on October 17, 1970, he symbolizes determination and hard work. With 619 Test wickets and 337 ODI wickets, he's among India's top bowlers. His 10-wicket haul against Pakistan in 1999 was a career highlight. Kumble is a spin wizard, a successful captain, and continues contributing to cricket. Listen to RJ Manjunath's special TALRadio Kannada podcast
Host: RJ Manjunath
#TALRadioKannada #AnilKumble #CricketLegend #Jumbo #IndianCricket #Birthday #Podcast #SpinWizard #KarnatakaPride #Inspiration #CricketIcon #TeamIndia #RecordBreaker #NonProfit #TALRadio #TouchALife
ಇಂದು ಅಕ್ಟೋಬರ್ 15, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನ. ರಾಮೇಶ್ವರಂನಿಂದ ರಾಷ್ಟ್ರಪತಿ ಭವನದವರೆಗಿನ ಅವರ ಪಯಣ ಅದ್ಭುತ. 'ಮಿಸೈಲ್ ಮ್ಯಾನ್' ಎಂದೇ ಖ್ಯಾತರಾದ ಇವರು, ಭಾರತದ ಕ್ಷಿಪಣಿ ಕಾರ್ಯಕ್ರಮಕ್ಕೆ ಅಪಾರ ಕೊಡುಗೆ ನೀಡಿದರು. 'ಜನರ ರಾಷ್ಟ್ರಪತಿ'ಯಾಗಿ ಯುವಕರಿಗೆ ದೊಡ್ಡ ಕನಸು ಕಾಣಲು ಪ್ರೇರೇಪಿಸಿದರು. ಅವರ ಆದರ್ಶಗಳು ಸದಾ ನಮಗೆ ದಾರಿದೀಪ.
ಅವರ ಜನ್ಮ ವಾರ್ಷಿಕೋತ್ಸವದ ಸವಿನೆನಪಿನಲ್ಲಿ TALRadio ಕನ್ನಡ ವಿಶೇಷ Podcast ಒಂದನ್ನು ಪ್ರಸ್ತುತಪಡಿಸಲಿದೆ. RJ ಗುರು ಇದನ್ನು ನಡೆಸಿಕೊಡಲಿದ್ದಾರೆ. ಈಗಲೇ ಕೇಳಿ ಮತ್ತು ಅಬ್ದುಲ್ ಕಾಲಂ ಅವರ ಸಾಧನೆಗಳಿಂದ ಸ್ಫೂರ್ತಿ ಪಡೆಯಿರಿ.
October 15, marks Dr. A.P.J. Abdul Kalam's birth anniversary. His journey from Rameswaram to Rashtrapati Bhavan was extraordinary. Known as the 'Missile Man,' he significantly contributed to India's missile program. As the 'People's President,' he inspired youth to dream big. His ideals continue to guide us. TALRadio Kannada presents a special podcast by RJ Guru in his honor. Tune in for inspiration.
Host: RJ Guru
#TALRadioKannada #APJAbdulKalamJayanti #KalamInspires #IndianScientist #FormerPresident #WingsOfFire #IgnitedMinds #DreamBig #YouthIcon #India #ScienceAndTechnology #Education #Motivation #Podcast #KannadaPodcast #RJGuru #NonProfit #TALRadio #TouchALife
ಡಾ. ಕೋಟ ಶಿವರಾಮ ಕಾರಂತರ ಜನ್ಮದಿನದಂದು, ಕನ್ನಡದ ಈ ಮಹಾನ್ ಸಾಹಿತಿ ಮತ್ತು ಜ್ಞಾನಪೀಠ ಪುರಸ್ಕೃತರನ್ನು ಸ್ಮರಿಸೋಣ. ಕಾದಂಬರಿಕಾರ, ನಾಟಕಕಾರ, ಯಕ್ಷಗಾನ ಕಲಾವಿದ, ವಿಜ್ಞಾನ ಲೇಖಕ, ಪರಿಸರವಾದಿ, ಶಿಕ್ಷಣ ತಜ್ಞರಾಗಿ ಅವರದ್ದು ಬಹುಮುಖ ಪ್ರತಿಭೆ. 'ಕಡಲ ತೀರದ ಭಾರ್ಗವ' ಎಂದೇ ಖ್ಯಾತರಾದ ಕಾರಂತರು, ತಮ್ಮ 'ಮೂಕಜ್ಜಿಯ ಕನಸುಗಳು' ಕಾದಂಬರಿಗೆ ಜ್ಞಾನಪೀಠ ಪಡೆದರು. ಅವರ ಬದುಕು-ಬರಹಗಳು ಸಮಾಜಕ್ಕೆ ಸದಾ ದಾರಿದೀಪ.
ಅವರ ಜನ್ಮ ವಾರ್ಷಿಕೋತ್ಸವದ ಸವಿನೆನಪಿನಲ್ಲಿ TALRadio ಕನ್ನಡ ವಿಶೇಷ Podcast ಒಂದನ್ನು ಪ್ರಸ್ತುತಪಡಿಸಲಿದೆ. RJ ದೀಕ್ಷಾ ಇದನ್ನು ನಡೆಸಿಕೊಡಲಿದ್ದಾರೆ. ಈಗಲೇ ಕೇಳಿ ಮತ್ತು ಕಾರಂತರ ಬದುಕು- ಬರಹದ ಬಗ್ಗೆ ಮತ್ತಷ್ಟು ತಿಳಿಯಿರಿ
Remembering Dr. Kota Shivaram Karanth on his birthday, a Jnanapith awardee and multi-talented Kannada literary giant. Known as 'Kadala Teerada Bhargava', his works like 'Mookajjiya Kanasugalu' earned him immense acclaim. His life and writings continue to inspire. Tune into TALRadio Kannada's special podcast with RJ Deeksha for more insights.
