
ಈ ಸಂಚಿಕೆಯ ಅತಿಥಿ ಶೃತಿ ಮರುಳಪ್ಪನವರನ್ನು ಟ್ವಿಟರ್ನಲ್ಲಿ ಫಾಲೋ ಮಾಡಬಹುದು.
ಅರಳಿಕಟ್ಟೆಯ ೧೦೨ನೆಯ ಸಂಚಿಕೆಯ ಪ್ರಾಯೋಜಕರು "ಕೇಳಿ ಕಥೆಯ" ಆಡಿಯೋ ಪುಸ್ತಕ. ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಿ.
ನಮ್ಮ ದೇಶ ಗಣತಂತ್ರವಾಗಿ ರಾಜ್ಯಗಳ ನಿರ್ಮಾಣವಾದಂದಿನಿಂದ ಕೆಲವು ರಾಜ್ಯಗಳು ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕಿ ಮುನ್ನಡೆಯುತ್ತಿದ್ದರೆ, ಇನ್ನು ಕೆಲವು ರಾಜ್ಯಗಳು ಅಭಿವೃದ್ಧಿಯ ಎಲ್ಲಾ ಕ್ರಮಾಂಕಗಳಲ್ಲಿ ಹಿಂದುಳಿದಿವೆ.
ಈ ಇಬ್ಬಗೆಯ ಬೆಳವಣಿಗೆಯನ್ನು ಜನಸಂಖ್ಯೆ ನಿಯಂತ್ರಣದ ಕ್ರಮಾಂಕದಲ್ಲಿ ಸ್ಪಷ್ಟವಾಗಿ ಕಾಣಬಹುದು. ದಕ್ಷಿಣ ಭಾರತದ ರಾಜ್ಯಗಳು ಕುಟುಂಬ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತಂದವು ಇದರ ಪರಿಣಾಮವಾಗಿ ಉತ್ತರದ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಜನಸಂಖ್ಯೆ ಕುಂಠಿತವಾಯಿತು. ಜನಸಂಖ್ಯೆಯ ಆಧಾರದಲ್ಲಿ ಸೀಮಾ ನಿರ್ಣಯ ಜಾರಿಗೆ ಬಂದರೆ ಈಗಾಗಲೇ ದುರ್ಬಲವಾಗಿರುವ ರಾಜಕೀಯ ಪ್ರಾತಿನಿಧ್ಯ ಇನ್ನಷ್ಟು ಕ್ಷೀಣಿಸುವ ಅಪಾಯ ಸೃಷ್ಠಿಯಾಯಿತು.
೧೯೭೧ರ ಜನಗಣತಿಯ ಆಧಾರದಲ್ಲಿ ಇಂದಿಗೂ ದೇಶದ ಸಂಸತ್ತಿನಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯ ದೊರೆಯುತ್ತದೆ. ಹೊಸ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಂಡ ಸೀಮಾ ನಿರ್ಣಯ ಯೋಜನೆ ಈಗ ಜಾರಿಗೆ ಬಂದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಎದುರಾಗುವ ಸವಾಲುಗಳೇನು? ನಮ್ಮ ಜನಪ್ರತಿನಿಧಿಗಳಿಗೆ ಈ ಸವಾಲುಗಳ ಅರಿವು ಇದೆಯೇ? ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಮಾನ್ಯ ಪ್ರಜೆಗಳಿಗೆ ಲಭ್ಯವಿರುವ ಅವಕಾಶಗಳೇನು?
ಈ ಪ್ರಶ್ನೆಗಳೊಂದಿಗೆ ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಶೃತಿ ಮರುಳಪ್ಪ. ಬೆಂಗಳೂರಿನ ಖಾಸಗಿ ಐಟಿ ಕಂಪೆನಿಯೊಂದರಲ್ಲಿ ವೃತ್ತಿ ನಿರತರಾದ ಶೃತಿ ತಮ್ಮ ಬಿಡುವಿನಲ್ಲಿ ಕನ್ನಡ ಭಾಷೆ, ಕನ್ನಡಿಗರ ಹಕ್ಕುಗಳ ಕುರಿತ ಹೋರಾಟಗಳಲ್ಲಿ ಪಾಲ್ಗೋಳ್ಳುತ್ತಾರೆ. ಅಮೇರಿಕಾದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಸಂಶೋಧನೆಗೆ ಪ್ರೇರಣಾ ಸಿಂಗ್ ಸಿದ್ಧ ಪಡಿಸಿದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಋತುಮಾನ ಪ್ರಕಾಶನ ಪ್ರಕಟಿಸಿರುವ "ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ" ಪುಸ್ತಕ ನಿಮ್ಮ ನೆಚ್ಚಿನ ಪುಸ್ತಕದ ಅಂಗಡಿಗಳಲ್ಲಿ ಹಾಗೂ ಋತುಮಾನ ಅಂತರ್ಜಾದಲದ ಅಂಗಡಿಯಲ್ಲಿ ಸಹ ಲಭ್ಯವಿದೆ.
00:15 - ದಕ್ಷಿಣ ಭಾರತದಲ್ಲಿ ರಾಜಕೀಯ ಸಾಕ್ಷರತೆ
11:01 - ಆಯೋಗ ಕೆಲಸ ಮಾಡುವುದು ಹೇಗೆ?
14:44 - ರಾಜಕೀಯ ಲೆಕ್ಕಾಚಾರ
16:28 - ಪರಿಣಾಮಗಳು
22:12 - ಅರಿವಿರುವ ರಾಜಕಾರಣಿಗಳು
27:56 - ದಕ್ಷಿಣದ ರಾಜ್ಯಗಳ ಒಗ್ಗಟ್ಟು
31:14 - ಹೋರಾಟದ ಗುರಿ
34:21 - ಪ್ರಾದೇಶಿಕ ಪಕ್ಷದ ಕನಸು
36:27 - ಹಕ್ಕೊತ್ತಾಯದ ಪ್ರೇರಣೆ
Recording date: 18 September 2022
Credits: Music: Crescents by Ketsa Licensed under creative commons. Icon made by Freepik from www.flaticon.com