ಬಣ್ಣವಿಲ್ಲದ ಪೇಪರ್ ಒಂದು ದಿನ ಪತ್ರಿಕೆ ಬಣ್ಣವಿಲ್ಲದ ಪೇಪರ್ ಆಗ ಬೇಕೆ ಅಥ್ವಾ ಕ್ರಿಯಾಶೀಲಪಾಗಿ ರೋಚಕ ಸುದ್ದಿಗಳ ನೀಡ ಬೇಕಾ? ಬನ್ನಿ ಅರಳಿಕಟ್ಟೆಯ ಕೆಳಗೆ ನಮ್ಮ ಪ್ರಜಾವಾಣಿಯ ಸಂಪಾದಕರಾದ RAVINDRA ಭಟ್ ಕೂತಿದ್ದಾರೆ. ಅವರ ಜೊತೆ ಒಬ್ಬ ಸಂಪಾದಕನಾಗಿ ಮಾಡಬೇಕಾದ ಕರ್ತವ್ಯಗಳು, ಸಂಪಾದಕರ ಮುಂದಿರುವ ಸವಾಲುಗಳು ಇತ್ಯಾದಿಗಳ ಬಗ್ಗೆ ಮಾತಾಡೋಣ. ಈ podcast ಎರಡು ಭಾಗದಲ್ಲಿ ಮೂಡುವುದು. ಇದು ಭಾಗ (2)
ಬಣ್ಣವಿಲ್ಲದ ಪೇಪರ್
ಒಂದು ದಿನ ಪತ್ರಿಕೆ ಬಣ್ಣವಿಲ್ಲದ ಪೇಪರ್ ಆಗ ಬೇಕೆ ಅಥ್ವಾ ಕ್ರಿಯಾಶೀಲಪಾಗಿ ರೋಚಕ ಸುದ್ದಿಗಳ ನೀಡ ಬೇಕಾ? ಬನ್ನಿ ಅರಳಿಕಟ್ಟೆಯ ಕೆಳಗೆ ನಮ್ಮ ಪ್ರಜಾವಾಣಿಯ ಸಂಪಾದಕರಾದ ಪ್ರವೀಣ ಭಟ್ ಕೂತಿದ್ದಾರೆ. ಅವರ ಜೊತೆ ಒಬ್ಬ ಸಂಪಾದಕನಾಗಿ ಮಾಡಬೇಕಾದ ಕರ್ತವ್ಯಗಳು, ಸಂಪಾದಕರ ಮುಂದಿರುವ ಸವಾಲುಗಳು ಇತ್ಯಾದಿಗಳ ಬಗ್ಗೆ ಮಾತಾಡೋಣ. ಈ podcast ಎರಡು ಭಾಗದಲ್ಲಿ ಮೂಡುವುದು. ಇದು ಮೊದಲನೆಯ ಭಾಗ
Episodes on nuclear physics https://open.spotify.com/episode/0uAS9FukG44crq54WIEUDA
0:00 Introduction. Why did a physics graduate take up journalism?
ಭೌತಶಾಸ್ತ್ರದ ಪದವೀಧರರಾಗಿದ್ದರೂ ಪತ್ರಿಕೋದ್ಯಮ ಆಯ್ದುಕೊಂಡಿದ್ದು ಯಾಕೆ?
00:3 Dare Devil Mustafa Ad
00:04 What does an editor do?
ಸಂಪಾದಕರ ಕೆಲಸ ಏನು?
10:27 Does the editor have to read every word of his publication
ಒಬ್ಬ ಸಂಪಾದಕರು ಪ್ರತಿಯೊಂದು ಪದವನ್ನೂ ಓದಬೇಕಾ?
18:18 Do rules hamper style?
ನಿಯಮಗಳು ವೈಯಕ್ತಿಕ ಶೈಲಿಯನ್ನು ನಿರ್ಬಂಧಿಸುತ್ತವೆಯೇ?
26:00 Newspaper business is competitive. In the end revenue matters, How do you handle pressure to ensure you are competitive
ಪತ್ರಿಕೋದ್ಯಮದ ವ್ಯಾಪಾರದಲ್ಲಿರುವ ಗೆಲ್ಲಲೇಬೇಕೆಂಬ ಒತ್ತಡವನ್ನು ಹೇಗೆ ನಿಭಾಯಿಸುತ್ತೀರ?
33.10 : How did the policy orginate
ಪಾಲಿಸಿ ಹುಟ್ಟಿದ್ದು ಹೇಗೆ?
37.30 Difference between activist and journalist
ಹೋರಾಟಗಾರರಿಗೂ ಪತ್ರಿಕೋದ್ಯಮಿಗಳಿಗೂ ಇರುವ ವ್ಯತ್ಯಾಸ
43:38 Arrival of new media
ಹೊಸ ಮಾಧ್ಯಮಗಳ ಆಗಮನ
48:53 Is news paper restricted to middle classes only
ದಿನಪತ್ರಿಕೆಗಳು ಕೇವಲ ಮಧ್ಯಮವರ್ಗಕ್ಕೆ ಮಾತ್ರ ಸೀಮಿತವಾಗಿವೆಯಾ?
In continuation of the episode 1 on RTI we present Murlidharan to talk about RTI and its impact. 00:00 Boundries of RTI- Distinction between personal and official matters 7.35 Are there penalities for giving information that is not to be given 9.20 Do government officials get incentives for implementing RTI properly ( fine amount reel) 17.20 Record retention schedule 23:53 Structure versus interests 28:03 Why do villages get more RTI applications 33:21 What about private public projects? Or schools for examples 41:07 How does one get educated about RTI 43:43 Death and killing of RTI activities. How are they protected 50.07 Which government brought RTI? Who contributed 55:22 Examples of how RTI changed things? His message to people
The right to information act was conceived in 2005 and is perhaps the most essential tool in our democratic process. How well do you know the act? Check out the super cool Kannada Podcast for more details.
ಮಾಹಿತಿ ಹಕ್ಕು ಕಾಯ್ದೆ ನಮ್ಮ ಪ್ರಜಾತಂತ್ರಕ್ಕೆ ಬಹುಮುಖ್ಯ. ಇದರ ಬಗ್ಗೆ ನೀವು ಏನು ಅರಿತು ಕೊಂಡಿದ್ದೀರಿ. ಬನ್ನಿ ಕನ್ನಡ podcast ಅರಳಿಕಟ್ಟೆಗೆ
Topics of discussion
09:15 ಪತ್ರಿಕೋದ್ಯಮ ನೀವು ಬರೆಯುವ ರೀತಿಯನ್ನು ಪ್ರಭಾವಿಸಿತೇ? Did journalism change the way you wrote
18:11 ಭಾರತವನ್ನು ಬದಲಿಸಿದ ೨೫ ಜಡ್ಜ್ಮೆಂಟುಗಳು 25 judgements that changed India
24:48 ಈ ಆಕ್ಟಿನ ಪರಿಕಲ್ಪನೆ ಹೇಗಾಯಿತು? Why was the act concived
28:48 ಆರ್ ಟಿ ಐ ಎಲ್ಲೆಲ್ಲಿ ಅನ್ವಯಿಸುತ್ತದೆ? Where is RTI applicable
35:44 Was RTI a inspired act? Was it copied from other countries ? How is it in other countries I ಆರ್ ಟಿ ಐ ಬೇರೆ ದೇಶಗಳಿಂದ ಸ್ಫೂರ್ತಿ ಪಡೆದದ್ದಾ? ಬೇರೆ ದೇಶಗಳಲ್ಲಿ ಇದು ಯಾವ ಸ್ವರೂಪದಲ್ಲಿ ಇದೆ?
