Home
Categories
EXPLORE
True Crime
Comedy
Society & Culture
Business
TV & Film
Sports
Health & Fitness
About Us
Contact Us
Copyright
© 2024 PodJoint
00:00 / 00:00
Sign in

or

Don't have an account?
Sign up
Forgot password
https://is1-ssl.mzstatic.com/image/thumb/Podcasts125/v4/be/68/5f/be685fbd-e02e-fce2-e791-e633fde12cc5/mza_1778031562347062926.jpg/600x600bb.jpg
Dr Balakrishna Maddodi
Balakrishna Maddodi
278 episodes
3 days ago
Hi Listen and give ur feedback 🙏🙏💓😍
Show more...
Books
Arts
RSS
All content for Dr Balakrishna Maddodi is the property of Balakrishna Maddodi and is served directly from their servers with no modification, redirects, or rehosting. The podcast is not affiliated with or endorsed by Podjoint in any way.
Hi Listen and give ur feedback 🙏🙏💓😍
Show more...
Books
Arts
https://d3t3ozftmdmh3i.cloudfront.net/production/podcast_uploaded_episode/4825056/4825056-1666631959220-1f666978ed848.jpg
ಅಡಿಕೆ ಗಾತ್ರದಲ್ಲಿ ಪುಟ್ಟದಾಗಿದ್ದರೂ ಆರೋಗ್ಯ ಸುಧಾರಣೆಗೆ ವಿಶೇಷವಾಗಿ ಸಹಾಯ ಮಡುವುದು.
Dr Balakrishna Maddodi
5 minutes 58 seconds
3 years ago
ಅಡಿಕೆ ಗಾತ್ರದಲ್ಲಿ ಪುಟ್ಟದಾಗಿದ್ದರೂ ಆರೋಗ್ಯ ಸುಧಾರಣೆಗೆ ವಿಶೇಷವಾಗಿ ಸಹಾಯ ಮಡುವುದು.
ಅಡಿಕೆ ಗಾತ್ರದಲ್ಲಿ ಪುಟ್ಟದಾಗಿದ್ದರೂ ಆರೋಗ್ಯ ಸುಧಾರಣೆಗೆ ವಿಶೇಷವಾಗಿ ಸಹಾಯ ಮಡುವುದು. ಅಡಿಕೆಯನ್ನು ಬಳಸಿ ಸಾಕಷ್ಟು ಅನಾರೋಗ್ಯಗಳನ್ನು ಗುಣಪಡಿಸಬಹುದು. ಇತ್ತೀಚೆಗೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಬಹುದು ಎನ್ನುವುದನ್ನು ಸಂಶೋಧಿಸಲಾಗಿದೆ. ಅಡಿಕೆಯಿಂದ ಚಹಾ ತಯಾರಿಸಿ ಕುಡಿಯಬಹುದು. ಅದು ಸಹ ಆರೋಗ್ಯಕ್ಕೆ ಉತ್ತಮ ಔಷಧಿ. ಸಾಮಾನ್ಯವಾಗಿ ಊಟ ಆದ ಬಳಿಕ ವೀಳ್ಯದೆಲೆ -ಅಡಿಕೆ ತಿನ್ನುತ್ತಾರೆ. ಆದರೆ ಬಹುತೇಕರು ಇದೊಂದು ಸಂಪ್ರದಾಯ ಎಂದು ನಂಬಿಕೊಂಡು ಇದನ್ನು ಸೇವಿಸುತ್ತಾ ಬಂದಿದ್ದಾರೆ. ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಊಟ ಆದ ಬಳಿಕ ಎಲೆ, ಅಡಿಕೆ, ಸುಣ್ಣ ತುಂಬಿದ ಹರಿವಾಣವು ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ಮಧ್ಯಾಹ್ನ ಊಟ ಆದ ಬಳಿಕ ಎಲ್ಲರೂ ಕುಳಿತುಕೊಂಡು ಅಡಿಕೆ ಮತ್ತು ಎಲೆಗೆ ಕೊಂಚ ಸುಣ್ಣ ಬೆರೆಸಿ ಸೇವಿಸುತ್ತಾರೆ. ಅಂದಹಾಗೆಯೇ ಇದು ಒಗ್ಗಟ್ಟಿನ ಸಂಕೇತವೂ ಆಗಿದೆ. ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ. ಭಾರತದಲ್ಲಿ ಮೊಟ್ಟ ಮೊದಲು ಶಿವಮೊಗ್ಗದ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಅಡಿಕೆಯನ್ನ ಕಾಳು ಮೆಣಸು ಬೆಳೆಯಲು ಬೆಳೆಸಲಾಯಿತು. ಇಲ್ಲಿ ಅಡಿಕೆ ಬಹಳ ಪ್ರಸಿದ್ಧವಾದ ಉತ್ತಮ ತಳಿ ಹಾಗೂ ಅಧಿಕ ಇಳುವರಿ ಬರುವ ಮರಗಳು ಇಲ್ಲಿವೆ.