Host : RJ Deeksha
#TALRadioKannada #ShivaramKaranth #JnanapithAward #KannadaLiterature #LiteraryLegend #IndianAuthor #KadalaTeeradaBhargava #Karanth #MultifacetedGenius #PodcastRecommendation #Tribute #LiteraryAnniversary #KarnatakaCulture #NonProfit #TALRadio #TouchALife
ಸೆಪ್ಟೆಂಬರ್ 25, ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಐದನೇ ಪುಣ್ಯಸ್ಮರಣೆ. ಸಂಗೀತ ಲೋಕಕ್ಕೆ ಅವರ ಕೊಡುಗೆ ಅಪಾರ. ಔಪಚಾರಿಕ ತರಬೇತಿ ಇಲ್ಲದೆ, 16 ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದರು. 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆ ಮಗನಾದ ಎಸ್.ಪಿ.ಬಿ ಸರಳತೆ, ವಿನಮ್ರತೆಗೆ ಹೆಸರಾಗಿದ್ದರು. ಅವರ ಸಂಗೀತ, ಜೀವನ ನಮಗೆ ಸದಾ ಸ್ಫೂರ್ತಿ. ಈ ಮಹಾನ್ ಗಾಯಕನಿಗೆ ನಮ್ಮ ಪ್ರೀತಿಯ ಶ್ರದ್ಧಾಂಜಲಿ.
ಅವರ ಈ ಪುಣ್ಯಸ್ಮರಣೆಯ ದಿನಂದಂದು TALRadio ಕನ್ನಡ ವಿಶೇಷ Podcast ಒಂದನ್ನು ಪ್ರಸ್ತುತಪಡಿಸಲಿದೆ. RJ ಸ್ಮೃತಿ ಇದನ್ನು ನಡೆಸಿಕೊಡಲಿದ್ದಾರೆ. ಈಗಲೇ ಕೇಳಿ ಮತ್ತು ಎಸ್.ಪಿ.ಬಿ ಅವರ ಮಧುರವಾದ ಗಾನಲೋಕದಲ್ಲಿ ವಿಹರಿಸಿ.
September 25th marks the 5th death anniversary of the legendary singer S.P. Balasubrahmanyam. A self-taught maestro, he sang over 40,000 songs in 16 languages, earning a Guinness Record. Known for his humility and 'Ede Tumbi Haduvenu' show, his music and life remain an inspiration. TALRadio Kannada presents a special podcast by RJ Smrithi in his honor."
Host: RJ Smrithi
#TALRadioKannada #SPB #SPBalasubrahmanyam #MusicLegend #IndianCinema #PlaybackSinger #KannadaMusic #EdeTumbiHaduvenu #MusicalTribute #RJSmrithi #Inspiration #NonProfit #TALRadio #TouchALife
ನೃತ್ಯವು ಕೇವಲ ಒಂದು ಕಲೆಯಾಗಿರದೆ, ಮನಸ್ಸಿನ ಆಳವನ್ನು ತಲುಪುವ ಮತ್ತು ಪ್ರಶಾಂತತೆಯನ್ನು ನೀಡುವ ಒಂದು ಅದ್ಭುತ ಸಾಧನವಾಗಿದೆ. ನೃತ್ಯದ ಅಂತರಾಳದ ಶಕ್ತಿಯನ್ನ ವೃದ್ಧಿಸಿ ಸಕಾರಾತ್ಮಕ ಪರಿಣಾಮಗಳನ್ನು ನೀಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಮೇಧಾ ದೀಕ್ಷಿತ್ ಎಂಬ ಅಪರೂಪದ ಕಲಾವಿದೆ ನೃತ್ಯದ ತಾಳಗಳ ಮೂಲಕ ಮನಸ್ಸಿನ ಮೇಳವನ್ನು ಶಾಂತಗೊಳಿಸುವ ವಿನೂತನ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.
TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ ಮತ್ತು ಮನಶಾಸ್ತ್ರಜ್ಞೆಯೂ ಆಗಿರುವ ಮೇಧಾ ದೀಕ್ಷಿತ್ ತಮ್ಮ ಸ್ವಸ್ತಿ ಆರ್ಟ್ ಫೌಂಡೇಶನ್ ಮೂಲಕ ನೃತ್ಯದಿಂದ ಮನಸ್ಸಿನ ತೊಳಲಾಟಗಳನ್ನು ಬಗೆಹರಿಸುವ ದಾರಿಯನ್ನು ಕಂಡುಕೊಳ್ಳುವ ವಿಧಾನ ಮತ್ತು ಕಲೆ ಹಾಗೂ ಮನೋವಿಜ್ಞಾನ ಒಂದಂಕ್ಕೊಂದು ಹೇಗೆ ಬೆಸೆದಿದೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಆರ್‌ಜೆ ವಾಣಿ ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.