41:00 Has RTI strenghtened democracy? Are there details? I ಆರ್ ಟಿ ಐ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆಯಾ? 43:30 Do international body need approvals look for acts like RTI before giving funds
47:22 How do I file an RTI
58:03 RTI and PM's education? I ಆರ್ ಟಿ ಐ ಮತ್ತು ಪ್ರಧಾನಿಯವರ ವಿದ್ಯಾರ್ಹತೆ 59:54 RTI and no of gas cylinder in PM's house I ಆರ್ ಟಿ ಐ ಮತ್ತು ಪ್ರಧಾನಿಯವರ ಮನೆಯಲ್ಲಿನ ಗ್ಯಾಸ್ ಸಿಲಿಂಡರ್ ಮಾಹಿತಿ
ಹೊಸ ತಂತ್ರಜ್ಞಾನಗಳು ಗಳು ಬಂದು ನಮ್ಮ ಜೀವನವನ್ನು ಸರಳಗೊಳಿಸುವ ಮುನ್ನ ಅದರ ಬಗ್ಗೆ ಹಲವಾರು ಕಲ್ಪನೆಗಳು ಹಾಗು ತಪ್ಪು ಕಲ್ಪನೆಗಳು ಇರುತ್ತೆ. ಅರಳಿಕಟ್ಟೆಯ ಈ ಕಂತಿನಲ್ಲಿ ನಾವು NFT, W3.0 ಹಾಗು metaverse ಬಗ್ಗೆ ಮಾತಾಡುತ್ತೇವೆ ವಿಷಯ ತಜ್ಞ ವಿಜಯ ಶೆಣೈ ಜೊತೆ! #kannadapodcast #kannadacontentcreator
ಸಂಚಿಕೆ ಪ್ರಾಯೋಜಕರು ಮೈ ಲ್ಯಾಂಗ್ ಬುಕ್ಸ್: https://mylang.in/
ಪರಿಸರ ಸಂರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಇವೆಲ್ಲ ನಗರವಾಸಿಗಳು ಯೋಚಿಸಿದಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ಒಂದಕ್ಕೊಂದು ಹೊಂದಿಕೊಂಡ ಈ ವ್ಯವಸ್ಥೆಯ ಜಟಿಲ ಸಂಬಂಧಗಳನ್ನು ಬಿಡಿಸಿಡುವ ಪ್ರಯತ್ನದಲ್ಲಿ ನಮ್ಮ ಜತೆಗಿರುವವರು ವನ್ಯ ಮೃಗ ವೈದ್ಯರಾದ ಡಾ. ಪ್ರಯಾಗ್ ಎಚ್ ಎಸ್.
ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ೧೦೯ನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
00:00 - ಪರ್ ಫ್ಯೂಮ್ ಬಳಸಿ ಚಿರತೆ ಹಿಡಿದದ್ದು
15:51 - ಫೆರಮೋನ್ ಗಳು
18:34 - ಮೃಗಾಲಯಗಳ ಅಗತ್ಯ
25:47 - ವನ್ಯಮೃಗಗಳ ಕುರಿತ ಆಸಕ್ತಿ
30:33 - ಸಂಶೋಧನೆಗಳ ಪ್ರಯೋಜನ
33:33 - ಶೇರನೀ ಸಿನೆಮಾ ಕುರಿತು
41:34 - ವೈಜ್ಞಾನಿಕ ಪದ್ಧತಿ
54:21 - ವನ್ಯಜೀವಿಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ
Recording date: ೦6 November 2022
Credits: Music: Crescents by Ketsa Licensed under creative commons. Icon made by Freepik from www.flaticon.com
ಸಂಚಿಕೆ ಪ್ರಾಯೋಜಕರು ಮೈ ಲ್ಯಾಂಗ್ ಬುಕ್ಸ್: https://mylang.in/
ಪರಿಸರ ಸಂರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಇವೆಲ್ಲ ನಗರವಾಸಿಗಳು ಯೋಚಿಸಿದಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ಒಂದಕ್ಕೊಂದು ಹೊಂದಿಕೊಂಡ ಈ ವ್ಯವಸ್ಥೆಯ ಜಟಿಲ ಸಂಬಂಧಗಳನ್ನು ಬಿಡಿಸಿಡುವ ಪ್ರಯತ್ನದಲ್ಲಿ ನಮ್ಮ ಜತೆಗಿರುವವರು ವನ್ಯ ಮೃಗ ವೈದ್ಯರಾದ ಡಾ. ಪ್ರಯಾಗ್ ಎಚ್ ಎಸ್.
ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ೧೦೮ನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
00:00 - ಪರಿಚಯ
08:37 - ಪ್ರಾಣಿಗಳನ್ನು ಪಳಗಿಸುವ ಆಸಕ್ತಿ ಸಂರಕ್ಷಣೆಯತ್ತ ತಿರುಗಿತು
18:40 - ಕಾಡುಪ್ರಾಣಿ ಹಾಗೂ ಮನುಷ್ಯರ ನಡುವಿನ ಸಂಘರ್ಷ
27:20 - ಹೊಸೂರಿನಲ್ಲಿ ಕಂಡ ಪರ್ಯಾಯ
35:23 - ಕಾಡಿನೊಂದಿಗೆ ಬುಡಕಟ್ಟು ಜನಾಂಗಗಳ ಸಂಬಂಧ
50:45 - ಕಾಡಿನಲ್ಲಿ ರೆಸಾರ್ಟ್, ಹೋಂ ಸ್ಟೇ
Recording date: ೦6 November 2022
Credits: Music: Crescents by Ketsa Licensed under creative commons. Icon made by Freepik from www.flaticon.com
ಈ ಸಂಚಿಕೆಯ ಪ್ರಾಯೋಜಕರು ಕೇಳಿ ಕಥೆಯ ಆಡಿಯೋ ಬುಕ್ಸ್.
ರಘು ದೀಕ್ಷಿತ್ ಸಂಗೀತದಲ್ಲಿ ಸುಮಾರು ೨೦ ವರುಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಂಗೀತ ಸಂಯೋಜನೆಯಲ್ಲಿ, ದೇಶ ವಿದೇಶಗಳಲ್ಲಿ ನಡೆದ ಲೈವ್ ಕಾನ್ಸರ್ಟ್ ಗಳಲ್ಲಿ ತಮ್ಮದೇ ವಿಶೇಷತೆಯನ್ನು ಮೆರೆದಿದ್ದಾರೆ. ಅರಳಿಕಟ್ಟೆಯಲ್ಲಿ ಮಾತಾಡುತ್ತಾ ಅವರು ತಮ್ಮ ಬೆಳೆದುಬಂದ ರೀತಿಯ ಬಗ್ಗೆ, ನೃತ್ಯದಲ್ಲಿನ ತರಬೇತಿ ಹೇಗೆ ತಮ್ಮ ಸಂಗೀತಕ್ಕೆ ಪೂರಕವಾಯಿತು, ತಮ್ಮ ಸೃಜನಶೀಲತೆಯ ಬಗ್ಗೆ, ಯಶಸ್ಸಿನ ಹಿಂದಿನ ಸಂತಸ ದುಃಖಗಳ ಬಗ್ಗೆ ನಿರರ್ಗಳವಾಗಿ, ಮನಬಿಚ್ಚಿ ಮಾತಾಡಿದ್ದಾರೆ
ಈ ಚರ್ಚೆ ಅರಳಿಕಟ್ಟೆಯ ಎರಡು ಸಂಚಿಕೆಗಳಲ್ಲಿ ಮೂಡಿ ಬರಲಿದೆ. ಎರಡೆನಯ ಹಾಗೂ ಅಂತಿಮ ಭಾಗ ಈ ವಾರದ ಸಂಚಿಕೆಯಲ್ಲಿ.
00:00 - ಸಂಗೀತದಲ್ಲಿ ಧ್ವನಿಯ ಏರಿಳಿತ
05:22 - ಫೀಡ್ ಬ್ಯಾಕ್
11:43 - ಜನಪ್ರಿಯತೆಯ ಅಪಾಯ
20:18 - ಕ್ಷಣಭಂಗುರ ಜನಪ್ರಿಯತೆ
29:37 - ಕೋವಿಡ್ ಕಾಲದ ಕೆಲಸ
36:36 - ಸಂಗೀತದ ಉದ್ದೀಪನಾ ಶಕ್ತಿ
46:00 - ಉತ್ಸಾಹ ಉಳಿದಿರಲು ಕಾರಣ
49:15 - ಹೊಸಬರಿಗೆ ಬುದ್ಧಿಮಾತು
Recording date: 05 January 2023
Credits: Music: Crescents by Ketsa Licensed under creative commons. Icon made by Freepik from www.flaticon.com
ಈ ಸಂಚಿಕೆಯ ಪ್ರಾಯೋಜಕರು ಕೇಳಿ ಕಥೆಯ ಆಡಿಯೋ ಬುಕ್ಸ್.
