All content for Dr Balakrishna Maddodi is the property of Balakrishna Maddodi and is served directly from their servers
with no modification, redirects, or rehosting. The podcast is not affiliated with or endorsed by Podjoint in any way.
Menu
ಬಾಲಸಂಸ್ಕಾರ > ಶಿಕ್ಷಕರು > ಶಿಕ್ಷಣ ಹೇಗಿರಬೇಕು? > ಶಿಕ್ಷಣವು ಹೇಗಿರಬೇಕು ?
ಶಿಕ್ಷಣವು ಹೇಗಿರಬೇಕು ?
ಕ್ಷಾತ್ರ ಹಾಗೂ ಬ್ರಾಹ್ಮ ತೇಜವನ್ನು ನಿರ್ಮಿಸುವ ಶಿಕ್ಷಣವೇ ನಿಜವಾದ ಶಿಕ್ಷಣ
ತರುಣರಿಗೆ ಕಡ್ಡಾಯವಾಗಿ ಸೈನ್ಯದ ತರಬೇತಿಯೊಂದಿಗೆ ಸಂತರ, ದೇಶಭಕ್ತರ ಹಾಗೂ ಕ್ರಾಂತಿಕಾರರ ಜೀವನ ಚರಿತ್ರೆಗಳನ್ನು ಅಧ್ಯಯನಕ್ಕಾಗಿ ನೀಡಿದಲ್ಲಿ ಅವರಿಗೆ ದೇಶಕ್ಕಾಗಿ ಜೀವಿಸಲು ಹಾಗೂ ಪ್ರಾಣಾರ್ಪಣೆ ಮಾಡಲು ಸ್ಪೂರ್ತಿ ದೊರೆಯುತ್ತದೆ.ಶಿಕ್ಷಣವು ಹೇಗಿರಬೇಕು ಎಂಬುದರ ವಿಚಾರ ಹಾಗೂ ಪೂರಕ ಕೃತಿ ಅವಶ್ಯಕವಾಗಿದೆ. ಭಾರತದಲ್ಲಿ ಆಗಿಹೋದ ಕ್ರಾಂತಿಕಾರರು, ಸಂತರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ಹುತಾತ್ಮರಾದ ದೇಶಭಕ್ತರು, ಶಾಸ್ತ್ರಜ್ಞರು, ಸಮಾಜೋದ್ಧಾರಕರು, ಸಮಾಜದ ಉತ್ಥಾನಕ್ಕಾಗಿ ಸಂಘಟನೆಯನ್ನು ನಿರ್ಮಿಸಲು ತಮ್ಮ ಜೀವನವನ್ನು ಸವೆಸಿದವರು, ಇವರೆಲ್ಲರ ಜೀವನ ಚರಿತ್ರೆಯು ಯುವಪೀಳಿಗೆಯ ಹಾಗೂ ಮಕ್ಕಳ ಪಠ್ಯಕ್ರಮದ ಭಾಗವಾಗಲೇಬೇಕು. ಮಕ್ಕಳಿಗೆ ಕಡ್ಡಾಯವಾಗಿ ೨ ವರ್ಷಗಳ ಸೈನ್ಯದ ತರಬೇತಿ ಇರಬೇಕು. ಸಂತರು ರಚಿಸಿದ ಗ್ರಂಥಗಳನ್ನು ಮಕ್ಕಳ ಅಧ್ಯಯನದಲ್ಲಿ ಸೇರಿಸಬೇಕು. ತರುಣರಿಗೆ ಭಗತಸಿಂಗ, ರಾಜಗುರು, ಸುಖದೇವ, ವಾಸುದೇವ ಬಲವಂತ ಫಡಕೆ ಹಾಗೂ ಸ್ವಾ. ಸಾವರಕರರ ಎಲ್ಲ ಕಥೆಗಳು ತಿಳಿದಿರಬೇಕು