"Art and Psychology Converge: Medha Dixit's Dance Journey" highlights dance as a profound tool for mental peace. Bharatanatyam artist, choreographer, and psychologist Medha Dixit, through her Swasthi Art Foundation, uses dance to address mental struggles. In a special TALRadio Kannada interview with RJ Vani, she'll discuss how art and psychology intertwine to achieve tranquility.
Host : RJ Vani
#TALRadioKannada #MedhaDixit #DancePsychology #Bharatanatyam #ArtTherapy #MentalWellness #SwasthiArtFoundation #TALRadioKannada #Mindfulness #DanceForPeace #ArtAndScience #IndianClassicalDance #PsychologyOfDance #DanceforHealing #TherapeuticDance #HealingThroughDance #MovementTherapy #MindBodyConnection #Wellbeing #RJVani #NonProfit #TALRadio #TouchALife
ಡಾ. ವಿಷ್ಣುವರ್ಧನ್, ಕನ್ನಡದ "ಸಾಹಸ ಸಿಂಹ", "ಅಭಿನವ ಭಾರ್ಗವ", ಅಭಿಮಾನಿಗಳ ಹೃದಯದ ದಾದಾ. 1950ರಲ್ಲಿ ಮೈಸೂರಿನಲ್ಲಿ ಜನಿಸಿ, 'ನಾಗರಹಾವು' ಮೂಲಕ ಸಿನಿಪಯಣ ಆರಂಭಿಸಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಚ್ಚಳಿಯದ ಗುರುತು ಬಿಟ್ಟವರು. ಅವರ ನಟನೆ, ವಿನಯ, ಅಭಿಮಾನಿಗಳ ಮೇಲಿನ ಪ್ರೀತಿ ಎಲ್ಲವೂ ವಿಶೇಷ. ರಾಷ್ಟ್ರೀಯ, ರಾಜ್ಯ, ಫಿಲ್ಮ್‌ಫೇರ್ ಸೇರಿ ಅನೇಕ ಪ್ರಶಸ್ತಿಗಳ ಜೊತೆ "ಕರ್ನಾಟಕ ರತ್ನ" ಗೌರವ ಪಡೆದವರು. ತೆರೆ ಮೇಲೆ ಗಾಂಭೀರ್ಯ, ತೆರೆ ಹಿಂದೆ ಮೃದು ಸ್ವಭಾವ. ಇಂದಿಗೂ ಅವರ ಬದುಕು ಯುವ ಪೀಳಿಗೆಗೆ ಸ್ಫೂರ್ತಿ.
ಅವರ ಜನ್ಮ ವಾರ್ಷಿಕೋತ್ಸವದ ಸವಿನೆನಪಿನಲ್ಲಿ TALRadio ಕನ್ನಡ ವಿಶೇಷ Podcast ಒಂದನ್ನು ಪ್ರಸ್ತುತಪಡಿಸಲಿದೆ. RJ ಮಂಜುನಾಥ್ ಇದನ್ನು ನಡೆಸಿಕೊಡಲಿದ್ದಾರೆ. ಈಗಲೇ ಕೇಳಿ ಮತ್ತು ವಿಷ್ಣುವರ್ಧನ್ ಅವರು ಕಲಾವಿದರಾಗಿ ಬೆಳೆದು ಬಂದ ದಾರಿಯಿಂದ ಸ್ಫೂರ್ತಿ ಪಡೆಯಿರಿ.
TALRadio Kannada presents a special podcast, Hosted by RJ Manjunath. on the birth anniversary of Dr. Vishnuvardhan, The Phoenix of Indian cinema. From Nagarahavu to 200+ films, his acting, humanity, and love for fans made him unforgettable. Honored with Karnataka Ratna, his legacy continues to inspire generations.
Host: RJ Manjunath
#TALRadioKannada #DrVishnuvardhan #SahasaSimha #KannadaCinema #KarnatakaRatna #VishnuDada #IndianCinema #LegendLivesOn #RJManjunath #NonProfit #TALRadio #TouchALife
ತಂತ್ರಜ್ಞಾನದ ಸದುಪಯೋಗದ ಮೂಲಕ ವಿಕಲಚೇತನರ ಜೀವನದಲ್ಲಿ ಆಶಾಕಿರಣ ಮೂಡಿಸುವ 'ಮಿತ್ರ ಜ್ಯೋತಿ' ಸಂಸ್ಥೆ. ಸಮಾನ ಮನಸ್ಕರ ಜೊತೆಗೂಡಿ, ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿ, ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಗತ್ಯ ತರಬೇತಿ ಹಾಗೂ ನೆರವು ನೀಡುವ ಪ್ರೇರಕ ಶಕ್ತಿಯ ಮೂಲಕ ಪ್ರತಿಯೊಬ್ಬರಿಗೂ ಉಜ್ವಲ ಭವಿಷ್ಯವನ್ನು ಕಲ್ಪಿಸಲು ಮಹತ್ವಾಕಾಂಕ್ಷೆಯಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ.
TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಬೆಂಗಳೂರಿನ ಮಿತ್ರಜ್ಯೋತಿ ಸಂಸ್ಥೆಯ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ಟ್ರಸ್ಟಿ ಆದ Ms. ಮಧು ಸಿಂಘಾಲ್ ಅವರು ತಂತ್ರಜ್ಞಾನದ ಮೂಲಕ ವಿಕಲಚೇತನರ ಬದುಕನ್ನು ಸರಳಗೊಳಿಸುತ್ತಿರುವ ಮಿತ್ರ ಜ್ಯೋತಿ ಸಂಸ್ಥೆಯ ಬಗ್ಗೆ ಮಾತನಾಡಲಿದ್ದಾರೆ. ಆರ್‌ಜೆ ಗುರು ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.