ರಘು ದೀಕ್ಷಿತ್ ಸಂಗೀತದಲ್ಲಿ ಸುಮಾರು ೨೦ ವರುಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಂಗೀತ ಸಂಯೋಜನೆಯಲ್ಲಿ, ದೇಶ ವಿದೇಶಗಳಲ್ಲಿ ನಡೆದ ಲೈವ್ ಕಾನ್ಸರ್ಟ್ ಗಳಲ್ಲಿ ತಮ್ಮದೇ ವಿಶೇಷತೆಯನ್ನು ಮೆರೆದಿದ್ದಾರೆ. ಅರಳಿಕಟ್ಟೆಯಲ್ಲಿ ಮಾತಾಡುತ್ತಾ ಅವರು ತಮ್ಮ ಬೆಳೆದುಬಂದ ರೀತಿಯ ಬಗ್ಗೆ, ನೃತ್ಯದಲ್ಲಿನ ತರಬೇತಿ ಹೇಗೆ ತಮ್ಮ ಸಂಗೀತಕ್ಕೆ ಪೂರಕವಾಯಿತು, ತಮ್ಮ ಸೃಜನಶೀಲತೆಯ ಬಗ್ಗೆ, ಯಶಸ್ಸಿನ ಹಿಂದಿನ ಸಂತಸ ದುಃಖಗಳ ಬಗ್ಗೆ ನಿರರ್ಗಳವಾಗಿ, ಮನಬಿಚ್ಚಿ ಮಾತಾಡಿದ್ದಾರೆ
ಈ ಚರ್ಚೆ ಅರಳಿಕಟ್ಟೆಯ ಎರಡು ಸಂಚಿಕೆಗಳಲ್ಲಿ ಮೂಡಿ ಬರಲಿದೆ. ಮೊದಲ ಸಂಚಿಕೆ ನಿಮ್ಮ ಮುಂದಿದೆ.
00:00 - ಇಂಟ್ರೋ
01:24 - ಒಬ್ಬ ಸಿನಿಮಾ ನಿರ್ಮಾಪಕನಾಗಿ ರಘು
06:27 - ಸಂಗೀತಕ್ಕೆ ಕಾಲಿಟ್ಟ ಕಥೆ
10:51 - ಬಾಲ್ಯದ ಪ್ರಭಾವಗಳು
17:13 - ಲಾಸ್ಟ್ ಬೆಂಚ್ ಸ್ಟೂಡೆಂಟು ಆದ್ರೆ ಒಳ್ಳೆ ಹುಡುಗ
18:26 - ಟೇಪ್ ರೇಕಾರ್ಡರ್ ಇಲ್ಲದ ಮನೆ
23:03 - ಕಾಸ್ಟೂಮ್
30:46 - ಸಂಗೀತದ ಶೈಲಿ ಹಾಗೂ ಕೇಳುಗರು
39:55 - ತನ್ಮಯತೆ ಹಾಗೂ ಪರಕಾಯ ಪ್ರವೇಶ
48:04 - ಪ್ರೇಕ್ಷಕರನ್ನು ನಿರ್ದೇಶಿಸುವ ಅಗತ್ಯ
56:59 - ತನ್ಮಯತೆಗೆ ಸಿದ್ಧ ಆಚರಣೆಗಳ ಅಗತ್ಯ
58:55 - ಸಂಗೀತ ಸಂಯೋಜನೆ
Recording date: ೦5 January 2023
Credits: Music: Crescents by Ketsa Licensed under creative commons. Icon made by Freepik from www.flaticon.com
ಈ ಸಂಚಿಕೆಯ ಪ್ರಾಯೋಜಕರು ಚೀವ್ಡ ಕಾಫಿ.
ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಡಿಸ್ಟ್ರಿಕ್ಟ್ ಜಡ್ಜ್ ಆಗಿ ಅನಂತರ ಹೈಕೋರ್ಟಿನ ಕಂಪ್ಯೂಟರೀಕರಣದಲ್ಲಿ ಕೆಲಸ ಮಾಡಿದ ಡಾ. ಪ್ರಕಾಶ್ ಸೆತ್ಲೂರ್ ರೊಂದಿಗಿನ ನಮ್ಮ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆ ಸಂಚಿಕೆ ೧೦೫ರ ರೂಪದಲ್ಲಿ ನಿಮ್ಮ ಮುಂದಿದೆ.
ಪ್ರಜೆಗಳಿಗೆ ಸಂವಿಧಾನ ನೀಡಿರುವ ಬದುಕುವ ಹಕ್ಕಿನಲ್ಲಿ ತಮ್ಮ ಜೀವ ತ್ಯಜಿಸುವ ಹಕ್ಕೂ ಸೇರಿದೆಯೇ? ಕೆಲವು ಪಾಶ್ಚಾತ್ಯ ದೇಶಗಳಲ್ಲಿ ದಯಾ ಮರಣ (ಯುಥನೇಶಿಯಾ)ಕ್ಕೆ ಅನುಮತಿ ಇರುವಂತೆ ಭಾರತದ ಕಾನೂನಿನಲ್ಲಿ ಯಾವ ರೀತಿಯ ಚರ್ಚೆಗಳು ನಡೆದವು? ಭಾರತದಲ್ಲಿ ಕಾನೂನು ಈ ಬಗೆಯ ಹೊಸ ಚರ್ಚೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ?
ಭಾರತದಲ್ಲಿ ಮದುವೆಯಾದ ದಂಪತಿಗಳು ಅಮೇರಿಕಾದ ಕೋರ್ಟಿನ ಎದುರು ವಿಚ್ಛೇದನ ಪಡೆಯಲು ಸಾಧ್ಯವೇ? ಸಂವಿಧಾನ ಆ ದೇಶದ ಪ್ರಜೆಗಳಿಗೆ ಕೊಡುವ ಹಕ್ಕುಗಳಿಗೂ ಅಂತರಾಷ್ಟ್ರೀಯ ಒಡಂಬಡಿಕೆಗಳಿಗೂ ಯಾವ ರೀತಿಯ ಸಂಬಂಧವಿದೆ?
ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಎರಡನೆಯ ಭಾಗದಲ್ಲಿದೆ.
00:00 - ಭಾರತದಲ್ಲಿ ಹೊಸ ಕಾನೂನುಗಳು
10:36 - ಬಹುರೂಪಿ ಸಮಾಜಕ್ಕೆ ಬಹುರೂಪಿ ಕಾನೂನುಗಳು ಬೇಕೆ?
14:44 - ಅಂತರಾಷ್ಟ್ರೀಯ ಕಾನೂನುಗಳ ಚೌಕಟ್ಟು
30:49 - ಭಯಹುಟ್ಟಿಸುವಲ್ಲಿ ಶಿಕ್ಷೆಯ ಪಾತ್ರ
36:51 - ಅಪರಾಧ ಕೇಂದ್ರಿತ - ಅಪರಾಧಿ ಕೇಂದ್ರಿತ ಕಾನೂನು
40:06 - ನ್ಯಾಯಾಧೀಶರು ಪಕ್ಷಾತೀತರಾಗಿ ತೀರ್ಪು ಕೊಡುವುದು ಹೇಗೆ?
Recording date: 30 October 2022
Credits: Music: Crescents by Ketsa Licensed under creative commons. Icon made by Freepik from www.flaticon.com
ಈ ಸಂಚಿಕೆಯ ಪ್ರಾಯೋಜಕರು ಚೀವ್ಡ ಕಾಫಿ.
ಅರಳಿಕಟ್ಟೆಯ ೧೦೪ನೆಯ ಸಂಚಿಕಯಲ್ಲಿ ನಮ್ಮ ಜೊತೆಗಿರುವವರು ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಡಿಸ್ಟ್ರಿಕ್ಟ್ ಜಡ್ಜ್ ಆಗಿ ಅನಂತರ ಹೈಕೋರ್ಟಿನ ಕಂಪ್ಯೂಟರೀಕರಣದಲ್ಲಿ ಕೆಲಸ ಮಾಡಿದ ಡಾ. ಪ್ರಕಾಶ್ ಸೆತ್ಲೂರ್.
