
ಬೆಂಗಳೂರಿನಂತಹ ಮಹಾನಗರ, ಒಂದು ಕಡೆ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದರೆ, ಇನ್ನೊಂದು ಕಡೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಅಸಂಖ್ಯಾತ ಜನರಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿರುವ ವಿಶಿಷ್ಟವಾದ ಸಂಸ್ಥೆಯೇ 'ಬೆಂಗಳೂರು ಫುಡ್ ಬ್ಯಾಂಕ್'. ಹಸಿವನ್ನು ನೀಗಿಸುವ ಮುಖ್ಯ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ, ಅದನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಅಗತ್ಯವಿರುವ ವ್ಯಕ್ತಿಗಳಿಗೆ, ಸಮುದಾಯ ಮತ್ತು ಆಶ್ರಮಗಳಿಗೆ ತಲುಪಿಸುವ ಮಹತ್ತರವಾದ ಕಾರ್ಯವನ್ನು ಮಾಡುತ್ತಿದೆ.
TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಬೆಂಗಳೂರು ಫುಡ್ ಬ್ಯಾಂಕ್‌ನ ಲೀಡ್ ಮತ್ತು ಗ್ರಿಫಿತ್ ಫುಡ್ಸ್‌ನ ಸಸ್ಟೈನಬಿಲಿಟಿ ಮ್ಯಾನೇಜರ್ ಆದ ಶ್ರೀಮತಿ ಭಾಗ್ಯಲಕ್ಷ್ಮಿ ಗಣಪತಿ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅವರು ಫುಡ್ ಬ್ಯಾಂಕ್‌ನ ಕಾರ್ಯವೈಖರಿ, ಸವಾಲುಗಳು ಮತ್ತು ಹಸಿವು ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಅದರ ಮಹತ್ವದ ಪಾತ್ರದ ಬಗ್ಗೆ ಮಾತನಾಡಲಿದ್ದಾರೆ. ಆರ್‌ಜೆ ಸ್ಮೃತಿ ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.
While the metropolis of Bangalore sees rapid development, many still struggle for a single meal. The Bangalore Food Bank addresses this by collecting surplus food and distributing it to needy individuals, communities, and shelters. In a special interview on TALRadio Kannada , host RJ Smrithi speaks with Mrs. Bhagyalakshmi Ganapathy, Lead at Bangalore Food Bank. They will discuss the organization's operations, challenges, and its crucial role in building a hunger-free society.
Host : RJ Smrithi
#TALKannadaRadio #BangaloreFoodBank #OvercomingHunger #FightHunger #ZeroHunger #FoodForAll #EndHunger #FoodSecurity #RadioInterview #Bengaluru #NammaBengaluru #CommunityService #SocialImpact #FoodWaste #RJSmrithi #NonProfit #TALRadio #TouchALife