TALRadio Kannada presents a special interview with Ms. Madhu Singhal, Founder & Managing Trustee of Bengaluru's Mitra Jyothi. Discover how Mitra Jyothi empowers disabled individuals by leveraging technology, unveiling their talents, and providing training for active societal participation, fostering brighter futures. Join RJ Guru for this inspiring conversation.
Host : RJ Guru
#TALRadioKannada #MitraJyothi #MadhuSinghal #Empowerment #TechForGood #DisabilityInclusion #Accessibility #InclusiveTech #DifferentlyAbled #SocialImpact #Inspiration #CommunitySupport #BridgingTheGap #InnovationForGood #NonProfit #TALRadio #TouchALife
ವಿಜ್ಞಾನ-ಆಧಾರಿತ ಒಳನೋಟಗಳೊಂದಿಗೆ ಮಕ್ಕಳ ಸುಭದ್ರ ಭವಿಷ್ಯವನ್ನು ರೂಪಿಸುವ ತಮಹರ್, ವಿಶೇಷ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಮರ್ಪಿತವಾದ ಸಂಸ್ಥೆಯಾಗಿದೆ. ಮಕ್ಕಳ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಪ್ರತಿಯೊಬ್ಬ ಮಗುವಿನ ಸಾಮರ್ಥ್ಯವನ್ನು ಪೋಷಿಸುತ್ತ ಸಮಗ್ರ ಆರೈಕೆಯನ್ನು ಒದಗಿಸುವ ಮೂಲಕ, ವಿಶೇಷ ಮಕ್ಕಳ ಸಬಲೀಕರಣ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತದೆ.
TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ತಮಹರ್ ಟ್ರಸ್ಟ್‌ನ ಸಂಸ್ಥಾಪಕಿ ಮತ್ತು ಸ್ಥಾಪಕಿ ಡಾ. ವೈಶಾಲಿ ಪೈ ಅವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವೈಜ್ಞಾನಿಕ ದೃಷ್ಟಿಕೋನಗಳು ಹೇಗೆ ಪೂರಕವಾಗಿದೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಆರ್‌ಜೆ ದೀಕ್ಷಾ ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.
Tamahar, dedicated to the holistic development of special needs children, empowers them with science-backed insights. Founder Dr. Vaishali Pai will discuss the importance of a scientific approach to child development in a special interview with RJ Deeksha on TALRadio Kannada. Don't miss this insightful conversation!
Host : RJ Deeksha
#TALRadioKannada #Tamahar #SpecialNeedsChildren #ChildDevelopment #ScienceBasedLearning #DrVaishaliPai #RJDeeksha #Parenting #InclusiveEducation #NonProfit #TALRadio #TouchALife
ಕನ್ನಡ ಸಾರಸ್ವತ ಲೋಕದ ಮೇರು ಪ್ರತಿಭೆ, ಅಕ್ಷರಗಳ ಮಾಂತ್ರಿಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ವಾರ್ಷಿಕೋತ್ಸವ. ಚಿದಂಬರ ರಹಸ್ಯ, ಕರ್ವಾಲೋ, ಅಬಚೂರಿನ ಪೋಸ್ಟ್ ಆಫೀಸ್ ಮುಂತಾದ ಕೃತಿಗಳ ಮೂಲಕ ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಬರಹಗಾರರಾಗಿ, ಚಿಂತಕರಾಗಿ, ಪರಿಸರವಾದಿಯಾಗಿ, ಕೃಷಿಕರಾಗಿ, ಛಾಯಾಗ್ರಾಹಕರಾಗಿ ಅವರ ಕೊಡುಗೆ ಅಪಾರ. ಮಲೆನಾಡಿನ ಸೊಗಡನ್ನು, ಪ್ರಕೃತಿಯ ಅಂತರಂಗವನ್ನು ತಮ್ಮ ಸರಳ, ನೇರ ಶೈಲಿಯಲ್ಲಿ ಪರಿಚಯಿಸಿದ ತೇಜಸ್ವಿ, ಕನ್ನಡ ಸಾಹಿತ್ಯಕ್ಕೆ ಹೊಸ ದೃಷ್ಟಿಕೋನ ನೀಡಿದವರು. ಅವರ ಅಕ್ಷರಗಳು, ಚಿಂತನೆಗಳು ಸದಾ ಜೀವಂತ. ಅವರ ಜನ್ಮ ವಾರ್ಷಿಕೋತ್ಸವದ ಸವಿನೆನಪಿನಲ್ಲಿ TALRadio ಕನ್ನಡ ವಿಶೇಷ Podcast ಒಂದನ್ನು ಪ್ರಸ್ತುತಪಡಿಸಲಿದೆ. RJ ದೀಕ್ಷಾ ಇದನ್ನು ನಡೆಸಿಕೊಡಲಿದ್ದಾರೆ. ಈಗಲೇ ಕೇಳಿ ಮತ್ತು ತೇಜಸ್ವಿಯವರ ವಿಸ್ಮಯ ಮತ್ತು ವಿಶೇಷ ಪ್ರಪಂಚದಲ್ಲಿ ವಿಹರಿಸಿ.