ವ್ಯಕ್ತಿಯೊಬ್ಬನ ಜನ್ಮದಿಂದ ಶುರುವಾಗಿ ಮರಣದವರೆಗೆ ಅನ್ವಯವಾಗುವ ಕಾನೂನುಗಳು ಭಾರತದಲ್ಲಿ ಬೆಳೆದು ಬಂದ ದಾರಿ ಯಾವುದು? ಧರ್ಮಕ್ಕೂ ಕಾನೂನಿಗೂ ಇರುವ ವ್ಯತ್ಯಾಸವೇನು? ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಇಸ್ಮಾಮಿಕ್ ಷರಿಯಾ ಮೊದಲಾದ ನ್ಯಾಯಪದ್ಧತಿಗಳನ್ನು ದಾಟಿ ಭಾರತ ತನ್ನದೇ ಆದ ಸಂವಿಧಾನವನ್ನು ಕಟ್ಟಿಕೊಂಡಿದ್ದು ಹೇಗೆ?
ಹಳೆಯ ಯುಗಾಸ್ಲಾವಿಯಾ ದೇಶದ ಸಂವಿಧಾನ ಹೊರತು ಪಡಿಸಿದರೆ ಭಾರತದ ಸಂವಿಧಾನವೇ ಜಗತ್ತಿನಲ್ಲಿ ಅತಿ ದೀರ್ಘವಾದ ಸಂವಿಧಾನ ಎನ್ನುವುದು ನಿಮಗೆ ತಿಳಿದಿದೆಯೇ? ೧೭೯೧ರಲ್ಲಿ ಜಾರಿಎ ಬಂದ ಅಮೇರಿಕಾದ ಸಂವಿಧಾನಕ್ಕೆ ಇದುವರೆಗೆ ೨೭ ತಿದ್ದು ಪಡಿಗಳಾಗಿದ್ದರೆ ೧೯೫೦ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನಕ್ಕೆ ಇದುವರೆಗೆ ೧೦೫ ತಿದ್ದುಪಡಿಗಳಾಗಿವೆ ಎನ್ನುವುದು ಗೊತ್ತೆ?
00:00 - ಇಂಟ್ರೋ
01:52 - ಅತಿಥಿ ಪರಿಚಯ
15:12 - ಕಾನೂನು ಏನು, ಏಕೆ?
20:49 - ಬ್ರಿಟೀಷರ ಆಳ್ವಿಕೆಯ ಹಿನ್ನೆಲೆ
28:34 - ಕಾನೂನುಗಳಲ್ಲಿ ಸನಾತನ ಧರ್ಮದ ಛಾಯೆ
45:32 - ಕಾನೂನು, ಸಮಾಜದ ನಡುವಿನ ಅಂತರ
Recording date: 30 October 2022
Credits: Music: Crescents by Ketsa Licensed under creative commons. Icon made by Freepik from www.flaticon.com
ಈ ಸಂಚಿಕೆಯ ಅತಿಥಿ ಶೃತಿ ಮರುಳಪ್ಪನವರನ್ನು ಟ್ವಿಟರ್ನಲ್ಲಿ ಫಾಲೋ ಮಾಡಬಹುದು.
ಅರಳಿಕಟ್ಟೆಯ ೧೦೨ನೆಯ ಸಂಚಿಕೆಯ ಪ್ರಾಯೋಜಕರು "ಕೇಳಿ ಕಥೆಯ" ಆಡಿಯೋ ಪುಸ್ತಕ. ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಿ.
ನಮ್ಮ ದೇಶ ಗಣತಂತ್ರವಾಗಿ ರಾಜ್ಯಗಳ ನಿರ್ಮಾಣವಾದಂದಿನಿಂದ ಕೆಲವು ರಾಜ್ಯಗಳು ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕಿ ಮುನ್ನಡೆಯುತ್ತಿದ್ದರೆ, ಇನ್ನು ಕೆಲವು ರಾಜ್ಯಗಳು ಅಭಿವೃದ್ಧಿಯ ಎಲ್ಲಾ ಕ್ರಮಾಂಕಗಳಲ್ಲಿ ಹಿಂದುಳಿದಿವೆ.
ಈ ಇಬ್ಬಗೆಯ ಬೆಳವಣಿಗೆಯನ್ನು ಜನಸಂಖ್ಯೆ ನಿಯಂತ್ರಣದ ಕ್ರಮಾಂಕದಲ್ಲಿ ಸ್ಪಷ್ಟವಾಗಿ ಕಾಣಬಹುದು. ದಕ್ಷಿಣ ಭಾರತದ ರಾಜ್ಯಗಳು ಕುಟುಂಬ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತಂದವು ಇದರ ಪರಿಣಾಮವಾಗಿ ಉತ್ತರದ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಜನಸಂಖ್ಯೆ ಕುಂಠಿತವಾಯಿತು. ಜನಸಂಖ್ಯೆಯ ಆಧಾರದಲ್ಲಿ ಸೀಮಾ ನಿರ್ಣಯ ಜಾರಿಗೆ ಬಂದರೆ ಈಗಾಗಲೇ ದುರ್ಬಲವಾಗಿರುವ ರಾಜಕೀಯ ಪ್ರಾತಿನಿಧ್ಯ ಇನ್ನಷ್ಟು ಕ್ಷೀಣಿಸುವ ಅಪಾಯ ಸೃಷ್ಠಿಯಾಯಿತು.
೧೯೭೧ರ ಜನಗಣತಿಯ ಆಧಾರದಲ್ಲಿ ಇಂದಿಗೂ ದೇಶದ ಸಂಸತ್ತಿನಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯ ದೊರೆಯುತ್ತದೆ. ಹೊಸ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಂಡ ಸೀಮಾ ನಿರ್ಣಯ ಯೋಜನೆ ಈಗ ಜಾರಿಗೆ ಬಂದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಎದುರಾಗುವ ಸವಾಲುಗಳೇನು? ನಮ್ಮ ಜನಪ್ರತಿನಿಧಿಗಳಿಗೆ ಈ ಸವಾಲುಗಳ ಅರಿವು ಇದೆಯೇ? ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಮಾನ್ಯ ಪ್ರಜೆಗಳಿಗೆ ಲಭ್ಯವಿರುವ ಅವಕಾಶಗಳೇನು?
ಈ ಪ್ರಶ್ನೆಗಳೊಂದಿಗೆ ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಶೃತಿ ಮರುಳಪ್ಪ. ಬೆಂಗಳೂರಿನ ಖಾಸಗಿ ಐಟಿ ಕಂಪೆನಿಯೊಂದರಲ್ಲಿ ವೃತ್ತಿ ನಿರತರಾದ ಶೃತಿ ತಮ್ಮ ಬಿಡುವಿನಲ್ಲಿ ಕನ್ನಡ ಭಾಷೆ, ಕನ್ನಡಿಗರ ಹಕ್ಕುಗಳ ಕುರಿತ ಹೋರಾಟಗಳಲ್ಲಿ ಪಾಲ್ಗೋಳ್ಳುತ್ತಾರೆ. ಅಮೇರಿಕಾದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಸಂಶೋಧನೆಗೆ ಪ್ರೇರಣಾ ಸಿಂಗ್ ಸಿದ್ಧ ಪಡಿಸಿದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಋತುಮಾನ ಪ್ರಕಾಶನ ಪ್ರಕಟಿಸಿರುವ "ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ" ಪುಸ್ತಕ ನಿಮ್ಮ ನೆಚ್ಚಿನ ಪುಸ್ತಕದ ಅಂಗಡಿಗಳಲ್ಲಿ ಹಾಗೂ ಋತುಮಾನ ಅಂತರ್ಜಾದಲದ ಅಂಗಡಿಯಲ್ಲಿ ಸಹ ಲಭ್ಯವಿದೆ.
