
ನೀರ ನೆರೆ ತನ್ನೆದುರಿನಣೆಕಟ್ಟನೊಡೆಯುವುದು ।
ಊರನದು ಕೊಚ್ಚುವುದು ಬದಿಯ ಕಟ್ಟದಿರೆ ।।
ಏರಿಗಳನಿಕ್ಕೆಲದಿ ನಿಲಿಸೆ ಹರಿಯುವುದು ಸಮನೆ ।
ಪೌರುಷದ ನದಿಯಂತು – ಮಂಕುತಿಮ್ಮ ।। 535 ।।
ತನ್ನೆದುರಿನಣೆಕಟ್ಟನೊಡೆಯುವುದು – ತನ್ನ+ಎಂದುರಿನ+ಅಣೆಕಟ್ಟನ್ನು+ಒಡೆಯುವುದು, ಊರನದು = ಊರನ್ನು+ಅದು, ಕಟ್ಟದಿರೆ=ಕಟ್ಟದೆ+ಇರೆ, ಏರಿಗಳನಿಕ್ಕೆಲದಿ =ಏರಿಗಳನು+ಇಕ್ಕೆಲದಿ,ನದಿಯಂತು=ನದಿಯು+ಅಂತು,
ನೆರೆ=ಪ್ರವಾಹ, ಬದಿಯ=ಪಕ್ಕದ, ಇಕ್ಕೆಲದಿ=ಎರಡೂ ಕಡೆ, ನಿಲಿಸೆ=ನಿಲ್ಲಿಸಲು, ಪೌರುಷದ=ಶಕ್ತಿಯ