Today marks the birth anniversary of K.P. Poornachandra Tejaswi, a titan of Kannada literature and a wizard of words. His works like Chidambara Rahasya, Karvalo, and Abachurina Post Office enriched Kannada literature. A writer, thinker, environmentalist, farmer, and photographer, Tejaswi introduced the essence of Malenadu and nature's depths with his simple, direct style. His words and thoughts live on. TALRadio Kannada presents a special podcast hosted by RJ Deeksha in his memory. Tune in now!
Host : RJ Deeksha
#TALRadioKannada #KPP #PoornachandraTejaswi #KannadaLiterature #LiteraryIcon #Karnataka #AuthorLife #IndianLiterature #RJDeeksha #BirthAnniversary #LiteraryWorld #KannadaAuthor #Tejaswi #Legend #WritersOfIndia #LiteraryLegacy #NonProfit #TALRadio #TouchAlife
ಶಿಕ್ಷಕರು ನಮ್ಮ ಬದುಕಿನ ದಾರಿದೀಪ. ಅವರು ಜ್ಞಾನದ ಜೊತೆ ಬದುಕಿನ ಮೌಲ್ಯಗಳನ್ನು ಕಲಿಸಿ, ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ತುಂಬುತ್ತಾರೆ. ನಮ್ಮೆಲ್ಲರ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಅವರ ನಿಸ್ವಾರ್ಥ ಸೇವೆ, ತಾಳ್ಮೆ ಮತ್ತು ಪ್ರೀತಿಗೆ ನಾವು ಕೃತಜ್ಞತೆ ಸಲ್ಲಿಸಬೇಕು. ನಮ್ಮ ಭವಿಷ್ಯದ ರೂವಾರಿಗಳಾದ ಶಿಕ್ಷಕರ ತ್ಯಾಗ, ಪ್ರೀತಿ ಮತ್ತು ಸಮರ್ಪಣಾ ಮನೋಭಾವಕ್ಕೆ ನಾವು ಸದಾ ಚಿರಋಣಿ.
TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಬೆಂಗಳೂರಿನ ಬ್ರೈಟ್ ಕಿಡ್ಜ್ ಪ್ರಿಸ್ಕೂಲ್ ಶಾಲೆಯ ಸಂಸ್ಥಾಪಕರು ಮತ್ತು ಪ್ರಾಂಶುಪಾಲರಾದ ರಶ್ಮಿ ಜಗದೀಶ್ ಅವರು ಮಕ್ಕಳ ಶಿಕ್ಷಣದ ಕುರಿತು ವಹಿಸಬೇಕಾದ ಕಾಳಜಿಯ ಬಗ್ಗೆ, ಮಕ್ಕಳಿಗೆ ಕಲಿಸಬೇಕಾದ ಹೊಸ ಅಂಶಗಳನ್ನು ಕಂಡುಕೊಳ್ಳುವ ವಿಧಾನಗಳ ಬಗ್ಗೆ ಮಾತನಾಡಲಿದ್ದಾರೆ. ಆರ್‌ಜೆ ಗುರು ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.
Teachers are guiding lights, imparting knowledge, values, and strength to face challenges. We owe gratitude to these architects of our future for their selfless service, patience, love, and dedication. Tune into TALRadio Kannada's special interview with Rashmi Jagadish, founder of Bright Kidz Preschool, as she discusses child education and innovative teaching methods with RJ Guru.
Host : RJ Guru
#TALRadioKannada #TeachersDay #Educators #Inspiration #ChildEducation #Parenting #Preschool #Learning #FutureBuilders #Knowledge #Values #Interview #EducationMatters #Guidance #BrightKids #NonProfit #TALRadio #TouchALife
ಬೆಂಗಳೂರಿನಂತಹ ಮಹಾನಗರ, ಒಂದು ಕಡೆ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದರೆ, ಇನ್ನೊಂದು ಕಡೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಅಸಂಖ್ಯಾತ ಜನರಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿರುವ ವಿಶಿಷ್ಟವಾದ ಸಂಸ್ಥೆಯೇ 'ಬೆಂಗಳೂರು ಫುಡ್ ಬ್ಯಾಂಕ್'. ಹಸಿವನ್ನು ನೀಗಿಸುವ ಮುಖ್ಯ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ, ಅದನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಅಗತ್ಯವಿರುವ ವ್ಯಕ್ತಿಗಳಿಗೆ, ಸಮುದಾಯ ಮತ್ತು ಆಶ್ರಮಗಳಿಗೆ ತಲುಪಿಸುವ ಮಹತ್ತರವಾದ ಕಾರ್ಯವನ್ನು ಮಾಡುತ್ತಿದೆ.
TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಬೆಂಗಳೂರು ಫುಡ್ ಬ್ಯಾಂಕ್‌ನ ಲೀಡ್ ಮತ್ತು ಗ್ರಿಫಿತ್ ಫುಡ್ಸ್‌ನ ಸಸ್ಟೈನಬಿಲಿಟಿ ಮ್ಯಾನೇಜರ್ ಆದ ಶ್ರೀಮತಿ ಭಾಗ್ಯಲಕ್ಷ್ಮಿ ಗಣಪತಿ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅವರು ಫುಡ್ ಬ್ಯಾಂಕ್‌ನ ಕಾರ್ಯವೈಖರಿ, ಸವಾಲುಗಳು ಮತ್ತು ಹಸಿವು ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಅದರ ಮಹತ್ವದ ಪಾತ್ರದ ಬಗ್ಗೆ ಮಾತನಾಡಲಿದ್ದಾರೆ. ಆರ್‌ಜೆ ಸ್ಮೃತಿ ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.
While the metropolis of Bangalore sees rapid development, many still struggle for a single meal. The Bangalore Food Bank addresses this by collecting surplus food and distributing it to needy individuals, communities, and shelters. In a special interview on TALRadio Kannada , host RJ Smrithi speaks with Mrs. Bhagyalakshmi Ganapathy, Lead at Bangalore Food Bank. They will discuss the organization's operations, challenges, and its crucial role in building a hunger-free society.
Host : RJ Smrithi
#TALKannadaRadio #BangaloreFoodBank #OvercomingHunger #FightHunger #ZeroHunger #FoodForAll #EndHunger #FoodSecurity #RadioInterview #Bengaluru #NammaBengaluru #CommunityService #SocialImpact #FoodWaste #RJSmrithi #NonProfit #TALRadio #TouchALife
ದೃಷ್ಟಿ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಕ್ರೀಡೆ ಮತ್ತು ಕಲಿಕೆ ಎರಡೂ ಮಹತ್ವವಾದದ್ದು. ಕ್ರೀಡೆಯು ದೈಹಿಕ ಸಾಮರ್ಥ್ಯ, ಸಮನ್ವಯತೆ, ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತ ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಿದರೆ, ಕಲಿಕೆಯು ಜ್ಞಾನ, ಅರಿವು ಮತ್ತು ಸೃಜನಶೀಲತೆಯನ್ನು ವೃದ್ಧಿಸುತ್ತದೆ. ವಿಕಲಚೇತನರಿಗೆ ಸವಾಲುಗಳನ್ನು ಎದುರಿಸಲು ಹೊಸ ಮಾರ್ಗಗಳನ್ನು ನೀಡುತ್ತ, ವ್ಯಕ್ತಿತ್ವ ವಿಕಸನ ಮತ್ತು ಸ್ವಾವಲಂಬಿ ಜೀವನಕ್ಕೆ ದಾರಿಮಾಡಿಕೊಡುವಲ್ಲಿ ಸಮರ್ಥನಂ ಸಂಸ್ಥೆ ವಿಶೇಷವಾಗಿ ಶ್ರಮಿಸುತ್ತಿದೆ.
TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಸಮರ್ಥನಂ ಅಂಗವಿಕಲರ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಮತ್ತು ಭಾರತದಲ್ಲಿನ ಅಂಧರ ಕ್ರಿಕೆಟ್ ಸಂಘದ ಅಧ್ಯಕ್ಷರಾದ ಮಹಾಂತೇಶ್ ಜಿ ಕಿವಡಸಣ್ಣವರ್ ಅವರು ಕ್ರೀಡೆ ಮತ್ತು ಕಲಿಕೆಯ ಮೂಲಕ ದೃಷ್ಟಿಹೀನರ ಸರ್ವತೋಮುಖ ಬೆಳವಣಿಗೆಯ ಕುರಿತು ಮತ್ತು ದೃಷ್ಟಿ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಕ್ರೀಡೆ ಮತ್ತು ಕಲಿಕೆ ಹೇಗೆ ಪೂರಕವಾಗಿದೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಆರ್‌ಜೆ ದೀಕ್ಷಾ ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.
Sports and learning are crucial for visually challenged individuals. Sports build physical ability, coordination, confidence, and social skills, while learning enhances knowledge and creativity. Samarthanam Trust for the Disabled works to empower them for holistic development and independent living. In a special interview on TALRadio Kannada, Mahantesh G Kivadasannavar, Founder Trustee of Samarthanam and Chairman of Cricket Association for the Blind in India, will discuss how sports and learning contribute to the all-round growth of the visually impaired. RJ Deeksha will host the interview.
Host : Deeksha
#TALRadioKannada #VisuallyChallenged #Empowerment #SportsForDisabled #InclusiveLearning #SamarthanamTrust #CricketForTheBlind #HolisticDevelopment #NonProfit #TALRadio #TouchALife
"ಸ್ವಾತಂತ್ರ್ಯೋತ್ಸವ: ಕೇವಲ ಆಚರಣೆಯಲ್ಲ, ಒಂದು ಜವಾಬ್ದಾರಿ" ಸ್ವಾತಂತ್ರ್ಯ ದಿನಾಚರಣೆ ಎಂದರೆ ಕೇವಲ ಧ್ವಜಾರೋಹಣ, ಸಿಹಿ ಹಂಚುವಿಕೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾದ ಆಚರಣೆಯಲ್ಲ. ಇದು ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗಡಿಯಲ್ಲಿ ದೇಶ ಕಾಯುವ ಸೈನಿಕರ ಬಲಿದಾನವನ್ನು ಸ್ಮರಿಸುವ ಪವಿತ್ರ ದಿನ.