00:15 - ದಕ್ಷಿಣ ಭಾರತದಲ್ಲಿ ರಾಜಕೀಯ ಸಾಕ್ಷರತೆ
11:01 - ಆಯೋಗ ಕೆಲಸ ಮಾಡುವುದು ಹೇಗೆ?
14:44 - ರಾಜಕೀಯ ಲೆಕ್ಕಾಚಾರ
16:28 - ಪರಿಣಾಮಗಳು
22:12 - ಅರಿವಿರುವ ರಾಜಕಾರಣಿಗಳು
27:56 - ದಕ್ಷಿಣದ ರಾಜ್ಯಗಳ ಒಗ್ಗಟ್ಟು
31:14 - ಹೋರಾಟದ ಗುರಿ
34:21 - ಪ್ರಾದೇಶಿಕ ಪಕ್ಷದ ಕನಸು
36:27 - ಹಕ್ಕೊತ್ತಾಯದ ಪ್ರೇರಣೆ
Recording date: 18 September 2022
Credits: Music: Crescents by Ketsa Licensed under creative commons. Icon made by Freepik from www.flaticon.com
ಅರಳಿಕಟ್ಟೆಯ ೧೦೨ನೆಯ ಸಂಚಿಕೆಯ ಪ್ರಾಯೋಜಕರು "ಕೇಳಿ ಕಥೆಯ" ಆಡಿಯೋ ಪುಸ್ತಕ. ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಿ.
ನಮ್ಮ ದೇಶ ಗಣತಂತ್ರವಾಗಿ ರಾಜ್ಯಗಳ ನಿರ್ಮಾಣವಾದಂದಿನಿಂದ ಕೆಲವು ರಾಜ್ಯಗಳು ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕಿ ಮುನ್ನಡೆಯುತ್ತಿದ್ದರೆ, ಇನ್ನು ಕೆಲವು ರಾಜ್ಯಗಳು ಅಭಿವೃದ್ಧಿಯ ಎಲ್ಲಾ ಕ್ರಮಾಂಕಗಳಲ್ಲಿ ಹಿಂದುಳಿದಿವೆ.
ಈ ಇಬ್ಬಗೆಯ ಬೆಳವಣಿಗೆಯನ್ನು ಜನಸಂಖ್ಯೆ ನಿಯಂತ್ರಣದ ಕ್ರಮಾಂಕದಲ್ಲಿ ಸ್ಪಷ್ಟವಾಗಿ ಕಾಣಬಹುದು. ದಕ್ಷಿಣ ಭಾರತದ ರಾಜ್ಯಗಳು ಕುಟುಂಬ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತಂದವು ಇದರ ಪರಿಣಾಮವಾಗಿ ಉತ್ತರದ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಜನಸಂಖ್ಯೆ ಕುಂಠಿತವಾಯಿತು. ಜನಸಂಖ್ಯೆಯ ಆಧಾರದಲ್ಲಿ ಸೀಮಾ ನಿರ್ಣಯ ಜಾರಿಗೆ ಬಂದರೆ ಈಗಾಗಲೇ ದುರ್ಬಲವಾಗಿರುವ ರಾಜಕೀಯ ಪ್ರಾತಿನಿಧ್ಯ ಇನ್ನಷ್ಟು ಕ್ಷೀಣಿಸುವ ಅಪಾಯ ಸೃಷ್ಠಿಯಾಯಿತು.
೧೯೭೧ರ ಜನಗಣತಿಯ ಆಧಾರದಲ್ಲಿ ಇಂದಿಗೂ ದೇಶದ ಸಂಸತ್ತಿನಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯ ದೊರೆಯುತ್ತದೆ. ಹೊಸ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಂಡ ಸೀಮಾ ನಿರ್ಣಯ ಯೋಜನೆ ಈಗ ಜಾರಿಗೆ ಬಂದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಎದುರಾಗುವ ಸವಾಲುಗಳೇನು? ನಮ್ಮ ಜನಪ್ರತಿನಿಧಿಗಳಿಗೆ ಈ ಸವಾಲುಗಳ ಅರಿವು ಇದೆಯೇ? ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಮಾನ್ಯ ಪ್ರಜೆಗಳಿಗೆ ಲಭ್ಯವಿರುವ ಅವಕಾಶಗಳೇನು?
ಈ ಪ್ರಶ್ನೆಗಳೊಂದಿಗೆ ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಶೃತಿ ಮರುಳಪ್ಪ. ಬೆಂಗಳೂರಿನ ಖಾಸಗಿ ಐಟಿ ಕಂಪೆನಿಯೊಂದರಲ್ಲಿ ವೃತ್ತಿ ನಿರತರಾದ ಶೃತಿ ತಮ್ಮ ಬಿಡುವಿನಲ್ಲಿ ಕನ್ನಡ ಭಾಷೆ, ಕನ್ನಡಿಗರ ಹಕ್ಕುಗಳ ಕುರಿತ ಹೋರಾಟಗಳಲ್ಲಿ ಪಾಲ್ಗೋಳ್ಳುತ್ತಾರೆ. ಅಮೇರಿಕಾದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಸಂಶೋಧನೆಗೆ ಪ್ರೇರಣಾ ಸಿಂಗ್ ಸಿದ್ಧ ಪಡಿಸಿದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಋತುಮಾನ ಪ್ರಕಾಶನ ಪ್ರಕಟಿಸಿರುವ "ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ" ಪುಸ್ತಕ ನಿಮ್ಮ ನೆಚ್ಚಿನ ಪುಸ್ತಕದ ಅಂಗಡಿಗಳಲ್ಲಿ ಹಾಗೂ ಋತುಮಾನ ಅಂತರ್ಜಾದಲದ ಅಂಗಡಿಯಲ್ಲಿ ಸಹ ಲಭ್ಯವಿದೆ.
00:00 - ಆರಂಭ
01:04 - ಅತಿಥಿಯ ಪರಿಚಯ
07:15 - ಸೀಮಾ ನಿರ್ಣಯ ಆಯೋಗ
18:24 - ಟಿ ಎಫ್ ಆರ್ (ಹೆರುವೆಣಿಕೆ)
21:38 - ಪ್ರಾತಿನಿಧಿಕ ಜನತಂತ್ರ
26:04 - ಭಾರತದ ವಿಶಿಷ್ಟ ಸನ್ನಿವೇಶ
32:23 - ಜನಾಂಗಸ್ಥಿತಿಯ ಚರ್ಚೆಯಲ್ಲಿನ ಅಪಾಯಗಳು
43:28 - ಹಕ್ಕೊತ್ತಾಯ ಹೇಗೆ?
Recording date: 18 September 2022
Credits: Music: Crescents by Ketsa Licensed under creative commons. Icon made by Freepik from www.flaticon.com
ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಹತ್ತು ಹಲವು ವಿಷಯಗಳ ಕುರಿತ ಕುತೂಹಲಕಾರಿ ಚರ್ಚೆಯನ್ನು ಅಬ್ಬರವಿಲ್ಲದ ಮೆಲು ಧ್ವನಿಯಲ್ಲಿ ಪ್ರತಿ ವಾರ ನಿಮ್ಮ ಮುಂದೆ ಇಡುತ್ತಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲವನ್ನು ನೆಚ್ಚಿ ನಾವು ನೂರನೆಯ ಸಂಚಿಕೆಗೆ ತಲುಪಿದ್ದೇವೆ.
ಈ ಶತಮಾನದ ಸಂಚಿಕೆಯಲ್ಲಿ ನಮ್ಮ ಜೊತೆಯಾಗಿರುವವರು ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ. ಜಾಗತಿಕ ಸಿನಿಮಾ ಭೂಪಟದಲ್ಲಿ ಕರ್ನಾಟಕ ತಲೆ ಎತ್ತಿನಿಲ್ಲುವಂತಹ ಚಿತ್ರಗಳನ್ನು ನಿರ್ಮಿಸಿದ ಗಿರೀಶ್ ಕಾಸರವಳ್ಳಿಯವರ ಕುರಿತ ಪರಿಚಯ ಕನ್ನಡಿಗರಿಗೆ ಅಗತ್ಯವಿರಲಾರದು.
ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕಾಸರವಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿದ ಗಿರೀಶ್ ಫಾರ್ಮಸಿಯಲ್ಲಿ ಪದವಿ ಓದಿ ಆಕಸ್ಮಿಕವಾಗಿ ಚಲನಚಿತ್ರ ಜಗತ್ತಿಗೆ ಕಾಲಿರಿಸಿದವರು. ಘಟಶ್ರಾದ್ಧ, ದ್ವೀಪ, ಕನಸೆಂಬೋ ಕುದುರೆಯನ್ನೇರಿ, ನಾಯಿ ನೆರಳು, ಹಸೀನಾ, ಗುಲಾಬಿ ಟಾಕೀಸ್ - ಕಾಸರವಳ್ಳಿಯವರ ಸಿನಿಮಾಗಳ ಪಟ್ಟಿ ದೊಡ್ಡದು.
ಗಿರೀಶ್ ರೊಂದಿಗಿನ ನಮ್ಮ ಚರ್ಚೆಯ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಎರಡನೆಯ ಭಾಗದಲ್ಲಿ ನಲವತ್ತು ವರ್ಷಗಳ ಕಾಸರವಳ್ಳಿಯವರ ವೃತ್ತಿಜೀವನದಲ್ಲಿ ತಂತ್ರಜ್ಞಾನದಿಂದಾದ ಬದಲಾವಣೆಗಳು, “ಕೋಪ ಬಂದಾಗ ಹತ್ತರವರೆಗೆ ಎಣಿಸು" ಎಂಬ ತಾತನ ಬುದ್ಧಿ ಮಾತು ಕಾಸರವಳ್ಳಿಯವರ ಪ್ರತಿಕ್ರಿಯೆಗಳಲ್ಲಿ ಹಾಸುಹೊಕ್ಕಾಗಿರುವುದು, ಎಂಭತ್ತು ತೊಂಭತ್ತರ ದಶದಕದಲ್ಲಿ ದೇಶದಲ್ಲೇ ಅತ್ಯಂತ ಉಚ್ಛ್ರಾಯ ಸ್ಥಾನದಲ್ಲಿದ್ದ ಕನ್ನಡದ ಚಿತ್ರರಂಗದ ಬೆಳವಣಿಗೆ ಇಳಿಮುಖವಾಗಲು ಕಾರಣಗಳೇನು ಇವೇ ಮೊದಲಾದ ವಿಷಯಗಳನ್ನು ಕುರಿತು ಚರ್ಚಿಸಿದ್ದೇವೆ.
ಎಂದಿನಂತೆ ನಿಮ್ಮ ಬೆಂಬಲ, ಪ್ರೀತಿ ನಮ್ಮೊಂದಿಗಿರಲಿ. ನಮ್ಮ ಯುಟ್ಯೂಬ್ ಚಾನೆಲ್ಗೆ ಚಂದಾದಾರಾಗಿ, ನಿಮ್ಮ ಗೆಳೆಯರಿಗೆ ನಮ್ಮ ಬಗ್ಗೆ ತಿಳಿಸಿ. ನಿಮ್ಮಂತಹ ಇನ್ನಷ್ಟು ಸಹೃದಯರನ್ನು ತಲುಪಲು ನೆರವಾಗಿ.
Recording date: 06 February 2022
Credits: Music: Crescents by Ketsa Licensed under creative commons. Icon made by Freepik from www.flaticon.com
ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಹತ್ತು ಹಲವು ವಿಷಯಗಳ ಕುರಿತ ಕುತೂಹಲಕಾರಿ ಚರ್ಚೆಯನ್ನು ಅಬ್ಬರವಿಲ್ಲದ ಮೆಲು ಧ್ವನಿಯಲ್ಲಿ ಪ್ರತಿ ವಾರ ನಿಮ್ಮ ಮುಂದೆ ಇಡುತ್ತಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲವನ್ನು ನೆಚ್ಚಿ ನಾವು ನೂರನೆಯ ಸಂಚಿಕೆಗೆ ತಲುಪಿದ್ದೇವೆ.
ಈ ಶತಮಾನದ ಸಂಚಿಕೆಯಲ್ಲಿ ನಮ್ಮ ಜೊತೆಯಾಗಿರುವವರು ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ. ಜಾಗತಿಕ ಸಿನಿಮಾ ಭೂಪಟದಲ್ಲಿ ಕರ್ನಾಟಕ ತಲೆ ಎತ್ತಿನಿಲ್ಲುವಂತಹ ಚಿತ್ರಗಳನ್ನು ನಿರ್ಮಿಸಿದ ಗಿರೀಶ್ ಕಾಸರವಳ್ಳಿಯವರ ಕುರಿತ ಪರಿಚಯ ಕನ್ನಡಿಗರಿಗೆ ಅಗತ್ಯವಿರಲಾರದು.
ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕಾಸರವಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿದ ಗಿರೀಶ್ ಫಾರ್ಮಸಿಯಲ್ಲಿ ಪದವಿ ಓದಿ ಆಕಸ್ಮಿಕವಾಗಿ ಚಲನಚಿತ್ರ ಜಗತ್ತಿಗೆ ಕಾಲಿರಿಸಿದವರು. ಘಟಶ್ರಾದ್ಧ, ದ್ವೀಪ, ಕನಸೆಂಬೋ ಕುದುರೆಯನ್ನೇರಿ, ನಾಯಿ ನೆರಳು, ಹಸೀನಾ, ಗುಲಾಬಿ ಟಾಕೀಸ್ - ಕಾಸರವಳ್ಳಿಯವರ ಸಿನಿಮಾಗಳ ಪಟ್ಟಿ ದೊಡ್ಡದು.
ಗಿರೀಶ್ ರೊಂದಿಗಿನ ನಮ್ಮ ಚರ್ಚೆಯ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗದಲ್ಲಿ ನಾವು ಕಾಸರವಳ್ಳಿಯಲ್ಲಿನ ಗಿರೀಶರ ಬಾಲ್ಯ, ಎತ್ತಿನ ಗಾಡಿಯಲ್ಲಿ ಮನೆಮಂದಿ ಸಿನೆಮಾ ನೋಡಲು ಹೋಗುತ್ತಿದ್ದ ನೆನಪು, ಮೊದಲ ಬಾರಿಗೆ ಜಾಗತಿಕ ಸಿನೆಮಾಗೆ ತೆರೆದುಕೊಂಡ ಅನುಭವ, ಪುಣೆಯ ಸಿನೆಮಾ ಸಂಸ್ಥೆಯಲ್ಲಿನ ಓದು, ತರಬೇತಿ, ಅನಂತಮೂರ್ತಿಯವರೊಂದಿಗಿನ ಒಡನಾಟ, ಅಡ್ಡೂರು ಗೋಪಾಲಕೃಷ್ಣ, ಯು.ಆರ್.ಅನಂತಮೂರ್ತಿಯವರ ಕುರಿತ ಸಾಕ್ಷ್ಯಚಿತ್ರಗಳು ಹೀಗೆ ಅನೇಕ ವಿಷಯಗಳನ್ನು ಚರ್ಚಿಸಿದ್ದೇವೆ.
ಎಂದಿನಂತೆ ನಿಮ್ಮ ಬೆಂಬಲ, ಪ್ರೀತಿ ನಮ್ಮೊಂದಿಗಿರಲಿ. ನಮ್ಮ ಯುಟ್ಯೂಬ್ ಚಾನೆಲ್ಗೆ ಚಂದಾದಾರಾಗಿ, ನಿಮ್ಮ ಗೆಳೆಯರಿಗೆ ನಮ್ಮ ಬಗ್ಗೆ ತಿಳಿಸಿ. ನಿಮ್ಮಂತಹ ಇನ್ನಷ್ಟು ಸಹೃದಯರನ್ನು ತಲುಪಲು ನೆರವಾಗಿ.
