ಕಲೆ, ಇತಿಹಾಸ, ವಿಜ್ಞಾನ, ಆರ್ಥಿಕ ಹಾಗು ಸಾಮಾಜಿಕ ವಿಚಾರಗಳ ಬಗ್ಗೆ ಕಂglishನಲ್ಲಿ ಹೊಂಗೆಮರದಡಿ ಹರಟೆ ಹೊಡೆಯುತ್ತ, ಒಂದಷ್ಟು ತರ್ಲೆ ಮಾಡುತ್ತ, ಅಭಿಪ್ರಾಯಗಳನ್ನು ತಿಳಿಸುತ್ತ, ದೃಷ್ಟಿಕೋನಗಳ ಅನ್ವೇಷಣೆ ಮಾಡುವ ಪ್ರಯತ್ನ.
ಕೇಳಿ ನಮ್ಮ ಹೊಂಗೆಮರದಡಿ ಕನ್ನಡ Podcast - ಅನಾಹತ Org ಪ್ರಸ್ತುತಿ
Exploring ideas around art, history, science, economics, and society under the cool shade of the Honge Tree. Tune into Hongemaradadi Kannada Podcast now. Send us an email to anaahataorg@gmail.com and tell us what you think of the show. Follow us on https://www.instagram.com/kalaparva and visit our blog https://anaahataorg.blogspot.com
All content for Hongemaradadi Kannada Podcast is the property of Anaahata Org and is served directly from their servers
with no modification, redirects, or rehosting. The podcast is not affiliated with or endorsed by Podjoint in any way.
ಕಲೆ, ಇತಿಹಾಸ, ವಿಜ್ಞಾನ, ಆರ್ಥಿಕ ಹಾಗು ಸಾಮಾಜಿಕ ವಿಚಾರಗಳ ಬಗ್ಗೆ ಕಂglishನಲ್ಲಿ ಹೊಂಗೆಮರದಡಿ ಹರಟೆ ಹೊಡೆಯುತ್ತ, ಒಂದಷ್ಟು ತರ್ಲೆ ಮಾಡುತ್ತ, ಅಭಿಪ್ರಾಯಗಳನ್ನು ತಿಳಿಸುತ್ತ, ದೃಷ್ಟಿಕೋನಗಳ ಅನ್ವೇಷಣೆ ಮಾಡುವ ಪ್ರಯತ್ನ.
ಕೇಳಿ ನಮ್ಮ ಹೊಂಗೆಮರದಡಿ ಕನ್ನಡ Podcast - ಅನಾಹತ Org ಪ್ರಸ್ತುತಿ
Exploring ideas around art, history, science, economics, and society under the cool shade of the Honge Tree. Tune into Hongemaradadi Kannada Podcast now. Send us an email to anaahataorg@gmail.com and tell us what you think of the show. Follow us on https://www.instagram.com/kalaparva and visit our blog https://anaahataorg.blogspot.com
S01(Bonus) : Asmithe | ಅಸ್ಮಿತೆ | The Story of a US Marine...
Hongemaradadi Kannada Podcast
4 minutes
4 years ago
S01(Bonus) : Asmithe | ಅಸ್ಮಿತೆ | The Story of a US Marine...
Dedicated to Nicole Gee and thousands of innocent people who lost their life the Afghan War...
Narrated by - Ananya Amar
Translated by - Akshatha Mohan
Edited and Mixed by - Thanmay Bharadwaj J S
Title Designed by - Chandan Vasista
Written & Conceptualised by - Subhash Hebbar
ಸಾಹಿತ್ಯ:
ನಾ ಸೇರಿದೆ ಸೈನ್ಯಕ್ಕೆ, ದೇಶಸೇವೆ ಮಾಡುವ ಹಂಬಲದಿ,
ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ...
ಅರಿವಿರದ ಜನರೊಂದಿಗೆ, ಅರಿವಾಗದ ಸಂಕಲ್ಪ
ಹೋರಾಟ ಮೃಗಗಳೊಂದಿಗೆ, ಆಯುಷ್ಯ ಅಲ್ಪ
ಅಸ್ತಿತ್ವದ ತಿಕ್ಕಾಟದಲಿ, ಅಸ್ಮಿತೆಯ ಶೋಧ
ನನ್ನ ದೇಶದ ರಕ್ಷಣೆಗಂತೆ ಈ ಅಫಗಾನ ಯುದ್ಧ
ನಾ ಸೇರಿದೆ ಸೈನ್ಯಕ್ಕೆ, ದೇಶಸೇವೆ ಮಾಡುವ ಹಂಬಲದಿ,
ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ...
