Home
Categories
EXPLORE
True Crime
Comedy
Society & Culture
Business
News
Sports
TV & Film
About Us
Contact Us
Copyright
© 2024 PodJoint
00:00 / 00:00
Sign in

or

Don't have an account?
Sign up
Forgot password
https://is1-ssl.mzstatic.com/image/thumb/Podcasts116/v4/ef/65/1d/ef651d18-fdb9-2a55-42b9-d80bc208aa35/mza_12273570740165906032.jpg/600x600bb.jpg
GBnews Kannada Talk News
gbnews kannada
6 episodes
5 days ago
gbnewskannada@gmail.com
Show more...
Daily News
News
RSS
All content for GBnews Kannada Talk News is the property of gbnews kannada and is served directly from their servers with no modification, redirects, or rehosting. The podcast is not affiliated with or endorsed by Podjoint in any way.
gbnewskannada@gmail.com
Show more...
Daily News
News
https://d3t3ozftmdmh3i.cloudfront.net/production/podcast_uploaded/4603889/4603889-1635336481744-d4a39d449475d.jpg
ಗ್ರಾಮ ಪಂಚಾಯತ್ ಚುನಾವಣೆಗೆ ಆಯ್ಕೆ ಮಾಡುವಾಗ ಎಚ್ಚರವಿರಲಿ ಪುಂಡರು ಅಧಿಕಾರ ಹಿಡಿಯದಂತೆ ನೋಡಿಕೊಳ್ಳಿ
GBnews Kannada Talk News
3 minutes 18 seconds
4 years ago
ಗ್ರಾಮ ಪಂಚಾಯತ್ ಚುನಾವಣೆಗೆ ಆಯ್ಕೆ ಮಾಡುವಾಗ ಎಚ್ಚರವಿರಲಿ ಪುಂಡರು ಅಧಿಕಾರ ಹಿಡಿಯದಂತೆ ನೋಡಿಕೊಳ್ಳಿ
ಗ್ರಾಮ‌ ಪಂಚಾಯತ್ ಚುನಾವಣೆ ಎಂಬುದು ಕೆಲವರಿಗೆ ಉಪೇಕ್ಷೆ ಎನ್ನಿಸಬಹುದು. ಆದರೆ, ಪಕ್ಷದ‌ ಚಿನ್ಹೆ ಇಲ್ಲದೇ‌ ನಡೆಯುವ ಈ ಗ್ರಾಮ ಪಂಚಾಯತ್ ಚುನಾವಣೆಗಳೇ ದೇಶ, ರಾಜ್ಯ ಜನರ ಸರ್ವಾಂಗೀಣ ಅಭಿವೃದ್ಧಿಯ ತಳಪಾಯ ಅಂತಲೇ ಹೇಳಬೇಕು. ಯಾಕೆ ಅಂತಾ ಕೇಳೋದಾದರೆ, ನಾವು ಸಂಸತ್ತಿ ಆಯ್ಕೆ ಮಾಡಿ ಕಳುಹಿಸುವ ಸಂಸದರಿರಬಹುದು, ವಿಧಾನಸಭೆಗೆ ಚುನಾಯಿಸಿ ಕಳುಹಿಸುವ ಶಾಸಕರಿರಬಹುದು ಕಾನೂನು ರಚಿಸುತ್ತಾರೆ. ಸರ್ವ ಜನಾಂಗದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಹಂಚಿಕೆ ಮಾಡ್ತಾರೆ. ಹೆಚ್ಚು ಹೆಚ್ಚು ಅನುದಾನ ತಮ್ಮ ಕ್ಷೇತ್ರಕ್ಕೆ ತರುವ ಕೆಲಸ ಮಾಡಬಹುದು. ಆದರೆ, ಸರ್ಕಾರದ ಮಟ್ಟದಲ್ಲಿ ಆಗುವ ನಿರ್ದಾರ- ನಿರ್ಣಯ ಮತ್ತು ಯೋಜನೆಯನ್ನು ಪ್ರತಿಯೊಂದು ಅರ್ಹ ಮನೆ ಮತ್ತು ಅಗತ್ಯವಿರೋ ನಾಗರಿಕನರಿಗೆ ತಲುಪಿಸುವ ಕೆಲಸ ಮಾಡುವುದು ಸ್ಥಳೀಯ ಜನ ಪ್ರತಿನಿಧಿಗಳು. ಈ ಕಾರಣಕ್ಕೆ ಇಲ್ಲಿ ಆಯ್ಕೆ ಆಗುವ ವ್ಯಕ್ತಿ ಒಂದು ಪಕ್ಷಕ್ಕೆ ಸೀಮಿತ ಆಗಬಾರದು ಹಾಗೂ ಚುನಾವಣೆ ನೆಪದಲ್ಲಿ ಮನಸ್ಸು ಹಾಳಾಗಬಾರದು ಅಂತಾನೆ ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಚಿನ್ಹೆ ಅಡಿ ಚುನಾವಣೆ ನಡೆಯುವುದುದಿಲ್ಲ.‌ ಇದಿಷ್ಟು ಗ್ರಾಪಂ ಚುನಾವಣೆಯ ಪ್ರಾಮುಖ್ಯತೆ. ಈ ಕಾರಣಕ್ಕೆ ಜನರು ಗ್ರಾಪಂ ಚುನಾವಣೆಯಲ್ಲಿ ಜಾತಿ-ಧರ್ಮ, ಹೆಂಡ- ಖಂಡದ ಜೊತೆಗೆ ಸಂಬಂಧಗಳನ್ನು ನೋಡಿ ಓಟ್ ಮಾಡಬಾರದು. ಬದಲಾಗಿ ಅಭ್ಯರ್ಥಿ ಏನು ಮಾಡಿದ್ದಾನೆ. ಒಂದೊಮ್ಮೆ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರೆ ಏನು ಮಾಡಬಹುದು ಅಂತಾ ಯೋಚಿಸಿ ಮತ ಹಾಕುವ ಅಗತ್ಯ ಇದೆ. ಆದರೆ, ದುರಂತ ಎಂದರೆ ಬಹುತೇಕ ಕಡೆ ಗ್ರಾಮ‌ ಪಂಚಾಯತ್ ಗೆ ಇಸ್ಪೀಟ್ ಅಡ್ಡದಲ್ಲಿ ಕಾಲ ಕಳೆಯುವವವರು, ಉಡಾಳರು, ಸದಸ್ಯ ಆಗುವುದನ್ನೇ ಉದ್ಯೋಗ ಮಾಡಿಕೊಳ್ಳುವವರೇ ಸ್ಥಳೀಯ ಪ್ರತಿನಿಧಿ ಆಗ್ತಿರೋದು ದುರಂತ.‌ ಆದರೆ, ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಯುವಕರು, ವಿದ್ಯಾವಂತರು ಕಣದಲ್ಲಿರೋದು ಒಳ್ಳೆಯ ಬೆಳವಣಿಗೆ. ಈ ಕಾರಣಕ್ಕೆ ಗ್ರಾಪಂ ಚುನಾವಣೆಯಲ್ಲಿ ನಮ್ಮ ಆಯ್ಕೆ ದುಡಿದು ತಿನ್ನುವುದರಲ್ಲಿ‌ ನಂಬಿಕೆ ಇಟ್ಟಿರುವ ವ್ಯಕ್ತಿ ಆಗಬೇಕು. ಜೊತೆಗೆ ‌ಗ್ರಾಪಂ ಸದಸ್ಯ ಎಂದರೆ ಸೇವೆ ಮಾಡುವ, ತನ್ನ ವಾರ್ಡ್ ಮತದಾರರಿಗೆ ಸರಕಾರ ಎಲ್ಲ ಇಲಾಖೆಯಲ್ಲಿನ ಯೋಜನೆ ಬಗ್ಗೆ ಮಾಹಿತಿ ನೀಡುವ, ಗ್ರಾಮ ಪಂಚಾಯತ್ ನಿಂದ ಅನುಷ್ಠಾನಗೊಳ್ಳುವ ಯೋಜನೆಯನ್ನು ಅರ್ಹರಿಗೆ ಮನೆಗೆ ತಲುಪಿಸುವ ವ್ಯಕ್ತಿ ನಮ್ಮ ಆಯ್ಕೆ ಆಗಬೇಕು. ಇದೇ ನಿಜವಾದ ಗ್ರಾಮ ಭಾರತ
GBnews Kannada Talk News
gbnewskannada@gmail.com