Recording date: 06 February 2022
Credits: Music: Crescents by Ketsa Licensed under creative commons. Icon made by Freepik from www.flaticon.com
Show Notes
ಹತ್ತಾರು ಪಾಡ್ ಕಾಸ್ಟ್ ಗಳನ್ನು ನಿಯಮಿತವಾಗಿ ಕೇಳುವ ನಾವು ಅದೊಂದು ದಿನ "ಕನ್ನಡದಲ್ಲೇಕೆ ಪಾಡ್ಕಾಸ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ" ಎಂದು ಕೇಳಿಕೊಂಡೆವು. ನಾವೇನು ವೃತ್ತಿಪರರಲ್ಲದಿದ್ದರೂ ಕೈಲಾದ ಮಟ್ಟಿಗೆ ಕನ್ನಡದಲ್ಲಿ ವಿಶಿಷ್ಟ ಚರ್ಚೆಗಳನ್ನು ನಡೆಸೋಣ ಎಂದು ಶುರು ಮಾಡಿದ ಪ್ರಯತ್ನವೇ “ಅರಳಿಕಟ್ಟೆ".
ಈ ವಾರದ ೯೯ ನೇ ಸಂಚಿಕೆ ವಿಶಿಷ್ಟವಾದದ್ದು. ನೂರು ಸಂಚಿಕೆಗಳ ಮೈಲಿಗಲ್ಲನ್ನು ಸಂಭ್ರಮಿಸಲು ನಾವು ಇದುವರೆಗೆ ಪ್ರಕಟವಾದ ಸಂಚಿಕೆಗಳಲ್ಲಿ ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯನ್ನು ಕುರಿತು ವಿವಿಧ ಹಿನ್ನೆಲೆಯ ಅತಿಥಿಗಳೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ತುಣುಕುಗಳನ್ನು ಪೋಣಿಸಿದ್ದೇವೆ.
ನೂರನೆಯ ಸಂಚಿಕೆಯಲ್ಲಿ ಬಹು ವಿಶಿಷ್ಟವಾದ ಅತಿಥಿಯೊಬ್ಬರು ನಮಗೆ ಜೊತೆಯಾಗಲಿದ್ದಾರೆ.
00:00 - Intro
02:53 - From episode 92 with Chidananda rajaghatta
18:35 - Sponsored Ad: Kempu Kannada stories
20:07 - From episode 48 with Vinay Kumar
29:47 - From episode 49 with Vinay Kumar
38:40 - From episode 93 with Rajiv Raghunandan
48:24 - From episode 76 with Vasudhendhra
51:59 - From episode 80 with Mahesh Bhat
56:45 - From episode 26 with Vasant Shetty
Credits: Music: Crescents by Ketsa Licensed under creative commons. Icon made by Freepik from www.flaticon.com
ತಮಗೆ ತಿಳಿಯದ ತಂತ್ರಜ್ಞಾನ, ವಿಜ್ಞಾನದ ಕುರಿತು ಎಲ್ಲರಿಗೂ ಆತಂಕ ಸಹಜ.ಅಣು ವಿಜ್ಞಾನ ಎಂದರೆ ಬಹುತೇಕರಿಗೆ ಕಣ್ಣ ಮುಂದೆ ಬರುವುದು ಅಣು ಬಾಂಬ್, ಇಲ್ಲವೇ ಉಕ್ರೇನಿನ ಚರ್ನೋಬಿಲ್ ಸ್ಥಾವರದ ಅವಘಡ. ಈ ಚಿತ್ರಿಕೆಗಳನ್ನು ಮೀರಿದ ವಾಸ್ತವ ಅಣು ವಿಜ್ಞಾನಕ್ಕಿದೆ. ಮುರಿದ ಮೂಳೆಯ ಎಕ್ಸ್ ರೇ ಮುದ್ರಿಕೆ, ಕ್ಯಾನ್ಸರ್ ಚಿಕಿತ್ಸೆ, ಬೀಜ ಸಂಸ್ಕರಣೆ, ವೈದ್ಯಕೀಯ ಉಪಕರಣಗಳ ಸೋಂಕು ತೆಗೆಯುವಿಕೆ, ಕೈಗಾರಿಕೆಗಳಲ್ಲಿ ದ್ರಾವಣಗಳ ಕಲೆಸುವಿಕೆಯನ್ನು ಅಳೆಯುವುದು, ಲೋಹದಲ್ಲಿನ ಸೂಕ್ಷ್ಮ ಸೀಳುಗಳನ್ನು, ವೆಲ್ಡಿಂಗ್ ಗುಣಮಟ್ಟವನ್ನು ಅಳೆಯುವುದು ಹೀಗೆ ಅಸಂಖ್ಯಾತ ಬಳಕೆಗಳನ್ನು ಅಣು ವಿಜ್ಞಾನ ಹೊಂದಿದೆ.
ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವಲ್ಲಿಯೂ ಪರಮಾಣು ಶಕ್ತಿಯ ಪಾತ್ರ ಬಗ್ಗೆ ಜಾಗತಿಕ ತಾಪಮಾನ ಏರಿಕೆಯ ಸಂದರ್ಭದಲ್ಲಿ ಮಹತ್ವದ್ದಾಗಿದೆ. ಒಂದು ಕಡೆ ಫ್ರಾನ್ಸ್ ತನ್ನ ಶೇ. ೭೦ರಷ್ಟು ವಿದ್ಯುಚ್ಛಕ್ತಿಯನ್ನು ಅಣುಶಕ್ತಿಯಿಂದ ಉತ್ಪಾದಿಸಿದರೆ ಪಕ್ಕದ ಜರ್ಮನಿ ತನ್ನೆಲ್ಲ ಅಣು ಸ್ಥಾವರಗಳನ್ನು ಮುಚ್ಚುವ ತಯಾರಿಯಲ್ಲಿದೆ. ರಷ್ಯಾದ ತೈಲ, ಅನಿಲದ ಮೇಲಿನ ಅವಲಂಬನೆ ಕೈಕಚ್ಚಿರುವಾಗ ತಮ್ಮ ನಿರ್ಧಾರವನ್ನು ಪುನರ್ವಿಮರ್ಶೆಗೆ ಒಡ್ಡಿದ್ದಾರೆ. ಭಾರತದಲ್ಲಿ ಕೇವಲ ಶೇ ೩ ರಷ್ಟು ವಿದ್ಯುಚ್ಛಕ್ತಿ ಅಣು ಸ್ಥಾವರಗಳಿಂದ ಲಭ್ಯವಾಗುತ್ತಿದೆ.
ಅಣು ವಿಜ್ಞಾನದ ಕುರಿತ ಇವೆಲ್ಲ ಮಗ್ಗುಲುಗಳ ಚರ್ಚೆಯನ್ನು ಅರಳಿಕಟ್ಟೆ ಬಾಬಾ ಅಣುವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ವಿಜ್ಞಾನಿ ಡಾ ಎಂ ಎಸ್ ಶ್ರೀನಿವಾಸ ಮೂರ್ತಿಯವರೊಂದಿಗೆ ನಡೆಸಿದೆ. ಚರ್ಚೆಯು ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
Recording date: 20 February 2022
Credits: Music: Crescents by Ketsa Licensed under creative commons. Icon made by Freepik from www.flaticon.com
ತಮಗೆ ತಿಳಿಯದ ತಂತ್ರಜ್ಞಾನ, ವಿಜ್ಞಾನದ ಕುರಿತು ಎಲ್ಲರಿಗೂ ಆತಂಕ ಸಹಜ.ಅಣು ವಿಜ್ಞಾನ ಎಂದರೆ ಬಹುತೇಕರಿಗೆ ಕಣ್ಣ ಮುಂದೆ ಬರುವುದು ಅಣು ಬಾಂಬ್, ಇಲ್ಲವೇ ಉಕ್ರೇನಿನ ಚರ್ನೋಬಿಲ್ ಸ್ಥಾವರದ ಅವಘಡ. ಈ ಚಿತ್ರಿಕೆಗಳನ್ನು ಮೀರಿದ ವಾಸ್ತವ ಅಣು ವಿಜ್ಞಾನಕ್ಕಿದೆ. ಮುರಿದ ಮೂಳೆಯ ಎಕ್ಸ್ ರೇ ಮುದ್ರಿಕೆ, ಕ್ಯಾನ್ಸರ್ ಚಿಕಿತ್ಸೆ, ಬೀಜ ಸಂಸ್ಕರಣೆ, ವೈದ್ಯಕೀಯ ಉಪಕರಣಗಳ ಸೋಂಕು ತೆಗೆಯುವಿಕೆ, ಕೈಗಾರಿಕೆಗಳಲ್ಲಿ ದ್ರಾವಣಗಳ ಕಲೆಸುವಿಕೆಯನ್ನು ಅಳೆಯುವುದು, ಲೋಹದಲ್ಲಿನ ಸೂಕ್ಷ್ಮ ಸೀಳುಗಳನ್ನು, ವೆಲ್ಡಿಂಗ್ ಗುಣಮಟ್ಟವನ್ನು ಅಳೆಯುವುದು ಹೀಗೆ ಅಸಂಖ್ಯಾತ ಬಳಕೆಗಳನ್ನು ಅಣು ವಿಜ್ಞಾನ ಹೊಂದಿದೆ.
ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವಲ್ಲಿಯೂ ಪರಮಾಣು ಶಕ್ತಿಯ ಪಾತ್ರ ಬಗ್ಗೆ ಜಾಗತಿಕ ತಾಪಮಾನ ಏರಿಕೆಯ ಸಂದರ್ಭದಲ್ಲಿ ಮಹತ್ವದ್ದಾಗಿದೆ. ಒಂದು ಕಡೆ ಫ್ರಾನ್ಸ್ ತನ್ನ ಶೇ. ೭೦ರಷ್ಟು ವಿದ್ಯುಚ್ಛಕ್ತಿಯನ್ನು ಅಣುಶಕ್ತಿಯಿಂದ ಉತ್ಪಾದಿಸಿದರೆ ಪಕ್ಕದ ಜರ್ಮನಿ ತನ್ನೆಲ್ಲ ಅಣು ಸ್ಥಾವರಗಳನ್ನು ಮುಚ್ಚುವ ತಯಾರಿಯಲ್ಲಿದೆ. ರಷ್ಯಾದ ತೈಲ, ಅನಿಲದ ಮೇಲಿನ ಅವಲಂಬನೆ ಕೈಕಚ್ಚಿರುವಾಗ ತಮ್ಮ ನಿರ್ಧಾರವನ್ನು ಪುನರ್ವಿಮರ್ಶೆಗೆ ಒಡ್ಡಿದ್ದಾರೆ. ಭಾರತದಲ್ಲಿ ಕೇವಲ ಶೇ ೩ ರಷ್ಟು ವಿದ್ಯುಚ್ಛಕ್ತಿ ಅಣು ಸ್ಥಾವರಗಳಿಂದ ಲಭ್ಯವಾಗುತ್ತಿದೆ.
ಅಣು ವಿಜ್ಞಾನದ ಕುರಿತ ಇವೆಲ್ಲ ಮಗ್ಗುಲುಗಳ ಚರ್ಚೆಯನ್ನು ಅರಳಿಕಟ್ಟೆ ಬಾಬಾ ಅಣುವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ವಿಜ್ಞಾನಿ ಡಾ ಎಂ ಎಸ್ ಶ್ರೀನಿವಾಸ ಮೂರ್ತಿಯವರೊಂದಿಗೆ ನಡೆಸಿದೆ. ಚರ್ಚೆಯು ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಮೊದಲನೆಯ ಭಾಗ ತೊಂಭತ್ತೇಳನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
Recording date: 20 February 2022
Credits: Music: Crescents by Ketsa Licensed under creative commons. Icon made by Freepik from www.flaticon.com
ಭರತ ಮುನಿಯ ನಾಟ್ಯಶಾಸ್ತ್ರದಿಂದ ಹಿಡಿದು, ಇಂದಿನ ಆಧುನಿಕ ರಂಗಭೂಮಿಯವರೆಗೆ ನಾಟಕ ರಂಗ ನಡೆದು ಬಂದ ದಾರಿ ನೇರವಾದುದಲ್ಲ. ಲಿಖಿತ ಇತಿಹಾಸದ ದಾಖಲೆಗಳ ಕೊರತೆಯಿಂದಾಗಿ ನಾವು ರಂಗಭೂಮಿಯ ಉಗಮವನ್ನು ತಿಳಿಯುವುದು ಕಷ್ಟ.
ಕರ್ನಾಟಕದಲ್ಲಿ ಜನಿಸಿದ ಯಕ್ಷಗಾನ ದೊಡ್ಡಾಟ, ಸಣ್ಣಾಟಗಳು ಮುಂಬಯಿಯ ಫಾರ್ಸಿ ರಂಗಭೂಮಿಯನ್ನು ಪ್ರಭಾವಿಸಿದ್ದು, ತದನಂತರ ಇಲ್ಲಿನ ಕಂಪೆನಿ ನಾಟಕಗಳು ಫಾರ್ಸಿ ನಾಟಕಗಳ ಪ್ರಭಾವಕ್ಕೆ ಒಳಗಾಗಿದ್ದು, ಆಧುನಿಕ ರಂಗಭೂಮಿ ಪಾಶ್ಚಾತ್ಯ ಪ್ರಭಾವದಲ್ಲಿ ಬೆಳೆದಿದ್ದು ಹೀಗೆ ಅನೇಕ ಒಳಸುಳಿಗಳಿರುವ ಚರ್ಚೆಗೆ ಜೊತೆಯಾದವರು ಧಾರವಾಡದ ಗೊಂಬೆಮನೆ (ಗೊಂಬೆಯಾಟ ಮತ್ತು ರಂಗ ತರಬೇತಿ ಕೇಂದ್ರ)ಯ ಸ್ಥಾಪಕಿ ರಜನಿ ಗರುಡ.
ಈ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತಾರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
Recording date: 30 January 2022
Credits: Music: Crescents by Ketsa Licensed under creative commons. Icon made by Freepik from www.flaticon.com
ಭರತ ಮುನಿಯ ನಾಟ್ಯಶಾಸ್ತ್ರದಿಂದ ಹಿಡಿದು, ಇಂದಿನ ಆಧುನಿಕ ರಂಗಭೂಮಿಯವರೆಗೆ ನಾಟಕ ರಂಗ ನಡೆದು ಬಂದ ದಾರಿ ನೇರವಾದುದಲ್ಲ. ಲಿಖಿತ ಇತಿಹಾಸದ ದಾಖಲೆಗಳ ಕೊರತೆಯಿಂದಾಗಿ ನಾವು ರಂಗಭೂಮಿಯ ಉಗಮವನ್ನು ತಿಳಿಯುವುದು ಕಷ್ಟ.
ಕರ್ನಾಟಕದಲ್ಲಿ ಜನಿಸಿದ ಯಕ್ಷಗಾನ ದೊಡ್ಡಾಟ, ಸಣ್ಣಾಟಗಳು ಮುಂಬಯಿಯ ಫಾರ್ಸಿ ರಂಗಭೂಮಿಯನ್ನು ಪ್ರಭಾವಿಸಿದ್ದು, ತದನಂತರ ಇಲ್ಲಿನ ಕಂಪೆನಿ ನಾಟಕಗಳು ಫಾರ್ಸಿ ನಾಟಕಗಳ ಪ್ರಭಾವಕ್ಕೆ ಒಳಗಾಗಿದ್ದು, ಆಧುನಿಕ ರಂಗಭೂಮಿ ಪಾಶ್ಚಾತ್ಯ ಪ್ರಭಾವದಲ್ಲಿ ಬೆಳೆದಿದ್ದು ಹೀಗೆ ಅನೇಕ ಒಳಸುಳಿಗಳಿರುವ ಚರ್ಚೆಗೆ ಜೊತೆಯಾದವರು ಧಾರವಾಡದ ಗೊಂಬೆಮನೆ (ಗೊಂಬೆಯಾಟ ಮತ್ತು ರಂಗ ತರಬೇತಿ ಕೇಂದ್ರ)ಯ ಸ್ಥಾಪಕಿ ರಜನಿ ಗರುಡ.
ಈ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಮೊದಲನೆಯ ಭಾಗ ತೊಂಭತ್ತೈದನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
Recording date: 30 January 2022
Credits: Music: Crescents by Ketsa Licensed under creative commons. Icon made by Freepik from www.flaticon.com