TALRadio ಕನ್ನಡ ಪ್ರಸ್ತುತಪಡಿಸುವ ಈ ವಿಶೇಷ ಸಂದರ್ಶನದಲ್ಲಿ ಅತಿಥಿಯಾಗಿ ಭಾರತೀಯ ವಾಯುಪಡೆಯ ನಿವೃತ್ತ ವಿಮಾನಯಾನ ಹವಾಮಾನ ಶಾಸ್ತ್ರಜ್ಞರಾದ ನಾಗರಾಜ್ ಬಿ.ವಿ. ಶಾಸ್ತ್ರಿ ಅವರು ಭಾಗವಹಿಸಲಿದ್ದಾರೆ. ನಿರೂಪಕ RJ ಗುರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ದೇಶಪ್ರೇಮದ ಜೊತೆ ಜವಾಬ್ದಾರಿಯನ್ನು ಜನರಿಗೆ ನೆನಪಿಸುವುದು. ದೇಶಭಕ್ತಿಯನ್ನು ಜಾಗೃತಗೊಳಿಸುವ ಈ ಮಾತುಕತೆಯನ್ನು ತಪ್ಪದೆ ಕೇಳಿ.
"Independence Day: Not just a celebration, but a responsibility." TALRadio Kannada presents a special interview with Nagaraj B.V. Shastri, a retired Aviation Meteorologist from the Indian Air Force. Hosted by RJ Guru, this program explores the true meaning of patriotism and our civic duties. Don't miss this inspiring conversation intended to awaken a sense of national responsibility.
Host : Guru
#TALRadioKannada #IndependenceDay #IndianAirForce #SpecialInterview #Patriotism #India #Responsibility #NonProfit #TALRadio #TouchALife
ಕಸದ ಬುಟ್ಟಿ ಸೇರಬೇಕಿದ್ದ ನಿಮ್ಮ ಹಳೆಯ ಶೂಗಳು, ಇನ್ನೊಂದು ಮಗುವಿನ ಹೊಸ ಬದುಕಿನ ಹೆಜ್ಜೆಯಾಗಬಹುದು. ಇದೇ ರೀತಿ 'ಗ್ರೀನ್‌ಸೋಲ್' ಎಂಬ ಸಂಸ್ಥೆಯು ಹಳೆಯ ಪಾದರಕ್ಷೆಗಳಿಗೆ ಮರುಜೀವ ನೀಡಿ, ಲಕ್ಷಾಂತರ ಬಡಮಕ್ಕಳ ಕಾಲಿಗೆ ರಕ್ಷಣೆ ನೀಡುತ್ತಿದೆ. ನಿಮ್ಮ ಒಂದು ಸಣ್ಣ ದಾನ, ಅವರ ಪಾಲಿಗೆ ಸುರಕ್ಷತೆ, ಆರೋಗ್ಯ ಮತ್ತು ಗೌರವದ ಕಾಣಿಕೆಯಾಗಬಲ್ಲದು. ಈ ಮಹತ್ಕಾರ್ಯದಲ್ಲಿ ನೀವು ಭಾಗಿಯಾಗಿ.
The old shoes you might discard could be the first step on a new path for a child. This is the heart of 'Greensole's' mission: breathing new life into used footwear to shield the feet of hundreds of thousands of children in need. Your simple donation becomes a profound gift of safety, health, and the dignity to walk tall. Join this life-changing cause.
Host : Manjunath
#TALRadioKannada #Greensole #DonateShoes #ShoesForSouls #SustainableSteps #WalkWithDignity #GiveASecondChance #SmallStepsBigImpact #Upcycle #SocialImpact #NonProfit #TALRadio #TouchALife
ಭಾರತದಲ್ಲಿ ಬಡತನವನ್ನು ಹೋಗಲಾಡಿಸಲು ಕಾರ್ಯ ನಿರ್ವಹಿಸುತ್ತಿರುವ ಪ್ರೌಡ್ ಇಂಡಿಯನ್ ಸಂಸ್ಥೆಯು ಜನರು ಸ್ವಾವಲಂಬಿಗಳಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡುವುದೇ ಇದರ ಮುಖ್ಯ ಗುರಿಯಾಗಿದೆ. ಇದಕ್ಕಾಗಿ, ಅಗತ್ಯವಿರುವವರಿಗೆ ವ್ಯಾಪಾರ ಮಾಡಲು ಬೇಕಾದ ತರಬೇತಿ, ಸಹಾಯ ಮತ್ತು ಅವಕಾಶಗಳನ್ನು ಒದಗಿಸಿ, ಅವರು ಆರ್ಥಿಕವಾಗಿ ಸದೃಢರಾಗಲು ಈ ಸಂಸ್ಥೆ ನೆರವಾಗುತ್ತದೆ. ಸಂಸ್ಥೆಯ ಸಹ ಸಂಸ್ಥಾಪಕರಾದ ಸೆಂತಿಲ್ ಕುಮಾರ್ ಅವರು ನಮ್ಮ ನಿರೂಪಕ ಗುರು ಅವರ ಜೊತೆ ಪ್ರೌಡ್ ಇಂಡಿಯನ್ ಸಂಸ್ಥೆಯು ಕಲಿಯುವ ಮನಸ್ಸುಗಳಿಗೆ ಹೇಗೆ ಆಸರೆಯಾಗಿದೆ ಮತ್ತು ಸಮಾಜದ ಒಳಿತಿಗಾಗಿ ಯಾವ ರೀತಿ ಶ್ರಮಿಸುತ್ತಿದೆ ಎಂಬುದರ ಕುರಿತು ಒಂದು ಸ್ಫೂರ್ತಿದಾಯಕ ಮಾತುಕತೆ ಇದಾಗಿದೆ.