ವರುಷಗಳುರುಳಿದಂತೆ ಧೇಯ ಬದಲಾಯಿತು,
ಜಗವ ತಿದ್ದುವ ಮಹದಾಸೆಯು, ಜೀವ ರಕ್ಷಣೆಗೆ ಬಂದು ನಿಂತಿತು.
ಅಂದು ಭೋರ್ಗರೆದ ತುಪಾಕಿಗೆ ಕಾಬುಲ್ ಕಾಲೂರಿತು
ತುಚ್ಛ ತಾಲಿಬಾನಿಗಳ ಕೇಕೆಯು ಜಗಕೆಲ್ಲ ಕೇಳಿತು
ನಾ ಸೇರಿದೆ ಸೈನ್ಯಕ್ಕೆ, ದೇಶಸೇವೆ ಮಾಡುವ ಹಂಬಲದಿ,
ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ...
ಸಾಧನೆಯ ಭ್ರಮೆ, ಸ್ಮಶಾನ ಮೌನ,
ಈ ಅಧರ್ಮದ ನಡುವಲಿ ಬುದ್ಧನ ಧ್ಯಾನ
ಏರ ಬಯಸುವರು ಈ ಜನರು, ನನ್ನ ದೇಶದ ವಿಮಾನ,
ಕಳೆದುಕೊಂಡಿಹರು ಇವರು ಸಂಪೂರ್ಣ ಸ್ವಾಭಿಮಾನ
ನಾ ಸೇರಿದೆ ಸೈನ್ಯಕ್ಕೆ, ದೇಶಸೇವೆ ಮಾಡುವ ಹಂಬಲದಿ,
ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ...
ಇಪ್ಪತ್ತು ವರ್ಷಗಳ ಯುದ್ಧಕ್ಕೆ ಅಂತ್ಯ
ಇಪ್ಪತ್ತು ಮೂರರ ನನ್ನ ಕಣ್ಣ ಎದುರು
ಮುಜುಗರವಾದರೂ ಇದು ಸತ್ಯ
ಬದಲಾಗಲಿಲ್ಲ ಪರಿಸ್ಥಿತಿ ಒಂಚೂರು
ನಾ ಸೇರಿದೆ ಸೈನ್ಯಕ್ಕೆ, ದೇಶಸೇವೆ ಮಾಡುವ ಹಂಬಲದಿ,
ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ...
ಘೋಷಿಸಿದೆವು ವಿಜಯ, ನ್ಯಾಯ ಕೊಟ್ಟಿಹೆವೆಂಬ ಭ್ರಮೆಯಲಿ,
ಬೇಲಿಯಿಂದಾಚೆ ಮಗುವ ಎಸೆದಳು ತಾಯಿ,ಬದುಕಲಿ ಎಂಬ ಆಸೆಯಲಿ,
ನನ್ನ ಕೈಯಲಾಡುತ್ತಿರುವ ಈ ಕಂದಮ್ಮಿಗೆ ಗೊತ್ತುಂಟೆ ಪವಿತ್ರ ಗ್ರಂಥ?
ಸತ್ತ ಸಮಾಜದಲಿ ಮತಾಚರಣೆಯೆಲ್ಲಿ? ಬದುಕಿಲ್ಲ ಯಾರು ಜೀವಂತ...
ನಾ ಸೇರಿದೆ ಸೈನ್ಯಕ್ಕೆ, ದೇಶಸೇವೆ ಮಾಡುವ ಹಂಬಲದಿ,
ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ...
ಈ ಗೋಜಲಿನಲ್ಲೂ ಎದೆಗುಂದದೆ ಹೋರಾಡಿದೆ,
ಜನರನ್ನು ರಕ್ಷಿಸಿದೆ, ಹೊಸ ಜೀವನ ಕಲ್ಪಿಸಿದೆ,
ಇನ್ನೇನು ಹಾರಿಹೋಗಲಿದೆ ಪ್ರಾಣಪಕ್ಷಿ ನನ್ನಿಂದ
ಉತ್ತರ ಸಿಗದ ಪ್ರಶ್ನೆಗಳ ಹೊತ್ತು, ಗರ್ವದಿಂದ..
ನಾ ಸೇರಿದೆ ಸೈನ್ಯಕ್ಕೆ, ದೇಶಸೇವೆ ಮಾಡುವ ಹಂಬಲದಿ,
ಕಳುಹಿಸಿದರು ಗೊತ್ತಿರದ ಊರಿಗೆ ದೇಶ ಕಟ್ಟುವ ನೆಪದಿ.