ಮಲೆನಾಡು ಅಡಿಕೆ ಗೆ ಸಾಟಿ ಮಲೆನಾಡಿನ ಅಡಿಕೆಯೇ.ಇದು ನಮ್ಮ ಕ್ಷೇತ್ರ ಇದು ನಮ್ಮ ಹೆಮ್ಮೆ. 1)ಮಧುಮೇಹ ಇರುವವರಲ್ಲಿ ಆಗಾಗ ಬಾಯಿ ಒಣಗುವುದು, ಬಾಯಲ್ಲಿ ಅತಿಯಾದ ದುರ್ಗಂಧ ಮತ್ತು ಕೆಟ್ಟ ಉಸಿರು ಉಂಟಾಗುವುದು. ಇಂತಹ ಸಮಸ್ಯೆಗಳಿಗೆ ಅಡಿಕೆ ಉತ್ತಮ ಪರಿಹಾರ ನೀಡುವುದು. ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಳ್ಳುವುದು ಅಥವಾ ಅಗೆಯುತ್ತಿರುವುದರಿಂದ ಅಧಿಕ ಲಾಲಾರಸ ಉತ್ಪತ್ತಿ ಆಗುವುದು. ಜೊತೆಗೆ ಬಾಯಿಂದ ಬರುವ ವಾಸನೆಯನ್ನು ತಡೆಯುವುದು. ಅಡಿಕೆಯಿಂದ ಬಾಯಿಗೆ ಸಂಬಂಧಿಸಿದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಸಹ ತಡೆಯಬಹುದು. 2)ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗ ರಕ್ತ ಹೀನತೆ ಉಂಟಾಗುವುದು. ಅಪೌಷ್ಟಿಕ ಹಾಗೂ ಅಸಮತೋಲನದಿಂದ ಕೂಡಿರುವ ಆಹಾರ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದು. ಅಡಿಕೆಯನ್ನು ಸೇವಿಸುವುದರಿಂದ ರಕ್ತ ಹೀನತೆ ಹಾಗೂ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದನ್ನು ಸುಲಭವಾಗಿ ತಡೆಯಬಹುದು. 3)ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಂಡು ರಸವನ್ನು ನುಂಗುತ್ತಿರಬೇಕು. ಇದರಿಂದ ಅಜೀರ್ಣ ಸಮಸ್ಯೆಯು ಸುಧಾರಣೆ ಕಾಣುವುದು. ಸುಧಾರಿತ ಜೀರ್ಣ ಕ್ರಿಯೆಯು ಮಲಬದ್ಧತೆ ಉಂಟಾಗುವುದನ್ನು ತಡೆಯುವುದು 4)ಪುಡಿ ಅಥವಾ ಸುಟ್ಟ ಭಸ್ಮ ದಲ್ಲಿ ಹಲ್ಲುಗಳನ್ನು ಮಸಾಜ್ ಮಾಡುವುದರಿಂದ ಹಲ್ಲಿನ ರೋಗಗಳು ವಾಸಿಯಾಗುತ್ತವೆ ಮತ್ತು ನೋವು ಕೂಡ ವಾಸಿಯಾಗುತ್ತದೆ. 5)ಹಸಿರು ಅಡಿಕೆ ಬೇಯಿಸಿ, ನಂತರ ಅಡಿಕೆಯನ್ನು ಕತ್ತರಿಸಿ ತಿನ್ನಿರಿ. ಇದರಿಂದ ಅತಿಸಾರದ ಸಮಸ್ಯೆ ದೂರವಾಗುತ್ತದೆ. 6)ಕಷಾಯವನ್ನು ಕುಡಿಯುವುದರಿಂದ ಅಥವಾ ಅಡಿಕೆ ಪುಡಿಗೆ ಬೆಣ್ಣೆಯನ್ನು ಸೇರಿಸಿ ತಿನ್ನುವುದರಿಂದ ಹೊಟ್ಟೆಯಲ್ಲಿ ಯಾವುದೇ ಹುಳುಗಳು ಸೃಷ್ಟಿಯಾಗುವುದಿಲ್ಲ. 7)ಅಡಿಕೆ ಪುಡಿಯನ್ನು ಅರಿಶಿನ ಬೆಲ್ಲ ಸೇರಿಸಿ ತಿನ್ನುವುದರಿಂದ ವಾಂತಿ ನಿಲ್ಲುತ್ತದೆ. 8)ಅಡಿಕೆ ಬೇಯಿಸಿದ ನೀರು (ಚೊಗರು) ಹತ್ತಿಯಲ್ಲಿ ನೆನೆಸಿ ಲೇಪಿಸುವುದರಿಂದ ಸರ್ಪಸುತ್ತು ಗುಣವಾಗುತ್ತದೆ. 9)ಅಡಿಕೆ ಸುಟ್ಟು ಭಸ್ಮ ವನ್ನು ಎಳ್ಳೆಣ್ಣೆ ಅಥವಾ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ ಹಚ್ಚಿದರೆ ಕಜ್ಜಿ ತುರಿ ಗುಣವಾಗುತ್ತದೆ. 10) ಕೆಲವರಿಗೆ ಅಡಿಕೆ ತಿಂದರೆ ಮದ ಬರುತ್ತದೆ. ಇದಕ್ಕೆ ಬೆಲ್ಲ ತಿಂದು ನೀರು ಕುಡಿಯುವುದರಿಂದ ಗುಣವಾಗುತ್ತದೆ. 11) ಅಡಿಕೆ ಹಿಂಗಾರದಿಂದ ಮಾಡಿದ ಲೇಹ್ಯ ಆರೋಗ್ಯಕ್ಕೆ ಒಳ್ಳೆಯದು. 11)ಪ್ರತಿದಿನ ಅಡಿಕೆ ಒಂದನ್ನೆ ಅಂದರೆ ವಿಳ್ಯದೆಲೆ ಇಲ್ಲದೆ ತಿನ್ನುವುದರಿಂದ ತುಟಿ ಬಿಳಿಚುತ್ತದೆ ಮತ್ತು ಕಾಮಾಲೆ ಗೆ ಕಾರಣ ವಾಗುತ್ತದೆ. 12) ಸ್ನಾನದ ಸೋಪಿನಲ್ಲಿ ಅಡಿಕೆ ಪುಡಿಯನ್ನೂ ಉಪಯೋಗಿಸಿರುತರೆ
Dr Balakrishna Maddodi
Hi Listen and give ur feedback 🙏🙏💓😍