Proud Indian is an organization that works to eradicate poverty in India. Its main goal is to make people self-reliant so they can stand on their own feet. To achieve this, the organization helps them become financially stable by providing necessary training, support, and business opportunities to those in need. Join host Guru for an inspiring interview with S Chenthil Kumar, Co-Founder of Proud Indian. Discover how their organization fights poverty by empowering people with business training and support, helping them become self-reliant.
Host : Guru
#TALRadioKannada #ProudIndian #ChenthilKumar #RJGuru #SpecialInterview #EradicatePoverty #SocialImpact #SelfReliance #CommunityDevelopment #Empowerment #NGOIndia #MakingADifference #SocialWork #NonProfit #TALRadio #TouchALife
ಪ್ರವಾಹದಂತಹ ಶಾಪವನ್ನು ವರವನ್ನಾಗಿ ಪರಿವರ್ತಿಸುವ ಅದ್ಭುತ ಉಪಾಯವೊಂದನ್ನು ದೆಹಲಿಯ NDMC 'ಮಾಡ್ಯುಲರ್ ಗುಂಡಿ'ಗಳ ಮೂಲಕ ಹೊಸ ಭರವಸೆ ಮೂಡಿಸಿದೆ. ಈ ತಂತ್ರಜ್ಞಾನ ಪ್ರವಾಹ ಭೀತಿಯನ್ನು ತಡೆಯುವುದಲ್ಲದೇ, ಪ್ರತಿ ಮಳೆಹನಿಯನ್ನು ಭೂಮಿಯ ಒಡಲಿಗೆ ಸೇರಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕೇವಲ ಸರ್ಕಾರದ ಯೋಜನೆಯಲ್ಲ, ನಮ್ಮೆಲ್ಲರ ಜವಾಬ್ದಾರಿ ಕೂಡ. ಬನ್ನಿ, ನಾವೂ ಇಂತಹ ಕಾರ್ಯದಲ್ಲಿ ಕೈಜೋಡಿಸಿ ನಮ್ಮ ನಗರಗಳನ್ನು ಜಲ-ಸಮೃದ್ಧವಾಗಿಸೋಣ ಮತ್ತು ಪ್ರವಾಹದ ಭಯವನ್ನು ಮೆಟ್ಟಿ ನಿಲ್ಲೋಣ. ಮಳೆ ನೀರು ನಮ್ಮ ಭವಿಷ್ಯದ ಜೀವಜಲವಾಗಲಿ.
Delhi is redefining its relationship with rain. Smart 'Modular Pits' are turning floodwaters into a lifeline, preventing disaster while replenishing precious groundwater. It's not just a policy—it's a powerful call for us all to build a water-resilient future, one drop at a time.
Host: Smrithi
#TALRadioKannada #RainwaterHarvesting #FloodControl #UrbanInnovation #Delhi #WaterIsLife #SustainableCities #FutureIsWater #CommunityAction #NonProfit #TALRadio #TouchALife
ಪಶ್ಚಿಮ ಬಂಗಾಳದ ಸುಂದರಬನ್ಸ್‌ನಲ್ಲಿ, ಸಮುದ್ರ ಮಟ್ಟ ಏರಿಕೆಯಿಂದ ಉಪ್ಪಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಮಹಿಳೆಯರೇ ಪರಿಹಾರ ಕಂಡುಕೊಂಡಿದ್ದಾರೆ. ಇಲ್ಲಿನ ಸಾಮಾನ್ಯ ಮಹಿಳೆಯರು, ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ನಿರ್ಮಿಸಿ ಸಿಹಿ ನೀರನ್ನು ಸಂಗ್ರಹಿಸುವ ಮೂಲಕ ಜಲ ಸಂರಕ್ಷಣೆಯ ರಾಯಭಾರಿಗಳಾಗಿದ್ದರೆ . ಇದು ಕೇವಲ ನೀರಿನ ಕಥೆಯಲ್ಲ; ಹವಾಮಾನ ಬದಲಾವಣೆಯ ವಿರುದ್ಧ ಮಹಿಳೆಯರ ಛಲ, ನಾಯಕತ್ವ ಮತ್ತು ಸಂಕಷ್ಟವನ್ನು ಮೆಟ್ಟಿ ನಿಲ್ಲುವ ಸ್ಫೂರ್ತಿದಾಯಕ ಹೋರಾಟ. ನಿಜವಾದ ಬದಲಾವಣೆ ಹಳ್ಳಿಗಳಿಂದಲೇ ಆರಂಭವಾಗುತ್ತದೆ ಎಂಬುದಕ್ಕೆ ಇದು ಶ್ರೇಷ್ಠ ನಿದರ್ಶನ.
Faced with saltwater contamination in the Sundarbans, local women are not waiting for saviors—they are becoming them. By building rainwater harvesting systems, they are leading a charge against climate change from the ground up. This is a story of incredible strength and a reminder that true leadership and lasting change are born from grassroots action.
#TALRadioKannada #WomenLedAction #ClimateWarriors #Sundarbans #RainwaterHarvesting #ClimateResilience #Grassroots #WaterIsLife #Hope #CommunityPower #NonProfit #TALRadio #TouchALife